Advertisement
ನವಸಮಾಜ ನಿರ್ಮಾಣ ವೇದಿಕೆ, ಮೈಸೂರು ವಿವಿ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಬಾರುಕೋಲು ಪತ್ರಿಕಾ ಬಳಗ, ಯುವ ಪ್ರಗತಿಪರ ಚಿಂತಕರ ಸಂಘ ಮತ್ತು ಸಮೈಕ್ಯ ಪಬ್ಲಿಕೇಷನ್ಸ್ ವತಿಯಿಂದ ಮಾನಸಗಂಗೋತ್ರಿ ರಾಣಿಬಹದ್ದೂರ್ ಸಭಾಂಗಣದಲ್ಲಿ ವೈಚಾರಿಕ ಚಳವಳಿಗಾರ ಪೆರಿಯಾರ್ ಈ.ವೆಂ. ರಾಮಸ್ವಾಮಿ ಅವರ 138ನೇ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಪೆರಿಯಾರ್ ಸಂಪುಟ ಬಿಡುಗಡೆ, ಪೆರಿಯಾರ್ ಛಾಯಾಚಿತ್ರಗಳ ಪ್ರದರ್ಶನ, ವಿಚಾರ ಸಭೆ ಮತ್ತು ಮೌಡ್ಯ ನಿರ್ಮೂಲನಾ ದಿನಾಚರಣೆ-2017 ಕಾರ್ಯಕ್ರಮದಲ್ಲಿ ಮಾತನಾಡಿದರು.
Related Articles
Advertisement
ಪೆರಿಯಾರ್ ಸಂಪುಟ ಕೃತಿ ಬಿಡುಗಡೆಗೊಳಿಸಿದ ಕರ್ನಾಟಕ ವೈಜಾnನಿಕ ಮನೋವೃತ್ತಿ ಆಂದೋಲನದ ಕಾರ್ಯದರ್ಶಿ ಎಂ.ಅಬ್ದುಲ್ ರೆಹಮಾನ್ ಪಾಷಾ, ಪೆರಿಯಾರ್‌ರಿಗೆ ಯಾವ ಮೌಡ್ಯವನ್ನು ವಿರೋಧಿಸಬೇಕು ಎಂಬ ಸ್ಪಷ್ಪ ಅರಿವಿತ್ತು. ಆದರೆ, ಅವರ ಮಾರ್ಗವನ್ನು ಅನುಸರಿಸುವುದು ಸಾಧ್ಯವಿಲ್ಲದಿದ್ದರೂ, ಸ್ವಲ್ಪಮಟ್ಟಿಗೆ ಅವರ ತತ್ವ, ಚಿಂತನೆಗಳನ್ನು ನಾವು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು.
ಇತ್ತೀಚಿನ ದಿನಗಳಲ್ಲಿ ಹಳೆಯ ಮೌಡ್ಯಗಳ ಜತೆಗೆ 21ನೇ ಶತಮಾನದಲ್ಲಿ ಹೊಸ ಮೌಡ್ಯಗಳ ಆಚರಣೆ ವಿಜೃಂಭಿಸುತ್ತಿದ್ದು, ಶಿಕ್ಷಕರು, ಎಂಜಿನಿಯರ್‌ಗಳು, ವೈದ್ಯರಲ್ಲೂ ಮೌಢಾಚರಣೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಸಭಾಂಗಣದ ಹೊರ ಭಾಗದಲ್ಲಿ ಪೆರಿಯಾರ್ ರಾಮಸ್ವಾಮಿ ಅವರ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಲಾಗಿತ್ತು.
ಜಾನಪದ ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ, ಬಾರುಕೋಲು ಪತ್ರಿಕೆ ಸಂಪಾದಕ ರಂಗಸ್ವಾಮಿ, ಅನುವಾದಕ ನಾ.ದಿವಾಕರ, ಮೈಸೂರು ವಿಶ್ವವಿದ್ಯಾಲಯ ಯುವ ಪ್ರಗತಿಪರ ಚಿಂತಕರ ಸಂಘ, ಸಂಶೋಧಕರ ಸಂಘದ ಅಧ್ಯಕ್ಷ ಬಿ.ಮೂರ್ತಿ, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಅಜಯ್‌ರಾಜ್, ಜೀರಹಳ್ಳಿ ರಮೇಶ್‌ಗೌಡ ಇದ್ದರು.
ಮಾಧ್ಯಮಗಳ ಮೇಲೆ ಬ್ರಾಹ್ಮಣ್ಯರ ಪ್ರಭಾವಪ್ರಸ್ತುತ ಸಂದರ್ಭದಲ್ಲಿ ಮಾಧ್ಯಮಗಳು ಬ್ರಾಹ್ಮಣ ಶಾಹಿ ಹಿಡಿತದಲ್ಲಿದ್ದು, ವಾಸ್ತವ ವಿಷಯಗಳನ್ನು ತಿರುಚುವ ಕೆಲಸ ಮಾಡುತ್ತಿವೆ. ಹೀಗಾಗಿ ಇತ್ತೀಚಿಗೆ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಅವರ ಸಾವಿಗೆ ಕೋಮುವಾದಿಗಳು ಕಾರಣವೆನ್ನುವ ಅನುಮಾನ ಕಾಡುತ್ತಿದ್ದ ವೇಳೆ ಘಟನೆಯನ್ನು ನಕ್ಸಲರತ್ತ ತಿರುಗಿಸುವ ಪ್ರಯತ್ನ ಮಾಡಲಾಯಿತು. ಬ್ರಾಹ್ಮಣ್ಯರ ಪ್ರಭಾವ ಮಾಧ್ಯಮಗಳ ಮೇಲೆ ಮಾತ್ರವಲ್ಲದೆ ಕಲೆ, ಸಾಂಸ್ಕೃತಿಕತೆ, ರಾಜಕೀಯ ಕ್ಷೇತ್ರದಲ್ಲೂ ನಿಯಂತ್ರಣ ಹೊಂದಿದೆ ಎಂದು ಚಿಂತಕ ಯೋಗೇಶ್ ಮಾಸ್ಟರ್ ತಿಳಿಸಿದರು.