Advertisement

ತಿರುಪತಿ:  ಸ್ಥಳೀಯರಿಗಷ್ಟೇ ವೈಕುಂಠ ದರ್ಶನ ಟಿಕೆಟ್‌ ವಿತರಿಸಲು ಟಿಟಿಡಿ ನಿರ್ಧಾರ

09:17 PM Dec 19, 2020 | sudhir |

ತಿರುಪತಿ: ಪ್ರಸಕ್ತ ವರ್ಷ ವೈಕುಂಠ ದ್ವಾರ ದರ್ಶನ ಟೋಕನ್‌ಗಳನ್ನು ಕೇವಲ ಸ್ಥಳೀಯ ಭಕ್ತರಿಗಷ್ಟೇ ವಿತರಿಸಲು ತಿರುಮಲ ತಿರುಪತಿ ದೇವಸ್ಥಾನಮ್ಸ್‌ (ಟಿಟಿಡಿ) ನಿರ್ಧರಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Advertisement

ಅಲಿಪಿರಿ ಸಮೀಪದ ವಿಷ್ಣು ನಿವಾಸ ಮತ್ತು ಭೂದೇವಿ ಸಂಕೀರ್ಣದಲ್ಲಿ ಸರ್ವದರ್ಶನ ಟೋಕನ್‌ ವಿತರಣೆಯ ಕೌಂಟರ್‌ಗಳು ಡಿ.21(ಸೋಮವಾರ) ಸಂಜೆ 5 ಗಂಟೆಗೆ ಮುಚ್ಚಲಿವೆ. ಡಿ.22, 23 ಮತ್ತು 24ರ ದರ್ಶನ ಟೋಕನ್‌ಗಳನ್ನು ಕೂಡ ಸೋಮವಾರಕ್ಕೂ ಮುನ್ನವೇ ವಿತರಿಸಲಾಗುತ್ತದೆ. ತಿರುಪತಿಯ 5 ನಿಗದಿತ ಪ್ರದೇಶಗಳಲ್ಲಿ ಟೋಕನ್‌ ಲಭ್ಯವಿದ್ದು, ಸ್ಥಳೀಯರು ತಮ್ಮ ಆಧಾರ್‌ ಕಾರ್ಡ್‌ ತೋರಿಸಿ ಸರ್ವದರ್ಶನ ಟೋಕನ್‌ ಖರೀದಿಸಬಹುದು ಎಂದು ಟಿಟಿಡಿ ಹೇಳಿದೆ.

ಇದೇ ವೇಳೆ, ತಿರುಚನೂರಿನ ಶ್ರೀ ಪದ್ಮಾವತಿ ದೇವಿ ದೇಗುಲದ ದರ್ಶನದ ಸಮಯವನ್ನು ಇನ್ನೂ 1 ಗಂಟೆ ವಿಸ್ತರಿಸಲಾಗಿದೆ. ಈ ಮೊದಲು ಬೆಳಗ್ಗೆ 7.30ರಿಂದ ರಾತ್ರಿ 7ರವರೆಗೆ ದರ್ಶನಕ್ಕೆ ಅವಕಾಶವಿತ್ತು. ಈಗ ಅದನ್ನು ರಾತ್ರಿ 8ರವರೆಗೆ ವಿಸ್ತರಿಸಲಾಗಿದೆ. ಏಕನಾಥ ಸೇವೆ ರಾತ್ರಿ 8.30ಕ್ಕೆ ನಡೆಯಲಿದೆ ಎಂದು ಟಿಟಿಡಿ ತಿಳಿಸಿದೆ.

ಇದನ್ನೂ ಓದಿ:ಬ್ಯಾಂಕ್‌ ವಂಚನೆ ಪ್ರಕರಣ : ಟ್ರಾನ್ಸ್‌ಸಿಟಿ ವಿರುದ್ಧ ತನಿಖೆ ಆರಂಭಿಸಿದ ಸಿಬಿಐ

Advertisement

Udayavani is now on Telegram. Click here to join our channel and stay updated with the latest news.

Next