ಕೆ.ಆರ್.ಪೇಟೆ: ಸರ್ಕಾರ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ವಿಶ್ವಾಸ ಕಿರಣ ಎಂಬ ನೂತನ ಯೋಜನೆ ಜಾರಿಗೊಳಿಸಿ ಆಂಗ್ಲ ಭಾಷೆಯಲ್ಲಿ ಹಿಂದುಳಿದಿರುವ ಗ್ರಾಮಿಣ ಭಾಗದ ಮಕ್ಕಳಿಗೆ ಅನುಕೂಲ ಕಲ್ಪಿಸಿಕೊಡಲು ಮುಂದಾಗಿದೆ. ಆದರೆ, ತಾಲೂಕಿನಲ್ಲಿ ಸಾವಿರಾರು ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿದ್ದರೂ ಕೇವಲ 271 ವಿದ್ಯಾರ್ಥಿಗಳು ಮಾತ್ರ ವಿಶೇಷ ತರಗತಿಗೆ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
271 ವಿದ್ಯಾರ್ಥಿಗಳಲ್ಲಿ ಎರಡು ವಿಭಾಗ ಮಾಡಲಾಗಿದೆ. 201 ವಿದ್ಯಾರ್ಥಿಗಳ ತಂಡವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ, 70 ವಿದ್ಯಾರ್ಥಿಗಳ ತಂಡವನ್ನು ಸ್ವತಂತ್ರ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ನಿಯೋಜನೆ ಮಾಡಲಾಗಿತ್ತು. ಆದರೆ, ಈ ವಿದ್ಯಾರ್ಥಿಗಳು ನಿರಾಸಕ್ತಿ ವಹಿಸುತ್ತಿದ್ದು, ಕೇವಲ 30 ರಿಂದ 40 ವಿದ್ಯಾರ್ಥಿಗಳು ಮಾತ್ರ ಹಾಜರಾಗುತ್ತಿದ್ದಾರೆ.
ಹಿರಿಯ ಸಂಪನ್ಮೂಲ ವ್ಯಕ್ತಿಗಳಿಗೆ ಮುಜುಗರ: ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ದೂರದ ಮೈಸೂರು ನಗರದಿಂದ ನಿವೃತ್ತ ಅಧಿಕಾರಿಗಳು, ಹಿರಿಯ ಉಪನ್ಯಾಸಕರು ಸಮಯಕ್ಕೆ ಸರಿಯಾಗಿ 9.30ಕ್ಕೆ ಕಾಲೇಜಿಗೆ ಆಗಮಿಸುತ್ತಿದ್ದಾರೆ. ಆದರೆ, ಸ್ಥಳೀಯ ವಿದ್ಯಾರ್ಥಿಗಳು ಮಾತ್ರ 10.30 ರ ನಂತರ ಆಗಮಿಸುತ್ತಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 201ಕ್ಕೆ ಕೇವಲ 30, ಸ್ವತಂತ್ರ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ 70ಕ್ಕೆ ಕೇವಲ 7 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಮಕ್ಕಳಿಗೆ ಜ್ಞಾನ ನೀಡುವ ಆಶಯ ಹೊತ್ತು ಇಳಿ ವಯಸ್ಸಿನಲ್ಲಿಯೂ ದೂರದ ಊರುಗಳಿಂದ ಬರುವ ಸಂಪನ್ಮೂಲ ವ್ಯಕ್ತಿಗಳಿಗೆ ಇದರಿಂದ ಮುಜುಗರವಾಗುತ್ತಿದೆ.
ಕೆ.ಆರ್.ಪೇಟೆ ವಿಶ್ವಾಸ ಕಿರಣ ಯೋಜನೆಯ ವಿಶೇಷ ತರಗತಿಯಲ್ಲಿ ಉಪನ್ಯಾಸಕ ಗೋವಿಂದರಾಜು ಬೆರಳೆಣಿಕೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದು. ವಿದ್ಯಾರ್ಥಿಗಳು ಹಿರಿಯ ಅನುಭವಗಳ ಜ್ಞಾನ ಪಡೆದುಕೊಂಡು ಉತ್ತಮ ಸಾಧನೆ ಮಾಡ ಬಹುದಾಗಿದೆ. ನಾನೂ ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿ ಸಮಸ್ಯೆ ಬಗ್ಗೆ ಅರಿವಿದೆ. ಹಾಗಾಗಿ ನಾನು ಇಂಥ ಮಕ್ಕಳಿಗೆ ಸೇವೆ ಸಲ್ಲಿಸಬೇಕು ಎಂದು ನನ್ನ ನಿವೃತ್ತಿ ಸಮಯ ಮೀಸಲಿಟ್ಟಿದ್ದೇನೆ. ನನ್ನಂತೆಯೇ ನೂರಾರು ಮಂದಿ ಮಕ್ಕಳಿಗೆ ಜ್ಞಾನ ಧಾರೆಯರೆಯಲು ಸಿದ್ಧ ರಾಗಿದ್ದಾರೆ. ಆದರೆ, ವಿದ್ಯಾರ್ಥಿಗಳು ಇಂಥ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು.
ನಾಗರಾಜು, ನಿವೃತ್ತ ಸಹಾಯಕ ಆಯುಕ್ತರು, ಕೇಂದ್ರ
ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸರ್ಕಾರ ವಿದ್ಯಾರ್ಥಿಗಳನ್ನು ಜಾತಿಯ ಆಧಾರದ ಮೇಲೆ ವಿಂಗಡಣೆ ಮಾಡಿ ವಿದ್ಯಾಭ್ಯಾಸ ನೀಡುತ್ತಿ ರುವುದು ತಪ್ಪು. ಅವಕಾಶ ಸದ್ಬಳಕೆ ಮಾಡಿ ಕೊಂಡು ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ಆದರೆ, ಶೇ.10 ರಷ್ಟು ವಿದ್ಯಾರ್ಥಿಗಳು ಈ ಯೋಜನೆ ಬಳಸಿಕೊಳ್ಳುತ್ತಿಲ್ಲ ಎಂಬ ವಿಷಯ ತುಂಬಾ ನೋವಿನ ಸಂಗತಿಯಾಗಿದೆ. ಸರ್ಕಾ ರದ ಯೋಜನೆಗಳು ಸಿಗುತ್ತಿರುವಾಗ ಅದನ್ನು ಬಳ ಕೊಳ್ಳಬೇಕು. ಸರ್ಕಾರ ಮುಂದಿನ ದಿನಗಳಲ್ಲಾದರೂ ಎಲ್ಲಾ ವಿದ್ಯಾರ್ಥಿಗಳನ್ನು ಒಳಗೊಂಡ ಯೋಜನೆ ಜಾರಿ ಮಾಡಬೇಕು.
ಮಣಿ, ವಿದ್ಯಾರ್ಥಿ
ಎಚ್.ಬಿ.ಮಂಜುನಾಥ