ಕಾಸರಗೋಡು: ಪ್ರತಿಷ್ಠೆಯ ಕಣವಾಗಿರುವ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ ಖಚಿತವಾಗಿದೆ.
ಬಿಜೆಪಿಯ ಸಿಟ್ಟಿಂಗ್ ಸೀಟು ಆಗಿರುವ ನೇಮಂನಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಮಾಜಿ ಶಾಸಕ ಶಿವನ್ ಕುಟ್ಟಿ, ಕಾಂಗ್ರೆಸ್‌ನಿಂದ ಹಿರಿಯ ನೇತಾರ, ವಡಗರ ಸಂಸದ ಕೆ.ಮುರಳೀಧರನ್ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಮೀಜೋರಾಂನ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ಸ್ಪರ್ಧಿಸುತ್ತಿದ್ದಾರೆ. ಘಟಾನುಘಟಿಗಳೇ ಈ ಕ್ಷೇತ್ರದಲ್ಲಿ ಕಣಕ್ಕಿಳಿದಿರುವುದರಿಂದ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುವುದು ಖಚಿತವಾಗಿದೆ.
ಬಿಜೆಪಿಗೆ ಕೇರಳ ರಾಜ್ಯದಲ್ಲಿ ಪ್ರಪ್ರಥಮ ಶಾಸಕನನ್ನು ಗೆಲ್ಲಿಸಿಕೊಟ್ಟ ನೇಮಂ ಕ್ಷೇತ್ರವು ಈ ಬಾರಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಪರಿವರ್ತನೆಗೊಂಡಿದೆ. ಬಿಜೆಪಿಯ ಹಿರಿಯ ನೇತಾರ ಒ.ರಾಜಗೋಪಾಲ್ 2016 ರಲ್ಲಿ ನೇಮಂನಿಂದ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ :ಕೇರಳ ಚುನಾವಣೆ : ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಸುಧಾಕರನ್ ರಾಜೀನಾಮೆ ಬೆದರಿಕೆ
ಬಿಜೆಪಿಯ ಪ್ರತಿಷ್ಠೆಯ ಕ್ಷೇತ್ರವನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಸಿಪಿಎಂ ಮತ್ತು ಕಾಂಗ್ರೆಸ್ ಈ ಕ್ಷೇತ್ರವನ್ನು ಬಿಜೆಪಿಯಿಂದ ಕಸಿದುಕೊಳ್ಳಲು ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳು ಘಟಾನುಘಟಿಗಳನ್ನೇ ಕಣಕ್ಕಿಳಿಸಿದೆ.