Advertisement

ನೆರವು ಪಡೆದವರಿಗಿಲ್ಲ ಗ್ರೀನ್‌ ಕಾರ್ಡ್‌

12:43 PM Sep 24, 2018 | Karthik A |

ವಾಷಿಂಗ್ಟನ್‌ : ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ಸಂಗಾತಿಗಳಿಗೆ ನೀಡಲಾಗುವ ಎಚ್‌ 4 ವೀಸಾ ರದ್ದು ಮಾಡುವ ಪ್ರಸ್ತಾವದ ಜತೆಗೆ ಸರಕಾರದಿಂದ ಆಹಾರ ಮತ್ತು ಆರ್ಥಿಕ ನೆರವು ಪಡೆಯುವವರಿಗೆ ಗ್ರೀನ್‌ ಕಾರ್ಡ್‌ ನೀಡುವುದನ್ನೂ ಅಮೆರಿಕ ರದ್ದು ಮಾಡಲಿದೆ. ಈ ಬಗ್ಗೆ ಸೆ.21ರಂದೇ ಡಿಪಾರ್ಟ್‌ಮೆಂಟ್‌ ಆಫ್ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ (ಡಿಎಚ್‌ಎಸ್‌) ಪ್ರಸ್ತಾವಕ್ಕೆ ಸಹಿ ಹಾಕಿ ವೆಬ್‌ಸೈಟ್‌ನಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಿದೆ. ಈ ಕ್ರಮದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಿಗೆ ತೊಂದರೆಯಾಗಲಿದೆ.

Advertisement

ಸದ್ಯ ಇರುವ ವಲಸಿಗರು, ಅಮೆರಿಕದಲ್ಲಿನ ವಾಸ್ತವ್ಯ ಅವಧಿ ವಿಸ್ತರಿಸಬೇಕು ಎಂದು ಬಯಸುವವರು, ತಾವು ಸರಕಾರದ ಯಾವುದೇ ನೆರವು ಸ್ವೀಕರಿಸಿಲ್ಲ ಮತ್ತು ಸ್ವೀಕರಿಸಲ್ಲ ಎಂಬ ಮಾಹಿತಿಯನ್ನು ಹೊಸ ನಿಯಮದ ಅನ್ವಯ ನೀಡಬೇಕಾಗುತ್ತದೆ. ಇನ್ನು ಮುಂದೆ ಅಮೆರಿಕಕ್ಕೆ ತೆರಳಬೇಕೆಂದು ಬಯಸುವವರು, ಆರ್ಥಿಕವಾಗಿ ತಮಗೆ ತಾವೇ ಸ್ವಾವಲಂಬಿಗಳು ಎಂದು ತೋರಿಸಿಕೊಳ್ಳಬೇಕು ಎಂದು ಸರಕಾರ ಹೇಳಿದೆ. ಅಮೆರಿಕದ ಸಂಸತ್‌ನಲ್ಲಿ ಈ ಪ್ರಸ್ತಾವಿತ ಕಾಯ್ದೆಗೆ ಅನುಮೋದನೆ ಸಿಕ್ಕಿದ ಬಳಿಕ ಅದು ಅನುಷ್ಠಾನಕ್ಕೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next