Advertisement

US Election: ಬೈಡೆನ್‌ಗೆ ಎದುರಾಳಿಯಾಗಲು ಟ್ರಂಪ್‌, ವಿವೇಕ್‌ ಪೈಪೋಟಿ

07:23 PM Aug 20, 2023 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿನ ಕುತೂಹಲಕಾರಿ ಬೆಳವಣಿಗೆಯೆಂಬಂತೆ, ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಗಳ ಪೈಕಿ ಫ್ಲೋರಿಡಾ ಗವರ್ನರ್‌ ರಾನ್‌ ಡಿ ಸ್ಯಾಂಟೀಸ್‌ ಮತ್ತು ಭಾರತೀಯ-ಅಮೆರಿಕನ್‌ ಉದ್ಯಮಿ ವಿವೇಕ್‌ ರಾಮಸ್ವಾಮಿ ಅವರು 2ನೇ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ.

Advertisement

ಎಮರ್ಸನ್‌ ಕಾಲೇಜ್‌ ಮತದಾನದಲ್ಲಿ ವಿವೇಕ್‌ ಹಾಗೂ ಡಿಸ್ಯಾಂಟೀಸ್‌ ಅವರಿಗೆ ತಲಾ ಶೇ.10ರಷ್ಟು ಮತಗಳು ಬಿದ್ದಿವೆ. ಆದರೆ, ಇವರಿಬ್ಬರೂ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗಿಂತ ತುಂಬಾ ಹಿಂದಿದ್ದಾರೆ. ಟ್ರಂಪ್‌ ಅವರಿಗೆ ಶೇ.56ರಷ್ಟು ಮತಗಳು ಬಿದ್ದಿವೆ.

ಮತ್ತೂಂದು ವಿಶೇಷವೆಂದರೆ, ಡಿಸ್ಯಾಂಟೀಸ್‌ ಅವರು ಜೂನ್‌ನಲ್ಲಿ ಶೇ.21ರಷ್ಟು ಮತಗಳು ಪಡೆದಿದ್ದರಾದರೂ, ಈಗ ಅವರ ಜನಪ್ರಿಯತೆ ಕುಸಿದಿದ್ದು ಶೇ.10ಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಇನ್ನೊಂದೆಡೆ, ವಿವೇಕ್‌ ರಾಮಸ್ವಾಮಿ ಅವರಿಗೆ ಜೂನ್‌ನಲ್ಲಿ ಕೇವಲ ಶೇ.2ರಷ್ಟು ಮತಗಳು ದೊರೆತಿದ್ದವು. ಆದರೆ, ಈಗ ಅದು ಶೇ.10ಕ್ಕೇರಿರುವುದು ಅವರ ಜನಪ್ರಿಯತೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ, ಡೆಮಾಕ್ರಾಟ್‌ ಅಭ್ಯರ್ಥಿ ಬೈಡೆನ್‌ರನ್ನು ಎದುರಿಸಲು ಟ್ರಂಪ್‌ ಮತ್ತು ವಿವೇಕ್‌ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ಅಧಿಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next