Advertisement

ಮಲೇರಿಯಾ ನಿಯಂತ್ರಣಕ್ಕೆ ಯತ್ನಿಸಿ

02:12 PM Jun 20, 2020 | Suhan S |

ಮುಂಡರಗಿ: ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಂಡು ಸ್ವತ್ಛತೆ ಕಾಪಾಡುವುದರಿಂದ ಮಲೇರಿಯಾವನ್ನು ನಿಯಂತ್ರಿಸ ಬಹುದಾಗಿದೆ ಎಂದು ತಾಪಂ ಅಧ್ಯಕ್ಷೆ ರೇಣುಕಾ ಗೋಣಿಬಸಪ್ಪ ಕೋರ್ಲಹಳ್ಳಿ ಹೇಳಿದರು.

Advertisement

ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ, ಪುರಸಭೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಕೂಡ ಸ್ವತ್ಛತೆಗೆ ಆದ್ಯತೆ ನೀಡುವ ಮೂಲಕ ಮಲೇರಿಯಾ ತಡೆಯಲು ಕೈ ಜೋಡಿಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ| ಬಸವರಾಜ ಕೆ. ಮಾತನಾಡಿ, ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡರೆ, ಮಲೇರಿಯಾ ರೋಗ ತಡೆಗಟ್ಟಬಹುದಾಗಿದೆ. ತಾಲೂಕಿನ ಜನತೆ ಸಕ್ರಿಯವಾಗಿ ಪಾಲ್ಗೊಂಡು ಎಲ್ಲ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಶ್ರಮಿಸಬೇಕು ಎಂದರು. ಬಿ.ಬಿ. ನಿಡಗುಂದಿ ಉಪನ್ಯಾಸ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಎಸ್‌.ಎಚ್‌. ನಾಯ್ಕರ, ಲಿಂಗರಾಜಗೌಡ ಪಾಟೀಲ, ಮಹಮ್ಮದ ರಫಿ ಮುಲ್ಲಾ, ರಾಜಾಭಕ್ಷಿ ಬೇಟಗೇರಿ, ಜ್ಯೋತಿ ಎನ್‌. ಹಾನಗಲ್ಲ, ಶಿವಪ್ಪ ಚಿಕ್ಕಣ್ಣವರ, ಪ್ರಕಾಶ ಹಲವಾಗಲಿ, ಪ್ರಹ್ಲಾದ ಹೊಸಮನಿ, ಶ್ರೀ ದೃವಕುಮಾರ ಹೂಗಾರ ಮತ್ತಿತರರು ಇದ್ದರು.

ಯಶೋಧಾ ಕುಡಪಲಿ ಪ್ರಾರ್ಥಿಸಿದರು. ಎನ್‌.ಬಿ.ಅಳವಂಡಿ ಸ್ವಾಗತಿಸಿದರು. ಕೆ.ಪಿ. ಗಂಭೀರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next