Advertisement
ಹಲವು ಆರೋಪಗಳ ಮೇರೆಗೆ ಅಮೆರಿಕದ ತನಿಖಾ ಸಂಸ್ಥೆಗಳಿಂದ ತನಿಖೆ ಎದುರಿಸುತ್ತಿರುವ ಟ್ರಂಪ್, ಆ ಸಂಸ್ಥೆಗಳೆಂದರೆ ಕಿಡಿಕಾರುವ ವ್ಯಾಕೊ ಪ್ರದೇಶದಲ್ಲೇ ತಮ್ಮ ಮೊದಲ ರ‍್ಯಾಲಿ ನಡೆಸಲಿದ್ದಾರೆ. 1993ರಲ್ಲಿ ಫೆಡರಲ್ ಏಜೆಂಟ್ಸ್‌ಗಳ ಮುತ್ತಿಗೆಯಿಂದ 51 ದಿನಗಳ ಹತ್ಯಾಕಾಂಡ ವ್ಯಾಕೊದಲ್ಲಿ ನಡೆದಿತ್ತು. ಹಾಗಾಗಿ ಇಲ್ಲಿನ ಜನ ಈ ತನಿಖಾಸಂಸ್ಥೆಗಳ ಬಗ್ಗೆ ಒಳ್ಳೆಯ ಭಾವನೆ ಹೊಂದಿಲ್ಲ.
ಟ್ರಂಪ್ ಅದೆಷ್ಟೇ ಮುಂಚೆ ಅಧ್ಯಕ್ಷೀಯ ಚುನಾವಣೆಗೆ ಸಿದ್ಧವಾಗಿರಬಹುದು. ಆದರೆ ಸ್ಥಿತಿ ಅಷ್ಟು ಸುಲಭವಾಗಿಲ್ಲ. ಅಪಾರ ಬೆಂಬಲಿಗರನ್ನು ಹೊಂದಿದ್ದರೂ, ಅವರಿಗೆ ರಿಪಬ್ಲಿಕನ್ ಪಕ್ಷದೊಳಗೆಯೇ ಪೈಪೋಟಿ ಇದೆ. ಭಾರತೀಯ ಮೂಲದ ಪ್ರಭಾವಿ ರಾಜಕಾರಣಿ ನಿಕ್ಕಿ ಹ್ಯಾಲೆ, ಯುವ ಉದ್ಯಮಿ ವಿವೇಕ್ ರಾಮಸ್ವಾಮಿ ಕೂಡ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿಗಳೆಂದು ಈಗಾಗಲೇ ಖಚಿತಪಡಿಸಿದ್ದಾರೆ.