Advertisement

ಕೆರೆಬಿಯನ್‌ ನ ಹೈಟಿ ರಾಷ್ಟ್ರದಲ್ಲಿ ಪ್ರಬಲ ಭೂಕಂಪನ : ಸುನಾಮಿ ಭೀತಿ

08:46 PM Aug 14, 2021 | Team Udayavani |

ಪೋರ್ಟ್‌ ಔ ಪ್ರಿನ್ಸ್‌: ಕೆರೆಬಿಯನ್‌ ನ ಹೈಟಿ ರಾಷ್ಟ್ರದಲ್ಲಿ ಶನಿವಾರ ಪ್ರಬಲ ಭೂಕಂಪನ ಉಂಟಾಗಿದೆ. 7.2 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಯುನೈಟೆಡ್‌ ಸ್ಟೇಟ್ಸ್‌ ಜಿಯೋಲಾಜಿಕಲ್‌ ಸರ್ವೇ ತಿಳಿಸಿದೆ.

Advertisement

ಘಟನೆಯಿಂದಾಗಿ ಸಾಕಷ್ಟು ಮನೆ, ಕಟ್ಟಡಗಳು ನೆಲಕ್ಕುರುಳಿವೆ. ಸಾವುಗಳು ಸಂಭವಿಸಿರುವುದು ಖಚಿತ. ಆದರೆ ಅದರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ ಎಂದು ನಾಗರಿಕ ಸಂರಕ್ಷಣಾ ನಿರ್ದೇಶಕ ಜೆರ್ರಿ ಚಾಂಡ್ಲರ್‌ ತಿಳಿಸಿದ್ದಾರೆ.

ಈ ಹಿಂದೆ 2010ರಲ್ಲಿ ದೇಶದಲ್ಲಿ 7 ತೀವ್ರತೆಯಲ್ಲಿ ಭೂಕಂಪನ ಉಂಟಾಗಿ ಸುಮಾರು 2 ಲಕ್ಷ ಜನರು ಸಾವಿಗೀಡಾಗಿದ್ದರು. 3 ಲಕ್ಷಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ :ಎಲ್‌ಐಸಿಯಿಂದ ಎರಡು ಐಪಿಒ? 2 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸಲು ಚಿಂತನೆ

Advertisement

Udayavani is now on Telegram. Click here to join our channel and stay updated with the latest news.

Next