Advertisement

Panaji: ಪರವಾನಿಗೆ ಇಲ್ಲದೆ ದೋಣಿ ವಿಹಾರ… ಮಾಲೀಕ, ನಿರ್ವಾಹಕನ ವಿರುದ್ಧ ಪ್ರಕರಣ

10:31 AM May 24, 2024 | Team Udayavani |

ಪಣಜಿ: ಪ್ರಯಾಣಿಕರ ಸಾಗಣೆಗೆ ಪರವಾನಿಗೆ ಇಲ್ಲದೇ ದೋಣಿ ವಿಹಾರ ನಡೆಸಿ 24 ಪ್ರವಾಸಿಗರ ಜೀವಕ್ಕೆ ಅಪಾಯ ತಂದೊಡ್ಡಿದ ಆರೋಪದ ಮೇಲೆ ನೆರೂಲ್ ಪ್ಯಾರಡೈಸ್ ಬೋಟ್ ನ ಮಾಲೀಕ ವಾಸುದೇವ್ ಕಲಂಗುಟ್ಕರ್ ಜತೆ ನಿರ್ವಾಹಕ ಅಭಿಷೇಕ್ ರಾಥೋಡ್ (20) ವಿರುದ್ಧ ಹಾರ್ಬರ್ ಕರಾವಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಬಂದರು ಕರಾವಳಿ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಪ್ರೀತೇಶ್ ಗೋವೇಕರ ಮುಂದಿನ ತನಿಖೆ ನಡೆಸುತ್ತಿದ್ದಾರೆ.

Advertisement

ನೆರೂಲ್ ಪ್ಯಾರಡೈಸ್ ಜಲಸಫರ್ ಬೋಟ್ ಮೇ 19 ರಂದು ಸಂಜೆ 24 ಪ್ರವಾಸಿಗರು ಮತ್ತು ಇಬ್ಬರು ಸಿಬ್ಬಂದಿಗಳೊಂದಿಗೆ ಪಣಜಿಯಿಂದ ಜಲಸಫರ್‍ಗೆ ಬಂದಿತು. ಸಂಜೆ ನಂತರ ಪಣಜಿಗೆ ಹಿಂತಿರುಗುತ್ತಿದ್ದಾಗ ಬೋಟ್‍ನಲ್ಲಿ ಇಂಧನ ಖಾಲಿಯಾದ ಕಾರಣ ನಿರ್ವಾಹಕರು ಬೋಟ್‍ನ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದಾಗಿ ಮುಗಾರ್ಂವ್ ಕರಾವಳಿ ಪ್ರದೇಶದಲ್ಲಿ ದೋಣಿ ದಾರಿ ತಪ್ಪಿತು. ಪ್ರತಿಕೂಲ ಹವಾಮಾನ ಮತ್ತು ಇಂಧನ ಖಾಲಿಯಾಗಿರುವುದು ಕಾರಣ, ಬೋಟ್ ಸುಮಾರು ಮೂರು ಮೀಟರ್ ಎತ್ತರದ ಅಲೆಯಲ್ಲಿ ಕಂಡುಬಂದಿದೆ. ಬೋಟ್ ಅಲೆಯುತ್ತಿದ್ದಂತೆ ದೋಣಿಯಲ್ಲಿದ್ದ ಪ್ರವಾಸಿಗರಲ್ಲಿ ಗೊಂದಲ ಉಂಟಾಯಿತು. ಅವರು ಕಿರುಚಲು ಪ್ರಾರಂಭಿಸಿದರು. ಆ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಕೋಸ್ಟ್ ಗಾರ್ಡ್ ಗಸ್ತು ನೌಕೆಯು ಬೋಟ್ ದುರಂತದಲ್ಲಿ ಸಿಲುಕಿರುವುದನ್ನು ಕಂಡ ಕೂಡಲೆ ಗಸ್ತು ನೌಕೆಯನ್ನು ತಕ್ಷಣವೇ ಬೋಟ್ ಬಳಿ ತಿರುಗಿಸಲಾಯಿತು. ಬಳಿಕ ಬೋಟಿನಲ್ಲಿದ್ದ ಎಲ್ಲರನ್ನೂ ಸಮಾಧಾನಪಡಿಸಿ ಬೋಟ್ ಅನ್ನು ಮುರಗಾಂವ್ ಬಂದರಿಗೆ ತರಲಾಯಿತು. ಡೊನಾಪಾವುಲ್‍ದಿಂದ ಆಳ ಸಮುದ್ರದಲ್ಲಿ ಬೋಟ್ ತೊಂದರೆಗೆ ಸಿಲುಕಿದೆ.

ವಿಷಯ ತಿಳಿದು ಬಂದರು ಕರಾವಳಿ ಪೊಲೀಸರು ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ದೋಣಿಯಲ್ಲಿ ಪ್ರವಾಸಿಗರು ಮತ್ತು ಪ್ರಯಾಣಿಕರನ್ನು ಸಾಗಿಸಲು ಸಂಬಂಧಪಟ್ಟವರು ಯಾವುದೇ ಪರವಾನಗಿ ಅಥವಾ ದಾಖಲೆಗಳನ್ನು ಹೊಂದಿಲ್ಲ. ಅವರು ಪ್ರಯಾಣಿಕರನ್ನು ಸಾಗಿಸಲು ಯಾವುದೇ ಪತ್ರವ್ಯವಹಾರವನ್ನು ಮಾಡಿರಲಿಲ್ಲ. ಈ ಬೋಟ್ ಓಡಿಸುತ್ತಿದ್ದ ಅಭಿಷೇಕ್ ರಾಥೋಡ್ ಬೋಟ್ ಚಲಾಯಿಸಲು ಯಾವುದೇ ಪರವಾನಗಿ ಹೊಂದಿರಲಿಲ್ಲ. ಪರವಾನಿಗೆ ಇಲ್ಲದೆ ಸಮುದ್ರದಲ್ಲಿ ಬೋಟ್ ನಿರ್ಲಕ್ಷದಿಂದ ನಡೆಸಿದ್ದರಿಂದ ಪ್ರವಾಸಿಗರು ಹಾಗೂ ಸಿಬ್ಬಂದಿಯ ಜೀವಕ್ಕೆ ಅಪಾಯ ತಂದೊಡ್ಡಿದೆ. ಅದೃಷ್ಟವಶಾತ್ ಭಾರತೀಯ ಕೋಸ್ಟ್ ಗಾರ್ಡ್ ಗಸ್ತು ಬೋಟ್ ಅಲ್ಲಿಗೆ ಆಗಮಿಸಿ ಪ್ರವಾಸಿಗರನ್ನು ರಕ್ಷಿಸಿದೆ.

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ‘ರಾಜಕೀಯ ಸಾವಿರ ಪಟ್ಟು ಹೆಚ್ಚು’; ಲ್ಯಾಂಗರ್ ಬಳಿ ರಾಹುಲ್ ಹೇಳಿದ್ದೇನು?

Advertisement

Udayavani is now on Telegram. Click here to join our channel and stay updated with the latest news.

Next