Advertisement

US Election: ಫ್ರೆಂಚ್‌ ಫ್ರೈಸ್‌ ತಯಾರಿಸಿ ಕಮಲಾಗೆ ಟಾಂಗ್‌ ಕೊಟ್ಟ ಡೊನಾಲ್ಡ್‌ ಟ್ರಂಪ್‌

11:28 PM Oct 21, 2024 | Team Udayavani |

ಫಿಲಿಡೆಲ್ಫಿಯಾ: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಬಿರುಸಿನ ಪ್ರಚಾರ ನಡೆಸುತ್ತಿರುವ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಭಾನುವಾರ ಫಿಲಿಡೆಲ್ಫಿಯಾದಲ್ಲಿರುವ ಮೆಕ್‌ಡೊನಾಲ್ಡ್‌ ಮಳಿಗೆಗೆ ಭೇಟಿ ನೀಡಿ ಫ್ರೆಂಚ್‌ ಫ್ರೈಸ್‌ ತಯಾರಿಸಿದರು.

Advertisement

ತಮ್ಮ ಉಡುಪಿನ ಮೇಲೆ ಏಪ್ರನ್‌ ತೊಟ್ಟ ಟ್ರಂಪ್‌, ಆಲೂಗೆಡ್ಡೆಗಳನ್ನು ಎಣ್ಣೆಯಲ್ಲಿ ಕರಿಯುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇತ್ತೀಚೆಗೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ತಮ್ಮ ಕಾಲೇಜು ದಿನಗಳಲ್ಲಿ ಮೆಕ್‌ಡೊನಾಲ್ಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದ್ದರು. ಕಮಲಾಗಿಂತ 15 ನಿಮಿಷ ಹೆಚ್ಚು ಕಾಲ ಮೆಕ್‌ಡೊನಾಲ್ಡ್‌ನಲ್ಲಿ ದುಡಿದಿದ್ದೇನೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next