Advertisement

ಅಫ್ಘಾನ್ ನಲ್ಲಿ ಕದನ ವಿರಾಮ: ಶೀಘ್ರದಲ್ಲಿ ತಾಲಿಬಾನ್ ಮುಖಂಡರನ್ನು ಭೇಟಿಯಾಗಲಿರುವ ಟ್ರಂಪ್

10:01 AM Mar 02, 2020 | Mithun PG |

ವಾಷಿಂಗ್ಟನ್: ಅಫ್ಘಾನಿಸ್ಥಾನದಲ್ಲಿ ಹೊಸದಾಗಿ  ಏರ್ಪಟ್ಟಿರುವ ಅಮೆರಿಕಾ ಹಾಗೂ ತಾಲಿಬಾನ್ ಬಂಡುಕೋರರ ನಡುವಿನ ಕದನ ವಿರಾಮ ಒಪ್ಪಂದವನ್ನು ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ವ್ಯೆಯಕ್ತಿಕವಾಗಿ ತಾಲಿಬಾನ್ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ  ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಶ್ವೇತಭವನದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಒಪ್ಪಂದದ ನಂತರ ಅಫ್ಘಾನಿಸ್ಥಾನದಲ್ಲಿ ಸ್ಥಿರತೆ ಕಾಪಾಡಲು ಎಲ್ಲರೂ ಸಹಕರಿಸಬೇಕು. ಹಾಗೂ ಮುಂದಿನ 14 ತಿಂಗಳುಗಳಲ್ಲಿ ಅಮೆರಿಕಾ ಸೇನೆ ಹಂತಹಂತವಾಗಿ ಅಫ್ಘಾನ್ ನಿಂದ ವಾಪಾಸ್ ಹೋಗಲಿದೆ ಎಂದು ತಿಳಿಸಿದರು.

ಈ ಒಪ್ಪಂದದ ಮೂಲಕ 19 ವರ್ಷಗಳ ಸುದೀರ್ಘ ಯುದ್ಧಕ್ಕೆ  ತೆರಬಿದ್ದಿದೆ. ತಾಲಿಬಾನ್ ಮುಖಂಡರೊಂದಿಗೆ ಮಾತುಕತೆ ಜಟಿಲವಾಗುತ್ತದೆ ಎಂದು ಹಲವರು ಭಾವಿಸಿದ್ದರು. ಆದರೆ ಯುದ್ದದಿಂದ ಪ್ರತಿಯೊಬ್ಬರು ಬೇಸೆತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆ ಮಾತುಕತೆಗಳು ಯಶಸ್ವಿಯಾಗಲಿವೆ ಎಂದು ಭರವಸೆ ಅವರು ವ್ಯಕ್ತಪಡಿಸಿದ್ದಾರೆ.

ಅಫ್ಘಾನ್‌ ನೆಲದಲ್ಲಿ ರಕ್ತಪಾತಕ್ಕೆ ಕಾರಣವಾಗಿದ್ದ ತಾಲಿಬಾನ್‌ ಉಗ್ರರು ಮತ್ತು ಅವರನ್ನು ಹಿಮ್ಮೆಟ್ಟಿಸಲು ಅಲ್ಲಿ 2001ರಿಂದ ಕದನ ನಿರತವಾಗಿದ್ದ ಅಮೆರಿಕ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದೆ. ಮುಂದಿನ 14 ತಿಂಗಳುಗಳಲ್ಲಿ ಅಮೆರಿಕ ಸೇನೆ ಹಂತ-ಹಂತವಾಗಿ ವಾಪಸ್‌ ಹೋಗಲಿದೆ.

 

Advertisement

ಕತಾರ್‌ ರಾಜಧಾನಿ ದೋಹಾದಲ್ಲಿರುವ ಶೆರಟಾನ್‌ ಹೊಟೇಲ್‌ನಲ್ಲಿ ಅಫ್ಘಾನಿಸ್ಥಾನದಲ್ಲಿರುವ ಅಮೆರಿಕದ ಪ್ರತಿನಿಧಿ ಝಲ್ಮಯ್‌ ಖಲೀಜಾದ್‌ ಹಾಗೂ ತಾಲಿಬಾನ್‌ನ ನಾಯಕರ ಪ್ರತಿನಿಧಿ ಮುಲ್ಲಾ ಅಬ್ದುಲ್‌ ಘನಿ ಬರಾದಾರ್‌ ಸಹಿ ಹಾಕಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶಿಂಗ್ಲಾ ಸೇರಿ ಪಾಕಿಸ್ಥಾನ, ಇಂಡೋನೇಷ್ಯಾ, ಉಜ್ಬೇಕಿಸ್ಥಾನ, ತಜಕಿಸ್ಥಾನ ಸಹಿತ ಸುಮಾರು 30 ರಾಷ್ಟ್ರಗಳ ಪ್ರತಿನಿಧಿಗಳು ಹಾಗೂ ವಿಶ್ವ ಸಂಸ್ಥೆಯ ಸದಸ್ಯರು ಈ ಐತಿಹಾಸಿಕ ಒಪ್ಪಂದಕ್ಕೆ ಸಾಕ್ಷಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next