Advertisement

ಅಣ್ವಸ್ತ್ರ ಯುದ್ಧಕ್ಕೆ ಟ್ರಂಪ್‌ ಒತ್ತಾಸೆ

01:30 PM Nov 12, 2017 | Team Udayavani |

ಹನೋಯಿ: ವಿಯೆಟ್ನಾಂನಲ್ಲಿ ನಡೆಯಲಿರುವ ಏಷ್ಯಾ ಪೆಸಿಫಿಕ್‌ ವಲಯದ ಸಮ್ಮೇಳನದಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಗಮಿಸುತ್ತಿದ್ದಂತೆಯೇ, ಟ್ರಂಪ್‌ರನ್ನು ಯುದೊœàತ್ಸಾಹಿ ಎಂದು ಉತ್ತರ ಕೊರಿಯಾ ಟೀಕಿಸಿದೆ. ನಮ್ಮ ದೇಶದ ಮೇಲೆ ಅಣ್ವಸ್ತ್ರ ಯುದ್ಧ ನಡೆಸುವುದಕ್ಕಾಗಿಯೇ ಅಮೆರಿಕ ಅಧ್ಯಕ್ಷ ಟ್ರಂಪ್‌ ಏಷ್ಯಾ ಪ್ರವಾಸ ಕೈಗೊಂಡಿದ್ದರು ಎಂದು ಉತ್ತರ ಕೊರಿಯಾದ ಹಿರಿಯ ಅಧಿಕಾರಿ ಆರೋಪಿಸಿದ್ದಾರೆ. ಏಷ್ಯಾ ಪೆಸಿಫಿಕ್‌ ದೇಶಗಳ ಸಭೆ ನಡೆಸುತ್ತಿರುವುದೇ ಯುದ್ಧಕ್ಕೆ ಬೆಂಬಲ ಪಡೆಯುವುದಕ್ಕಾಗಿ ಮತ್ತು ಟ್ರಂಪ್‌ ಪ್ರಚೋದನೆಯಿಂದ ಅಣ್ವಸ್ತ್ರ ಯುದ್ಧಕ್ಕೆ ನಾವು ಇನ್ನಷ್ಟು ತಯಾರಾಗುವ ಸನ್ನಿವೇಶ ಎದುರಾಗಿದೆ ಎಂದು ಎಂದು ಅದು ಆರೋಪಿಸಿದೆ.  

Advertisement

ಸಿರಿಯಾ ಶಾಂತಿಗೆ ಕ್ರಮ: ಸೇನಾ ಕಾರ್ಯಾಚಾರಣೆ ಮೂಲಕ ಸಿರಿಯಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿರಲು ಅಮೆರಿಕ ಮತ್ತು ರಷ್ಯಾ ನಿರ್ಧರಿಸಿವೆ. ಈ ನಡುವೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಪ್ರಭಾವ ಬೀರಲಿಲ್ಲ ಎನ್ನುವುದನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆಂದು ಟ್ರಂಪ್‌ ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್‌ ಒಂದು ವರ್ಷ ಪೂರ್ತಿಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next