ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಅವರ ಫೋಟೋ ಮತ್ತು ಹೆಸರು ಬಳಸಿ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಚಂದ್ರಶೇಖರ ಕಂಬಾರ ಅವರು ದಕ್ಷಿಣ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚೆಗೆ “ನನ್ನ ಪೋಟೋ ಮತ್ತು ಹೆಸರು ದುರುಪಯೋಗಪಡಿಸಿಕೊಂಡು ನನ್ನ ಸ್ನೇಹಿತರಿಗೆ ಹಾಗೂ ಪರಿಚಯಸ್ಥರಿಗೆ, ಸಂಬಂಧಿಕರಿಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ಹಣ ಕೇಳುತ್ತಿದ್ದಾರೆ. ಚತ್ತಿಸ್‌ಘಡ, ಕೊಲ್ಕೊತ್ತಾದಲ್ಲಿರುವ ನನ್ನ ಇಬ್ಬರು ಸ್ನೇಹಿತರಿಗೂ ಹಣ ಕೇಳಿರುವ ಸಂದೇಶ ಹೋಗಿದೆ’.
ಚಂದ್ರಶೇಖರ್ ಕಂಬಾರ ಎಂದು ಹೇಳಿಕೊಂಡು ಮೆಸೆಜ್ ಮಾಡಿರುವ ಕಿಡಿಗೇಡಿಗಳು “ನಾನು ತೊಂದರೆಯಲ್ಲಿ ಇದ್ದೇನೆ, ಅನಾರೋಗ್ಯಗೊಂಡಿದ್ದೇನೆ. ಹೀಗಾಗಿ, ಕೂಡಲೇ ಸ್ವಲ್ಪ ಹಣ ಸಹಾಯ ಮಾಡಬೇಕು. ಕೆಲವು ದಿನಗಳಲ್ಲೇ ಹಿಂದಿರುಗಿಸುತ್ತೇನೆ’ ಎಂದು ಸಂದೇಶ ಕಳುಹಿಸಿದ್ದಾರೆ. ನನಗೆ ಕರೆ ಮಾಡಿದ ನನ್ನ ಸ್ನೇಹಿತರು ಈ ಬಗ್ಗೆ ಹಣ ಕೇಳಿರುವ ಮೆಸೆಜ್ ಬಂದಿದ್ದೆ’ ಎಂದು ತಿಳಿಸಿದ್ದಾರೆ.
ಹೀಗಾಗಿ “ನಾನು ಯಾರಿಗೂ ಹಣ ಕೇಳಿಲ್ಲ, ನನ್ನ ಹೆಸರಿನಲ್ಲಿ ಬರುವ ಸಂದೇಶಕ್ಕೆ ಯಾರು ಪ್ರತಿಕ್ರಿಯಿಸಬೇಡಿ ಹಾಗೂ ಹಣ ನೀಡಬೇಡಿ’ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು.