ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿರುವುದು ತಪ್ಪು ಆಯ್ಕೆ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಪತ್ನಿ ಮಿಷಲ್ ಒಬಾಮ ಟೀಕಿಸಿದ್ದಾರೆ. ಮಂಗಳವಾರ ಶುರು ವಾದ ಡೆಮಾಕ್ರಟಿಕ್ ಪಕ್ಷದ ನಾಲ್ಕು ದಿನಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದ ಪರಿಸ್ಥಿತಿ ಉತ್ತವಾಗಿ ಇರಬೇಕು ಎಂದು ಬಯಸುವುದಿದ್ದರೆ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್‌ಗೆ ಮತ ಹಾಕಿ ಅವರನ್ನೇ ಗೆಲ್ಲಿಸಬೇಕು ಎಂದು ಮಾಜಿ ಅಧ್ಯಕ್ಷರ ಪತ್ನಿ ಹೇಳಿದ್ದಾರೆ.
“ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ತಪ್ಪು. ಅವರಿಗೆ ಸಾಕಷ್ಟು ಅವಕಾಶಗಳಿದ್ದರೂ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ಹೀಗಾಗಿ ನಾವು ಉತ್ತಮ ಮತ್ತು ಕಠಿನ ನಿರ್ಧಾರ ಕೈಗೊಳ್ಳಬೇಕಾಗಿದೆ. ಟ್ರಂಪ್ ನಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಇಲ್ಲ’ ಎಂದು ಕಟುವಾಗಿ ವಾಗ್ಧಾಳಿ ನಡೆಸಿದ್ದಾರೆ.
ಅಕ್ಟೋಬರ್- ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗಾಗಿ ಪ್ರಚಾರ ಈಗಾ ಗಲೇ ಬಿರುಸಾಗಿದೆ. ಇತ್ತೀಚೆಗಷ್ಟೇ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡ ಟ್ರಂಪ್ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ ದ್ದರು. ಇದೀಗ ಅವರ ಪತ್ನಿ ಮಿಷೆಲ್ ಒಬಾಮ ಕೂಡ ದನಿಗೂಡಿಸಿರುವುದು ಪ್ರಚಾರದ ಕಣವನ್ನು ರಂಗೇರಿಸಿದೆ.
ಸೋಂಕು ನಿರ್ವಹಣೆಯೂ ತೃಪ್ತಿಕರವಾಗಿಲ್ಲ. ಟ್ರಂಪ್ ಆಡಳಿತದಲ್ಲಿ 33 ಕೋಟಿ ಜನರ ಜೀವ ಈಗ ಅಪಾಯದಲ್ಲಿದೆ ಎಂದು ದೂರಿದರು ಮಿಷೆಲ್.
“ನಾವೆಲ್ಲರೂ ಸಾಮಾಜಿಕವಾಗಿ ವಿಭಜನೆ ಗೊಂಡಿ ರುವ ಅಮೆರಿಕದಲ್ಲಿ ಜೀವಿಸುತ್ತಿದ್ದೇವೆ. ಇಂಥ ಪರಿಸ್ಥಿತಿಯನ್ನು ಕೊನೆಗಾಣಿಸಬೇಕಾದರೆ ಇಡೀ ಅಮೆರಿಕವೇ ಒಗ್ಗೂಡಿ, ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಪಟ್ಟದ ಅಭ್ಯರ್ಥಿ ಜೊ ಬಿಡೆನ್ ಅವರಿಗೆ ಮತ ಚಲಾಯಿಸಬೇಕು. ನಮ್ಮ ಮುಂದಿನ ಜೀವನ ಸುಗಮವಾಗಿರಬೇಕೆಂದರೆ ಬಿಡೆನ್ ಅವರಿಗೆ ಮತ ಹಾಕುವುದು ಅನಿ ವಾರ್ಯ’ ಎಂದರು.
ಸಂಕಿರಣದಲ್ಲಿ ಮಾತನಾಡಿದ ಭಾರತ ಮೂಲದ ನಾಯಕ ಸರಾ ಜಿಡಿಯೊ, “ಬಿಡೆನ್ ಅಧಿಕಾರಕ್ಕೆ ಬಂದರೆ ಅಮೆರಿಕದ ಆರ್ಥಿಕತೆ ಉತ್ತಮಗೊಳ್ಳುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಅಮೆರಿಕದ ಆರ್ಥಿಕತೆ ಉತ್ತಮಗೊಳ್ಳುವುದು ಅನಿವಾರ್ಯ’ ಎಂದರು.
ಇದೇ ಕಾರ್ಯಕ್ರಮದಲ್ಲಿ ಸಂಸದೆ ಕಮಲಾ ಹ್ಯಾರಿಸ್ ಅವರನ್ನು ಅಧಿಕೃತವಾಗಿ ಪಕ್ಷದ ಉಪಾಧ್ಯಕ್ಷ ಸ್ಥಾನದ ಹುರಿಯಾಳು ಎಂದು ಘೋಷಣೆ ಮಾಡಲಾಗುತ್ತದೆ.