ಹುಣಸೂರು: ಸಮಾಜದ ಅವ್ಯವಸ್ಥೆ ಯನ್ನು ದೂರುವುದನ್ನು ಬಿಟ್ಟು ಪರಿ ವರ್ತನೆ ಮಾಡುವ ನಿಟ್ಟಿನಲ್ಲಿ ಚಿಂತಿಸುವ ಜೊತೆಗೆ ವಿದ್ಯಾರ್ಥಿಗಳು ಭವಿಷ್ಯ ಕಂಡು ಕೊಳ್ಳಬೇಕು ಎಂದು ಅಥ್ಲೀಟ್ ಅರ್ಜುನ್ ದೇವಯ್ಯ ಸಲಹೆ ನೀಡಿದರು. ನಗರದ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿರುವ ವಾರ ಕಾಲದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಅವರು ಮಾತನಾಡಿದರು.
ಯುವಶಕ್ತಿಯಲ್ಲಿ ಪ್ರತಿಭೆ ಪ್ರಜ್ವಲಿಸು ತ್ತಿವೆ. ಆದರೆ, ವೇದಿಕೆಗಳನ್ನು ಬಳಸಿ ಕೊಳ್ಳುವಲ್ಲಿ ವಿಫಲತೆ ಇದೆ. ಎನ್‌ಎಸ್‌ಎಸ್ ಶಿಬಿರಗಳು ಸಕಾರಾತ್ಮಕ ವ್ಯಕ್ತಿತ್ವ ರೂಪಿಸುವ ವೇದಿಕೆಯಾಗಿವೆ. ಗುರಿ ಇಟ್ಟು ಸಾಧಿಸುವ ಛಲ ನಿಮ್ಮದಾಗಿರಲಿ ಎಂದರು.
ಮೈಸೂರು ವಿವಿಯ ಡೀನ್ ಡಾ.ಸಿ. ಬಸವರಾಜು ಮಾತನಾಡಿ, ಮನಸ್ಸುಗಳನ್ನು ಬೆಸೆ ಯುವ, ಹೃದಯಗಳನ್ನು ಒಂದುಗೂಡಿ ಸುವ, ತಾರತಮ್ಯವನ್ನು ದೂರ ಮಾಡುವ, ಐಕ್ಯತೆ ಗಳಿಸುವ ನಿಟ್ಟಿನಲ್ಲಿ ಯುವ ಮನಸ್ಸುಗಳನ್ನು ಜಾಗೃತಗೊಳಿಸುವ ಕಾರ್ಯ ಕ್ರಮವೇ ಈ ರಾಷ್ಟ್ರೀಯ ಭಾವೈಕ್ಯತಾ ಶಿಬಿರವಾಗಿದೆ ಎಂದು ಬಣ್ಣಿಸಿದರು.
ಮೈಸೂರು ವಿವಿ ಎನ್‌ಎಸ್‌ಎಸ್ ಜಿಲ್ಲಾ ಸಂಯೋಜನಾಕಾರಿ ಡಾ.ಚಂದ್ರಶೇಖರ್ ಮಾತನಾಡಿ, ದೇಶದಲ್ಲಿ ಶೇ.60ರಷ್ಟು ಯುವ ಸಮೂಹವಿದ್ದರೂ ಸದ್ಬಳಕೆಯಾಗುತ್ತಿಲ್ಲ. ಶಿಕ್ಷಣ, ಆರೋಗ್ಯ, ಕೌಶಲ್ಯ ಪ್ರಗತಿ ವಿಚಾರದಲ್ಲಿ 184 ದೇಶಗಳಲ್ಲಿ ನಡೆಸಿದ ಸಮೀಕ್ಷೆ ಯಲ್ಲಿ ಭಾರತ 134ನೇ ಸ್ಥಾನದಲ್ಲಿದೆ. ಯುವ ಜನತೆ ಯನ್ನು ಮುಖ್ಯವಾಹಿನಿಗೆ ತರುವಲ್ಲಿ ಎಡವಿದ್ದೇವೆ. ಯುವಜನತೆಗೆ ತರಬೇತಿ ನೀಡಿ ದೇಶದ ಆಸ್ತಿಯಾಗಿಸಬೇಕಿದೆ ಎಂದು ಸಲಹೆ ನೀಡಿದರು.
ಶಿಬಿರದ ಯೋಜನಾಕಾರಿ ಡಾ.ಕೆ.ಎಸ್. ಭಾಸ್ಕರ್, ಶಿಬಿರದಲ್ಲಿ ತಮಿಳುನಾಡು, ಕೇರಳ, ಆಂಧ್ರ, ಪುದುಚೇರಿ ಸೇರಿದಂತೆ ಉತ್ತರ ಕರ್ನಾಟಕಕದಿಂದ 150ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದು, ವಾರಕಾಲ ಆಯಾ ಸಾಂಸ್ಕೃತಿಕ ಕಲೆಗಳ ವಿನಿಮಯ ನಡೆಯಲಿದೆ ಎಂದರು.
ಪ್ರಾಚಾರ್ಯ ಜ್ಞಾನಪ್ರಕಾಶ್, ಸಿಡಿಸಿ ಉಪಾಧ್ಯಕ್ಷೆ ಸುನೀತಾ, ದೇವರಾಜು ಅರಸು ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶಯ್ಯ, ಪುಟ್ಟಶೆಟ್ಟಿ, ಬಿ.ಎಂ.ನಾಗರಾಜು, ಸಮಿತಿ ಸದಸ್ಯರಾದ ಕರೀಗೌಡ, ಲಿಂಗರಾಜಪ್ಪ ಇತರರಿದ್ದರು.