Advertisement
– ಹೀಗೆ ಹೇಳಿ ಸುಮ್ಮನಾದರು ನಿರ್ದೇಶಕ ವೇಣುಗೋಪಾಲ್. ಅವರು ಹೇಳಿದ್ದು “ಟ್ಯೂಬ್‌ಲೈಟ್’ ಚಿತ್ರದ ಬಗ್ಗೆ. ಈ ಟೈಟಲ್ಎಲ್ಲೋ ಕೇಳಿದಂತಿದೆಯಲ್ಲಾ ಎಂಬ ಪ್ರಶ್ನೆ ಎದುರಾಗಬಹುದು. ಕಳೆದ ನಾಲ್ಕು ವರ್ಷಗಳ ಹಿಂದೆ ಶುರುವಾದ “ಟ್ಯೂಬ್‌ಲೈಟ್’ ಈಗ ಬೆಳಕಿಗೆ ಬಂದಿದೆ. ನಿರ್ದೇಶಕ ವೇಣುಗೋಪಾಲ್, ಚಿತ್ರ¨ ಟೀಸರ್ ಬಿಡುಗಡೆ ಮಾಡಲೆಂದೇ ತಮ್ಮ ಚಿತ್ರತಂಡದೊಂದಿಗೆ ಮಾಧ್ಯಮ ಮುಂದೆ ಬಂದಿದ್ದರು. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ನಿರ್ದೇಶಕ ವೇಣುಗೋಪಾಲ್, ಆ ಕೆಲಸಕ್ಕೆ ಗುಡ್‌ಬೈ ಹೇಳಿ, ಈ ಚಿತ್ರ ನಿರ್ದೇಶನಕ್ಕೆ ಮುಂದಾದರು. ಸಾಕಷ್ಟು ಏರಿಳಿತಗಳ ನಡುವೆ “ಟ್ಯೂಬ್‌ಲೈಟ್’ ಮುಗಿಸಿದ್ದಾರೆ.
ಹವಾಗುಣಕ್ಕೆ ಹೊಂದಿಕೊಂಡು ಚಿತ್ರೀಕರಣ ಮಾಡಲಾಗುತ್ತಿತ್ತು. ಹಾಗಾಗಿ ಸಮಯ ಸಾಕಷ್ಟು ಹಿಡಿಯಿತು. ಅದೂ ಒಂದು ತಡವಾಗಲು ಮುಖ್ಯ ಕಾರಣ. ಇದ್ದೊಂದು ಜರ್ನಿ ಕಥೆಯಾದ್ದರಿಂದ ಸಹಜವಾಗಿಯೇ ಸಮಯ ಬೇಕಾಯಿತು’ ಎಂಬುದು ನಿರ್ದೇಶಕರ ಮಾತು. ಚಿತ್ರದಲ್ಲಿ ಗುರುನಂದನ್ ಇದ್ದಾರೆ. ಅವರೊಂದಿಗೆ ಆರ್ಯನ್, ರೋಹಿತ್ ಶೆಟ್ಟಿ ಮತ್ತು ರಾಜ್ ಕೂಡ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಗುರುನಂದ ನ್ “ಟ್ಯೂಬ್‌ಲೈಟ್’ ಬಗ್ಗೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದಾರಂತೆ. ಅವರು 2014ರಲ್ಲಿ ಈ ಚಿತ್ರ ಒಪ್ಪಿ ಕೆಲಸ ಶುರುಮಾಡಿದಾಗ, “ಫಸ್ಟ್ ರ್‍ಯಾಂಕ್ ರಾಜು’ ಚಿತ್ರವಿನ್ನೂ ಶುರುವಾಗಿರಲಿಲ್ಲವಂತೆ. ಗುರುನಂದನ್ ಇಲ್ಲಿ ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದು, ಒಂದು ಪ್ರಾಜೆಕ್ಟ್ ಮೇಲೆ ಅವರು ಲಡಾಕ್‌ಗೆ ಪ್ರಯಾಣ ಬೆಳೆಸುತ್ತಾರೆ. ಅವರ ಜೊತೆ ಮೂವರು ಗೆಳೆಯರೂ ಹೊರಡುತ್ತಾರೆ. ಆ ದಾರಿ ಮಧ್ಯೆ ಒಂದಷ್ಟು ಸಮಸ್ಯೆ ಎದುರಾಗುತ್ತದೆ. ಅದೇ ಚಿತ್ರ¨ ಹೈಲೈಟ್’ ಎಂಬುದು ಗುರುನಂದನ್
ಮಾತು. ಈ ಚಿತ್ರಕ್ಕೆ ಸಂಬಂಧಿಸಿದಂತೆ ವೆಂಕಟಾದ್ರಿ ಎಂಬುವವರು ಕಂಪ್ಯೂಟರ್ ಗೇಮ್‌ವೊಂದನ್ನು ರೂಪಿಸಿದ್ದು , ಹದಿನೈದು ಹಂತದ ಗೇಮ್ ಅದು ಎಂಬುದು ವಿಶೇಷ. ಆ ಪೈಕಿ ಐದು ಹಂತದ ಗೇಮ್ ಆಡಿ ವಿಜೇತರಾದವರಿಗೆ ಸಿನಿಮಾ ಟಿಕೆಟ್ ಉಚಿತ
ಎಂಬುದು ಚಿತ್ರತಂಡದ ಹೇಳಿಕೆ.
Related Articles
“ಮಠ’ ಗುರುಪ್ರಸಾದ್ ಇಲ್ಲೊಂದು ಕಲ್ಕಿ ಎಂಬ ಪಾತ್ರ ಮಾಡಿದ್ದಾರಂತೆ. ಒಂದರ್ಥದಲ್ಲಿ ಸಿನಿಮಾಗೆ ಅವರೇ “ಲೈಮ್‌ಲೈಟ್’ ಅಂತೆ. ಚಿತ್ರ ನೋಡಿದವರಿಗೆ ಲಡಾಕ್‌ಗೆ ಹೋಗಿ ಬಂದ ಅನುಭವ ಆಗೋದು ಗ್ಯಾರಂಟಿ ಎಂಬುದು ಚಿತ್ರತಂಡದ ಮಾತು. ಎಲ್ಲವೂ
ಅಂದುಕೊಂಡಂತೆ ನಡೆದರೆ, ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ “ಟ್ಯೂಬ್‌ಲೈಟ್’ ಆನ್ ಆಗುತ್ತದೆ.
Advertisement