Advertisement

ಪೆಸಿಫಿಕ್ ದ್ವೀಪದಲ್ಲಿ ಪ್ರಬಲ ಭೂಕಂಪ: ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾಗೆ ಸುನಾಮಿ ಭೀತಿ!

08:15 AM Feb 11, 2021 | keerthan |

ಕ್ರೈಸ್ಟ್ ಚರ್ಚ್: ಪೆಸಿಫಿಕ್ ದ್ವೀಪದಲ್ಲಿ ಸುಮಾರು ಪ್ರಬಲ ಭೂಕಂಪನವಾಗಿದ್ದು, ಪರಿಣಾಮ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಸುನಾಮಿ ಭೀತಿ ಎದುರಾಗಿದೆ.

Advertisement

ಭೂಕಂಪನದ ತೀವ್ರತೆಯು ರಿಕ್ಟರ್ ಮಾಪನದಲ್ಲಿ 7.7ರಷ್ಟು ದಾಖಲಾಗಿದ್ದು, ನ್ಯೂ ಕ್ಯಾಲೆಡನಿಯಾದ ತಡಿನ್ ನ ಪೂರ್ವಕ್ಕೆ 417 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರ ಪತ್ತೆಯಾಗಿದೆ ಎಂದು ಯೂರೋಪಿಯನ್ ಮೆಡಿಟರೇನಿಯನ್ ಭೂಕಂಪ ಕೇಂದ್ರವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ಇಂಟೆಲಿಜೆಂಟ್‌, ಶಾರ್ಪ್‌ ಮ್ಯಾನ್‌: ಪ್ರಧಾನಿ ನರೇಂದ್ರ ಮೋದಿಗೆ ದೇವೇಗೌಡರ ಮೆಚ್ಚುಗೆ

ಈ ಹಿಂದೆ 7.2 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಈ ಪ್ರದೇಶದಲ್ಲಿ ಕೇವಲ ಒಂದು ಗಂಟೆಯ ಅವಧಿಯಲ್ಲಿ ಕನಿಷ್ಠ ಮೂರು ಕಂಪನಗಳು ಸಂಭವಿಸಿದೆ.

ಸುನಾಮಿ ಭೀತಿ ಎದುರಾಗಿರುವ ಕಾರಣ ಸಮುದ್ರ ತಟದಲ್ಲಿ ವಾಸವಿರುವ ಮೀನುಗಾರರು, ನಿವಾಸಿಗಳಿಗೆ ತಟದಿಂದ ದೂರವಿರುವಂತೆ ಸೂಚಿಸಲಾಗಿದೆ. ಜನರು ನೀರಿಗಿಳಿಯಬಾರದು, ಬಂದರು, ನದಿಗಳಿಂದಲೂ ದೂರವಿರಬೇಕು ಎಂದು ನ್ಯೂಜಿಲ್ಯಾಂಡ್ ನ ರಾಷ್ಟ್ರೀಯ ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆ ಸೂಚಿಸಿದೆ.

Advertisement

ಆಸ್ಟ್ರೇಲಿಯಾದ ದ್ವೀಪಗಳು ಮತ್ತು ಪ್ರಾಂತ್ಯಗಳಿಗೆ ಸುನಾಮಿ ಬೆದರಿಕೆ ಇದೆ ಎಂದು ಆಸ್ಟ್ರೇಲಿಯಾದ ಹವಾಮಾನ ಬ್ಯೂರೋ ಹೇಳಿದೆ. ಅಮೆರಿಕದ ಸಮೋವಾ ಮತ್ತು ವನವಾಟು, ಫಿಜಿ ಮತ್ತು ನ್ಯೂಜಿಲ್ಯಾಂಡ್ ಸೇರಿದಂತೆ ಇತರ ಪ್ರದೇಶಗಳಲ್ಲಿ ಸುನಾಮಿ ಸಂಭವಿಸುವ ಸಾಧ್ಯತೆಯಿದೆ ಎಂದು ಯುಎಸ್ ನ ಸುನಾಮಿ ಎಚ್ಚರಿಕೆ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ರ ಮನಗೆದ್ದ ಕಬ್ಬಿನ ಗದ್ದೆ ಡ್ಯಾನ್ಸ್‌

Advertisement

Udayavani is now on Telegram. Click here to join our channel and stay updated with the latest news.

Next