Advertisement

ಉತ್ತರ ಕೊರಿಯಾ ವಿರುದ್ಧ ದಾಳಿಗೆ ಸಿದ್ಧ: ಅಧ್ಯಕ್ಷ ಟ್ರಂಪ್‌

06:35 AM Sep 28, 2017 | |

ವಾಷಿಂಗ್ಟನ್‌: ಪರಮಾಣು ಪರೀಕ್ಷೆ, ಕ್ಷಿಪಣಿ ಉಡಾವಣೆ ನಡೆಸಿ ಅಮೆರಿಕಕ್ಕೆ ಸೆಡ್ಡು ಹೊಡೆದಿರುವ ಉತ್ತರ ಕೊರಿಯಾ ವಿರುದ್ಧ ದಾಳಿ ನಡೆಸಲು ಅಮೆರಿಕ ಸಿದ್ಧತೆ ನಡೆಸಿದೆ.

Advertisement

ವಿಶ್ವವನ್ನು ಉಳಿಸುವ ಬಗ್ಗೆ ಕಾಳಜಿ ಇರುವ ಎಲ್ಲಾ ರಾಷ್ಟ್ರಗಳು ನಮ್ಮ  ಜತೆ ಕೈಜೋಡಿಸಬೇಕು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಅಮೆರಿಕದ ವಿಮಾನಗಳನ್ನು ಸ್ವರಕ್ಷಣೆಗಾಗಿ ಹೊಡೆದು ಉರುಳಿಸಲು ಸಿದ್ಧವೆಂದು ಅಲ್ಲಿನ ವಿದೇಶಾಂಗ ಸಚಿವ ರಿ ಯಾಂಗ್‌ ಹೋ ಹೇಳಿದ 24 ಗಂಟೆಗಳ ಬೆನ್ನಲ್ಲೇ ಟ್ರಂಪ್‌ರ ಘೊಷಣೆ ಹೊರಬಿದ್ದಿದೆ. ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್‌ ಉನ್‌ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. . ಅಮೆರಿಕದ ಹಿಂದಿನ ಸರಕಾರ ಕೊರಿಯಾ ನಾಯಕತ್ವದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ  ಎಂದರು.

Advertisement

Udayavani is now on Telegram. Click here to join our channel and stay updated with the latest news.

Next