Advertisement
ಪಾಕ್‌ನಲ್ಲಿ ಉಗ್ರರ ಸುರಕ್ಷಿತ ತಾಣಗಳು ಸಾಕಷ್ಟು ಇದ್ದು, ಅವುಗಳನ್ನು ನಿರ್ನಾಮಗೊಳಿಸುವುದೇ ಸೂಕ್ತ ಎಂಬ ವಾದ ಕೇಳಿ ಬಂದಿದೆ. 2002ರಿಂದ ಈಚೆಗೆ ಅಮೆರಿಕ ಪಾಕಿಸ್ಥಾನಕ್ಕೆ 2.13 ಲಕ್ಷ ಕೋ. ರೂ. ಮೌಲ್ಯದ ಹಣಕಾಸು ಮತ್ತು ಶಸ್ತ್ರಾಸ್ತ್ರಗಳನ್ನು ನೀಡಿದೆ. ಆದರೆ ಇಂಥ ಕ್ರಮದಿಂದ ತತ್‌ಕ್ಷಣ ಯಾವುದೇ ರೀತಿಯ ಯಶಸ್ಸು ದೊರೆಯುವುದು ಕಷ್ಟವೆಂದು ಅಮೆರಿಕ ಸರಕಾರದ ಅಧಿಕಾರಿಗಳೇ ಹೇಳುತ್ತಾರೆ. ಹಿಂದಿನ ಸರಕಾರಗಳು ಕೈಗೊಂಡ ಕ್ರಮಗಳು ಉಗ್ರ ಸಂಘಟನೆಗಳಿಗೆ ಪಾಕ್ ನೀಡುತ್ತಿರುವ ನೆರವು ತಗ್ಗಿಸುವ ನಿಟ್ಟಿನಲ್ಲಿ ನಿರೀಕ್ಷಿತ ಫಲ ನೀಡಿಲ್ಲ. ಆದರೆ ಭಾರತದ ಜತೆ ವೃದ್ಧಿಯಾಗುತ್ತಿರುವ ಬಾಂಧವ್ಯ ಕೂಡ ಪಾಕ್ ಜತೆಗಿನ ಅಮೆರಿಕದ ಸಂಬಂಧಗಳ ಮೇಲೆ ಕರಿ ಛಾಯೆ ಬೀರೀತು ಎಂದಿದ್ದಾರೆ. ಪಾಕ್ ಜತೆಗೂ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವ ಬಗ್ಗೆ ಅಲ್ಲಿನ ಕೆಲ ಅಧಿಕಾರಿಗಳು ಮುಂದಾಗಿದ್ದಾರೆ. Advertisement
ಪಾಕ್‌ಉಗ್ರ ನೆಲೆಗಳಿಗೆ ಡ್ರೋನ್ ದಾಳಿ: ಅಮೆರಿಕ ಸಜ್ಜು?
07:45 AM Jun 21, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.