ಜಲಂಧರ್: ತನ್ನ ಜಾತಕದಲ್ಲಿರುವ ದೋಷ ಪರಿಹಾರಕ್ಕಾಗಿ ಶಿಕ್ಷಕಿಯೊಬ್ಬರು ತನ್ನ 13 ವರ್ಷದ ವಿದ್ಯಾರ್ಥಿಯನ್ನೇ ವಿವಾಹವಾದ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ.
ಜಲಂಧರ್ ನ ಬಸ್ತಿ ಬಾವ ಖೇಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿಯು ತನ್ನ ಮನೆಗೆ ಟ್ಯೂಶನ್ ಗೆಂದು ಬರುತ್ತಿದ್ದ ಬಾಲಕನನ್ನೇ ವಿವಾಹವಾಗಿದ್ದಾರೆ.
ಶಿಕ್ಷಕಿಯ ಜಾತಕದಲ್ಲಿ ‘ಮಂಗಳ ದೋಷ’ ಕಂಡುಬಂದಿತ್ತು. ಹೀಗಾಗಿ ಆಕೆಯ ವಿವಾಹ ನಿಶ್ಷಯವಾಗುವುದು ಮುಂದೂಡಿಕೆಯಾಗುತ್ತಿತ್ತು. ಹೀಗಾಗಿ ಈ ದೋಷ ಪರಿಹಾರಕ್ಕಾಗಿ ಅಪ್ರಾಪ್ತ ವಯಸ್ಕ ಬಾಲಕನೊಂದಿಗೆ ಸಾಂಕೇತಿಕ ವಿವಾಹವಾಗಬೇಕು ಎಂದು ಜ್ಯೋತಿಷಿಯೊಬ್ಬರು ಸಲಹೆ ನೀಡಿದ್ದರು.
ಈ ಸಾಂಕೇತಿಕ ವಿವಾಹಕ್ಕೆ ಟ್ಯೂಶನ್ ಟೀಚರ್ ತನ್ನ ಮನೆಗೆ ಪಾಠಕ್ಕಾಗಿ ಬರುತ್ತಿದ್ದ 13 ವರ್ಷದ ಬಾಲಕನನ್ನು ಆಯ್ಕೆ ಮಾಡಿಕೊಂಡಿದ್ದರು. ಟ್ಯೂಶನ್ ಗಾಗಿ ಬಾಲಕ ಒಂದು ವಾರಗಳಳ ಕಾಲ ತನ್ನ ಮನೆಯಲ್ಲಿಯೇ ಇರಬೇಕು ಎಂದು ಆತನ ಮನೆಯವರಿಗೆ ಹೇಳಿ ಒಪ್ಪಿಸಿದ್ದರು.
ಇದನ್ನೂ ಓದಿ:ಬಸ್ ನ ಬ್ರೇಕ್ ವೈಫಲ್ಯವಾದರೂ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ
ವಾರದ ಬಳಿಕ ಬಾಲಕ ತನ್ನ ಮನೆಗೆ ಹೋದಾಗ ನಡೆದ ವಿಚಾರವನ್ನೆಲ್ಲಾ ಪೋಷಕರಿಗೆ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಲಕನ ಪೋಷಕರು ಕೂಡಲೇ ಬಸ್ತಿ ಬಾವ ಖೇಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಶಿಕ್ಷಕಿಯ ಮನೆಯವರು ಒತ್ತಾಯಪೂರ್ವಕವಾಗಿ ತಮ್ಮ ಮಗನಿಗೆ ಮದುವೆ ಮಾಡಿದ್ದಾರೆ. ಅಲ್ಲದೆ ಹಳದಿ- ಮೆಹಂದಿ, ಪ್ರಸ್ಥ ಕಾರ್ಯಕ್ರಮದಲ್ಲೂ ಭಾಗಿಯಾಗುವಂತೆ ಮಾಡಿದ್ದಾರೆ. ನಂತರ ಶಿಕ್ಷಕಿ ತಮ್ಮ ಕೈ ಬಳೆ ಒಡೆದು ವಿಧವೆಯೆಂದು ಘೋಷಣೆ ಮಾಡಿಕೊಂಡಿದ್ದಾರೆ. ಬಳಿಕ ಕುಟುಂಬಿಕರು ಶೋಕಾಚರಣೆಯನ್ನೂ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 20 ಕಿಲೋಮೀಟರ್ ಗೂ ಹೆಚ್ಚು ದೂರ ಹಿಮ್ಮುಖವಾಗಿ ಚಲಿಸಿದ ರೈಲು: ತಪ್ಪಿದ ಭಾರಿ ದುರಂತ
ಮದುವೆ ಕಾರ್ಯಕ್ರಮದ ಬಳಿಕ ಬಾಲಕನಿಗೆ ಮನೆಗೆಲಸ ಮಾಡಲು ಒತ್ತಾಯಿಸಲಾಗಿತ್ತು ಎಂದು ದೂರಲಾಗಿದೆ. ಶಿಕ್ಷಕಿಯು ನಂತರ ಬಾಲಕನ ಮನೆಯವರಿಗೆ ದೂರು ಹಿಂಪಡೆಯಲು ಒತ್ತಡ ಹಾಕಿದ್ದಾರೆ.
ಈ ಬಗ್ಗೆ ಸ್ಥಳೀಯ ಠಾಣಾಧಿಕಾರಿ ಗಗನ್ ದೀಪ್ ಸಿಂಗ್ ಸೆಖೋನ್ ಮಾಹಿತಿ ನೀಡಿದ್ದು, ಬಾಲಕನ ಮನೆಯವರು ದೂರು ನೀಡಿದ್ದರು. ಆದರೆ ನಂತರ ಎರಡು ಕಡೆಯವರು ಮಾತುಕತೆ ನಡೆಸಿದ್ದು, ದೂರನ್ನು ಹಿಂಪಡೆಯಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಕುಸ್ತಿ ಕೂಟದಲ್ಲಿ ಒಂದು ಅಂಕದಿಂದ ಸೋಲು: ಮನನೊಂದ ಗೀತಾ ಪೋಗಟ್ ಸಹೋದರಿ ಆತ್ಮಹತ್ಯೆ!