Advertisement

ಕತಾರ್‌ ಬಿಕ್ಕಟ್ಟು ನಿವಾರಣೆಗೆ ಟ್ರಂಪ್‌ ಮಧ್ಯಸ್ಥಿಕೆ ಕೊಡುಗೆ

10:48 AM Sep 08, 2017 | udayavani editorial |

ವಾಷಿಂಗ್ಟನ್‌ : ಕತಾರ್‌ ಮತ್ತು ಅದರ ಅರಬ್‌ ನೆರೆಹೊರೆಯ ದೇಶಗಳೊಂದಿಗಿನ ಬಿಕ್ಕಟ್ಟನ್ನು ಬಗೆ ಹರಿಸುವ ನಿಟ್ಟಿನಲ್ಲಿ ತಾನು ಮಧ್ಯವರ್ತಿಯಾಗುವ ಕೊಡುಗೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ್ದಾರೆ. ಆ ಮೂಲಕ ಕತಾರ್‌ ಬಿಕ್ಕಟ್ಟು ಸೌಹಾರ್ದಯುತವಾಗಿ ಸುಲಭದಿಂದ ಪರಿಹಾರವಾಗುವುದು ಸಾಧ್ಯ ಎಂಬ ವಿಶ್ವಾಸವನ್ನು ಟ್ರಂಪ್‌ ವ್ಯಕ್ತಪಡಿಸಿದ್ದಾರೆ. 

Advertisement

ಕುವೈಟ್‌ ಆಮೀರ್‌ ಸಭಾಹ್‌ ಅಲ್‌ ಅಹ್ಮದ್‌ ಅಲ್‌ ಜಬರ್‌ ಅಲ್‌ ಸಭಾಹ್‌ ಅವರೊಂದಿಗೆ ಜಂಟಿಯಾಗಿ ನಡೆಸಿಕೊಟ್ಟ ಶ್ವೇತ ಭವನ ಸುದ್ದಿ ಗೋಷ್ಠಿಯಲ್ಲಿ ಟ್ರಂಪ್‌, “ಕತಾರ್‌ನಲ್ಲಿ ಶಾಂತಿ ಸ್ಥಾಪನೆಗೆ ಅವಕಾಶವಿದೆ ಎಂದು ನನಗನ್ನಿಸುತ್ತದೆ. ಆದರೂ ನಾನದನ್ನು ಕೊಂಚ ಸಂಕೋಚದಿಂದಲೇ ಹೇಳಬಯಸುತ್ತೇನೆ. ಹಾಗಿದ್ದರೂ ಕತಾರ್‌ ಬಿಕ್ಕಟ್ಟು ನಿವಾರಣಗಾಗಿ ನಾವು ನಮ್ಮಿಂದ ಸಾಧ್ಯವಾದ ಅತ್ಯುತ್ತಮವನ್ನು ನೀಡಲಿದ್ದೇವೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next