Advertisement

ಸರ್ಕಾರಿ ವಿಶೇಷ ಸೌಲಭ್ಯ ಮೇಲೆ ಟ್ರಂಪ್‌ ಕೆಂಗಣ್ಣು

03:45 AM Feb 04, 2017 | |

ವಾಷಿಂಗ್ಟನ್‌: ಧಾರ್ಮಿಕ ಹಿನ್ನೆಲೆಯಲ್ಲಿ ಉದ್ಯೋಗಕ್ಕೆ ಸೇರಿದ, ಸರ್ಕಾರಿ ವಿಶೇಷ ಸೌಲಭ್ಯ ಲಾಭ ಪಡೆದ ವ್ಯಕ್ತಿಗಳು, ಸಂಘ- ಸಂಸ್ಥೆಗಳ ಅವಕಾಶಗಳನ್ನು ಹಿಂತೆಗೆದುಕೊಳ್ಳಲು ಟ್ರಂಪ್‌ ಚಿಂತಿಸುತ್ತಿದ್ದಾರೆ ಎಂದು ಅಮೆರಿಕದ ಪ್ರಭಾವಿ ಪತ್ರಿಕೆಗಳು ವರದಿ ಮಾಡಿವೆ.

Advertisement

“ಸರ್ಕಾರದ ಉದಾರ ಧಾರ್ಮಿಕ ಸ್ವಾತಂತ್ರ ಗೌರವ’ ಯೋಜನೆ ಜಾರಿತರುವಂತೆ ಸ್ಥಳೀಯ ಧಾರ್ಮಿಕ ಸಂಸ್ಥೆಗಳು ಅಮೆರಿಕ ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದವು. ಟ್ರಂಪ್‌ ಇದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ ಎನ್ನಲಾಗಿದೆ. ಒಂದು ವೇಳೆ ಇದು ಜಾರಿಯಾದರೆ, ಸರ್ವಧರ್ಮಗಳ ಮುಕ್ತ ಸ್ವಾತಂತ್ರಕ್ಕೆ ಅಡ್ಡಿಯಾಗಲಿದೆ. ಸಲಿಂಗಿ ವಿವಾಹ ನೀತಿ ರದ್ದಾಗಲಿದೆ. 

ಇನ್ನು ಇರಾನ್‌ ನಡೆಸಿರುವ ಪರಮಾಣು ಕ್ಷಿಪಣಿ ಪರೀಕ್ಷೆಯನ್ನು ಅಮೆರಿಕ ಗಂಭೀರವಾಗಿ ತೆಗೆದುಕೊಂಡಿದ್ದು, ಆ ದೇಶದ ಮೇಲೆ ಹೊಸ ಆರ್ಥಿಕ ದಿಗ್ಬಂಧನ ಹೇರಿದೆ. ಇವೆಲ್ಲ ಬೆಳವಣಿಗೆಗಳ ಮಧ್ಯೆ ಪಬ್ಲಿಸ್‌ ಪಾಲಿಸಿ ಪೊಲಿಂಗ್‌ ನಡೆಸಿದ ಸರ್ವೆಯಲ್ಲಿ ಶೇ.52ರಷ್ಟು ಅಮೆರಿಕನ್ನರು ಒಬಾಮರನ್ನು ಬೆಂಬಲಿಸಿದ್ದು, ಅವರೇ ಅಧ್ಯಕ್ಷರಾಗಿ ಮುಂದುವರಿಯಬೇಕಿತ್ತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next