Advertisement
ಕನಸು ಕಾಣುವುದು ತಪ್ಪಲ್ಲ. ಆ ಕನಸನ್ನು ನನಸಾಗಿಸುವ ಹಂತದಲ್ಲಿ ಸುಸ್ತಾಗಿ ಕೈ ಚೆಲ್ಲುವುದು, ತನ್ನಿಂದ ಸಾಧ್ಯವಿಲ್ಲ ಎಂಬ ಹಿಂಜರಿಕೆ ನಮ್ಮನ್ನು ಇನ್ನಷ್ಟು ಕುಬjರನ್ನಾಗಿಸುತ್ತದೆ. ಪ್ರತಿಯೋರ್ವ ಸಾಧಕನ ಹಿಂದೆಯೂ ಕನಸಿತ್ತು, ಗುರಿ ಬೆನ್ನತ್ತುವ ಹಠವಿತ್ತು, ಹಿಡಿದ ಕೆಲಸವನ್ನು ಪೂರೈಸಿಯೇ ತೀರುತ್ತೇನೆಂಬ ಅಪಾರ ವಿಶ್ವಾಸವೂ ಕೂಡ ಇತ್ತು. ಅಂತಹ ಸಾಧಕನ ಸ್ಫೂರ್ತಿ ಕತೆ ನಿಮ್ಮ ಬದುಕು ಬಂಗಾರವಾಗಲು ದಾರಿದೀಪವಾದೀತು.
Related Articles
Advertisement
ಗಾಳಿಪಟಕ್ಕೆ ಏನು ಬೇಕು?
ನೂಲಿನುಂಡೆ, ಬಣ್ಣದ ಕಾಗದ, ತೆಂಗಿನ ಗರಿಯ ಕಡ್ಡಿ, ಸ್ವಲ್ಪ ಮೈದಾ ಅಂಟು. 5-6 ರೂ. ವೆಚ್ಚ ದಲ್ಲಿ ನಾನೇ ಯಾಕೆ ಮಾಡಬಾರದು? ನಾನೇ ಮಾಡಿºಟ್ಟು ಮಾರಿದ್ರೆ ಡಬಲ್ ಲಾಭವೂ ಸಿಗುತ್ತೆ. ಆದ್ರೆ ರಾತ್ರಿ ಚೂರು ನಿದ್ದೆಗೆಡಬೇಕಷ್ಟೇ ಎಂದು ಮನದಲ್ಲೇ ಲೆಕ್ಕ ಹಾಕಿಕೊಂಡ.
ಯೋಚನೆ ಬಂದಿದ್ದೇ ತಡ ಗಾಳಿಪಟದ ಕೆಲಸ ಶುರು ಆಯ್ತು… ಮಾಡ್ತಾ ಮಾಡ್ತಾ ವೇಗನೂ ಕರಗತ ಆಯ್ತು… 5 ಗಾಳಿಪಟ ಸಮಯದಲ್ಲಿ 15 ಗಾಳಿಪಟ ಮಾಡುವಷ್ಟು ವೇಗ ಅವನಿಗೆ ಬಂದಿತ್ತು. ತಾನು ಮಾಡಿದ ಗಾಳಿಪಟ ಮೇಲೆ ಮೇಲೆ ಹಾರಿದಾಗ ಮನಸ್ಸೂ ಬಾನೆತ್ತರಕ್ಕೆ ಹಾರ್ತಾ ಇತ್ತು. ಯಾಕಂದ್ರೆ ಇವನ ಗಾಳಿಪಟ ಅಷ್ಟು ಸುಭದ್ರವಾಗಿತ್ತು, ಅಷ್ಟು ನಾಜೂಕಿನಿಂದ ಕೂಡಿತ್ತು. ಎಲ್ಲಿಯೂ ಕಿಂಚಿತ್ತೂ ಲೋಪವಿಲ್ಲದ ಶ್ರಮದ ಫಲವಿದು.
ಇನ್ನು ನಂದೇ ಹವಾ…
ಇವನು ಚಿಕ್ಕದಾಗಿ ಹುಟ್ಟು ಹಾಕಿದ ಗಾಳಿಪಟ ತಯಾರಿಕಾ ಕಂಪೆನಿ ದೇಶಾದ್ಯಂತ ನಡೆಯುವ ಬೃಹತ್ ಗಾಳಿಪಟ ಉತ್ಸವಗಳಿಗೂ ಗಾಳಿಪಟ ತಯಾರಿಸಿಕೊಡುವಷ್ಟು ಬೆಳೆದಿತ್ತು. ಇವನೂ ಬೆಳೆದಿದ್ದ. ಇವನಂತ ಎಷ್ಟೋ ಆಸೆ ಹೊತ್ತ ಕಂಗಳಿಗೆ ಕೆಲಸ ನೀಡಿ ಬದುಕಿಗೆ ದಾರಿ ತೋರಿಸಿದ್ದ. ಇವನು ಬರೀ ಬಾಸ್ ಆಗಿ ಎಂದಿಗೂ ಉಳಿಯಲಿಲ್ಲ. ಅಗತ್ಯ ಬಿದ್ದರೇ ತಾನೇ ಖುದ್ದಾಗಿ ಕೆಸಲಕ್ಕೆ ಕೈಜೋಡಿಸಲೂ ಹಿಂಜರಿಯದೆ ನೌಕರರ ಪಾಲಿಗೆ ಪ್ರೀತಿಯ ಒಡೆಯನಾದ.
ಯಾವತ್ತೂ ಮುಗಿಲೆತ್ತರದ ಕನಸು ಕಾಣಿರಿ, ಅದನ್ನು ನನಸಾಗಿಸಲು ನಿರಂತರ ಶ್ರಮವಹಿಸಿ. ಹಾಗೆಯೇ ತನ್ನಿಂದ ಸಾಧ್ಯವಿದೆ ಎನ್ನುವ ಛಲ ಯಾವತ್ತೂ ನಿಮ್ಮ ಜತೆಗಿದ್ದರೆ ಯಾವುದೇ ಅಡೆತಡೆಗಳು ನಿಮ್ಮನ್ನು ಬಾಧಿಸುವುದಿಲ್ಲ.
ಅಂದ ಹಾಗೆ ಆ ಗಾಳಿಪಟದ ವ್ಯಾಪಾರದಲ್ಲೇ ತನ್ನ ಸಾಮ್ರಾಜ್ಯ ಕಟ್ಟಿದ ವ್ಯಕ್ತಿ ಯಾರು? ಎಲ್ಲಿನವರು? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿದ್ದರೆ ಫೆ. 10, 11ರಂದು ತಣ್ಣೀರುಬಾವಿ ಬೀಚ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಬನ್ನಿ. ಅಲ್ಲಿ ಅವರ ಗಾಳಿಪಟಗಳು ತಮ್ಮ ಗುರುತನ್ನು ಬಾನೆತ್ತರದಲ್ಲಿ ಬಿಚ್ಚಿಡಬಹುದು…
-ಹಿರಣ್ಮಯಿ
ಕೈರಂಗಳ