Advertisement

ಆರೋಗ್ಯ ವೃದ್ಧಿಗೆ ತುಳಸಿ

11:50 AM Oct 12, 2020 | mahesh |

ಭಾರತೀಯ ಪರಂಪರೆಯಲ್ಲಿ ತುಳಸಿ ಶ್ರೇಷ್ಠ ಸ್ಥಾನವನ್ನು ಹೊಂದಿದೆ. ಹಾಗಾಗಿಯೇ ಮುಕ್ಕೋಟಿ ದೇವತೆ ನೆಲೆಸಿದೆ ಎಂದು ನಂಬಲಾಗಿರುವ ತುಳಸಿ ಕೇವಲ ನಂಬಿಕೆಯ ಭಾಗವಾಗಿ ಮಾತ್ರವಿರದೆ ಅದರೊಂದಿಗೆ ದೇಹದ ಆರೋಗ್ಯ ವೃದ್ಧಿಗೂ ಉಪಯುಕ್ತವಾಗುವ ಹಲವಾರು ಪೋಷಕಾಂಶಗಳು ಇದರಲ್ಲಿ ಕಾಣಬಹುದು. ಇದರಲ್ಲಿ ಹಲವಾರು ಅದ್ಭುತ ಔಷಧೀಯ ಗುಣಗಳಿರುವುದನ್ನು ಕಾಣಬಹುದು. ತುಳಸಿಯ ಬೇರು, ಬೀಜ, ಎಲೆ ಎಲ್ಲ ಅಂಶವು ನೈಸರ್ಗಿಕ ಪೋಷಣೆಯನ್ನು ಹೊಂದಿವೆ. ವಿಟಮಿನ್‌ ಎ, ಸಿ, ಕ್ಯಾಲ್ಸಿಯಂ, ಕಬ್ಬಿಣಾಂಶ ಅಪಾರ ಪ್ರಮಾಣದಲ್ಲಿದ್ದು,ಹಲವಾರು ರೋಗಗಳಿಗೆ ಇದೊಂದು ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ.

Advertisement

ದುರ್ವಾಸನೆ ನಿವಾರಣೆ
ಸಿಕ್ಕ ಸಿಕ್ಕ ಆಹಾರ ಬಾಯಿಯ ದುರ್ವಾಸನೆಗೂ ಕಾರಣವಾಗಿ ಸಾರ್ವಜನಿಕ ವ್ಯವಹಾರ, ಮುಕ್ತ ಚರ್ಚೆಯಲ್ಲಿ ನಮ್ಮನ್ನು ತೋಡಗುವಾಗ ಮುಜುಗರಕ್ಕೆ ಎಡೆಮಾಡಿಕೊಡುತ್ತದೆ. ಈ ಕಾರಣದಿಂದ ದಿನಾ ತುಳಸಿ ಎಲೆಯನ್ನು ಜಗಿಯುತ್ತಿದ್ದರೆ ಬಾಯಿಯ ದುರ್ವಾಸನೆ ಇರಲಾರದು.

ಡಯಾಬಿಟಿಸ್‌ ನಿಯಂತ್ರಣ
ತುಳಸಿ ಗಿಡದ ರಸವನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಸಾಧ್ಯವಿದೆ. ಇದು ದೇಹದಲ್ಲಿ ಇನ್ಸುಲಿನ್‌ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ತುಳಸಿ ಎಲೆಯನ್ನು ಒಣಗಿಸಿ ಪುಡಿಯ ರೂಪದಲ್ಲಿ ಅಥವಾ ಹಾಗೆಯೇ ರಸವನ್ನು ಕೂಡಾ ಸೇವನೆ ಮಾಡಿ ಸಕ್ಕರೆ ಕಾಯಿಲೆಗೆ ಪರಿಹಾರ ಕಂಡುಕೊಳ್ಳಬಹುದು. ಹೀಗೆ ಮಾಡುವುದರಿಂದ ದೇಹದಲ್ಲಿರುವ ಇನ್ಸುಲಿನ್‌ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.

ಹಲ್ಲಿನ ಸಮಸ್ಯೆ ನಿವಾರಣೆಗೆ
ಹಲ್ಲು ನೋವು, ಬಾತುವುದು, ಹಲ್ಲುಕುಳಿ ನೋವು ಮುಂತಾದ ಸಮಸ್ಯೆ ನಿವಾರಣಗೆ ತುಳಸಿ ರಸವನ್ನು ಉಪಯೋಗಿಸಬೇಕು. ತುಳಸಿ ಎಲೆಯನ್ನು ಒಣಗಿಸಿ ಪುಡಿ ಮಾಡಿ ಬಳಸಬಹುದು ಇಲ್ಲವೆ ರಸವನ್ನು ಹಾಗೆಯೇ ಕೂಡ ಬಳಸಬಹುದು. ಎಲೆಗೆ ಉಪ್ಪು, ಸಾಸಿವೆ ಎಣ್ಣೆಯನ್ನು ಬಳಸಿ ಪೇಸ್ಟ್‌ ರೂಪದಲ್ಲಿ ಕೂಡ ಉಪಯೋಗಿಸುವುದು ಹಲ್ಲಿನ ಸಮಸ್ಯೆ ನಿವಾರಿಸಲು ಸಾಧ್ಯವಾಗಿದೆ.

ಅಜೀರ್ಣ ಸಮಸ್ಯೆ ನಿಯಂತ್ರಣಕ್ಕೆ
ಜೀರ್ಣ ಶಕ್ತಿ ಮಾನವ ದೇಹದಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದು ಉತ್ತಮ ಜೀರ್ಣಕ್ರಿಯೆಯಿಂದ ದೇಹವು ಆರೋಗ್ಯಪೂರ್ಣವಾಗಿರಲು ಸಾಧ್ಯ. ತುಳಸಿ ಎಲೆಗೆ ಜೇನುತುಪ್ಪ ಬೇರೆಸಿ ಸೇವಿಸುವುದು, ಎಲೆಯನ್ನು ನೀರಿನಲ್ಲಿ ಕುದಿಸಿ ಕೂಡಾ ನೀವು ತುಳಸಿಯ ಪೋಷಕಾಂಶಗಳನ್ನು ಸೇವಿಸಬಹುದಾಗಿದೆ. ಕಣ್ಣು, ಗಾಯಗಳಿಗೂ ತುಳಸಿ ಉತ್ತಮ.

Advertisement

-ರಾಧಿಕಾ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next