Advertisement

ಪತ್ನಿಯರ ಕೆಲಸಕ್ಕೆ ಕೊಕ್‌

06:05 AM Dec 17, 2017 | Team Udayavani |

ವಾಷಿಂಗ್ಟನ್‌:  ಮಾಜಿ ಅಧ್ಯಕ್ಷ ಒಬಾಮಾ ಆಡಳಿತಾವಧಿಯಲ್ಲಿನ ಎಚ್‌-1ಬಿ ವೀಸಾ ನಿಯಮಗಳಲ್ಲಿನ ಒಂದೊಂದೇ ಅಂಶಗಳಿಗೆ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬ್ರೇಕ್‌ ಹಾಕುತ್ತ ಬಂದಿದ್ದು, ಇದೀಗ ಎಚ್‌-1ಬಿ ಹೊಂದಿರುವವರ ಪತ್ನಿಯಂದಿರು ಕೆಲಸ ಕಳೆದುಕೊಳ್ಳುವ ಆತಂಕ ಸೃಷ್ಟಿಯಾಗಿದೆ. 

Advertisement

ಎಚ್‌-1ಬಿ ವೀಸಾ ಹೊಂದಿರುವ ವ್ಯಕ್ತಿಯ ಪತಿ ಅಥವಾ ಪತ್ನಿಯೂ ಕೆಲಸ ಮಾಡಲು ಒಬಾಮಾ ಅವರು ನೀಡಿದ್ದ ಅನುಮತಿಯನ್ನು ಇದೀಗ ಟ್ರಂಪ್‌ ಹಿಂಪಡೆಯಲು ಮುಂದಾಗಿ ದ್ದಾರೆ. ಇದು ಜಾರಿಗೆ ಬಂದಲ್ಲಿ ಸಾವಿರಾರು ಎಚ್‌-1ಬಿ ವೀಸಾದಾರ ಭಾರತೀಯರು ಕೆಲಸ ಕಳೆದುಕೊಳ್ಳಲಿದ್ದಾರೆ. ಇದು ಸಹಜವಾಗಿ ಅನಿ ವಾಸಿ ಭಾರತೀಯರಲ್ಲಿ ಆತಂಕದ ಛಾಯೆ ಮೂಡಿಸಿದೆ. ಒಬಾಮಾ ಆಡಳಿತಾವಧಿಯಲ್ಲಿ ಎಚ್‌-4 ವೀಸಾ ಪಡೆದು ಪತ್ನಿಯರೂ ಕೆಲಸ ಮಾಡಲು ಅವಕಾಶವಿತ್ತು. 2016ರಲ್ಲಿ ಎಚ್‌-4 ವೀಸಾ ಪಡೆದ 41,000ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಈ ವರ್ಷ 36,000 ಮಂದಿಗಷ್ಟೇ ಎಚ್‌-4 ವೀಸಾದಡಿ ಜೂನ್‌ವರೆಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ. 

ಅಮೆರಿಕದಲ್ಲಿ ಎಚ್‌-1ಬಿ ವೀಸಾದಡಿ ಉದ್ಯೋಗದಲ್ಲಿರುವ ವಿದೇಶಿಗರ ಪೈಕಿ ಭಾರತ ಹಾಗೂ ಚೀನದವರೇ ಜಾಸ್ತಿ ಇದ್ದಾರೆ. ಇದೀಗ ಎಚ್‌-1ಬಿ ವೀಸಾ ಪಡೆದವರೊಬ್ಬರೇ ಕೆಲಸ ಹೊಂದಿರಬೇಕು, ಪತ್ನಿ ಹಾಗೂ ಮಕ್ಕಳಿಗೆ ಕೆಲಸ ಮಾಡಲು ಅನುಮತಿ ನೀಡಲಾಗದು ಎಂಬ ನಿಯಮ ಜಾರಿಗೆ ಅಮೆರಿಕ ವಿದೇಶಾಂಗ ಇಲಾಖೆ ಮುಂದಾಗಿದೆ. ಇದೀಗ ಪ್ರಸ್ತಾವನೆಯ ಹಂತದಲ್ಲಿದೆ. 

ತೆರಿಗೆ ಪದ್ಧತಿಯಲ್ಲಿ ಬದಲಾವಣೆ: ಅಮೆರಿಕದಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ತೆರಿಗೆ ಪದ್ಧತಿಯಲ್ಲಿ ಒಂದಿಷ್ಟು ಬದಲಾವಣೆ ತರಲು ಟ್ರಂಪ್‌ ಸರಕಾರ ಮುಂದಾಗಿದ್ದು, ರಿಪಬ್ಲಿಕ ನ್ನರಿಂದಲೂ ಸಮ್ಮತಿ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next