Advertisement

ಅಧ್ಯಕ್ಷ ಟ್ರಂಪ್‌ ದೋಷಮುಕ್ತಿ; ಡೆಮಾಕ್ರಾಟ್‌ ಪಕ್ಷದ ನಾಯಕರಿಗೆ ಭಾರೀ ಹಿನ್ನಡೆ

10:18 AM Feb 07, 2020 | Sriram |

ವಾಷಿಂಗ್ಟನ್‌: ವರ್ಷಾಂತ್ಯದಲ್ಲಿ ಅಧ್ಯಕ್ಷೀಯ ಚುನಾವಣೆ ಎದುರಿಸಲಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಅಮೆರಿಕದ ಸೆನೆಟ್‌ ನೆಮ್ಮದಿಯ ಸುದ್ದಿಯನ್ನೇ ಕೊಟ್ಟಿದೆ. ಅವರ ವಿರುದ್ಧ ಸದ್ಯ ನಡೆಯುತ್ತಿರುವ ವಾಗ್ಧಂಡನೆ ಪ್ರಕ್ರಿಯೆಯಲ್ಲಿ ಮಾಡಲಾಗಿರುವ ಎಲ್ಲಾ ಆರೋಪಗಳಿಂದ ಟ್ರಂಪ್‌ರನ್ನು ದೋಷಮುಕ್ತಿಗೊಳಿಸಿದೆ.

Advertisement

ಅಮೆರಿಕ ಸಂಸತ್‌ನ ಮೇಲ್ಮನೆ-ಸೆನೆಟ್‌ನಲ್ಲಿ ಆಡಳಿತಾರೂಢ ಪಕ್ಷ ರಿಪಬ್ಲಿಕನ್‌ ಪಾರ್ಟಿಯ ಬಾಹುಳ್ಯ ಹೆಚ್ಚಿರುವ ಕಾರಣ, ಅಧ್ಯಕ್ಷರ ವಿರುದ್ಧದ ವಾಗ್ಧಂಡನೆಯ ಆರೋಪಗಳಿಗೆ 52-48ರ ಅಂತರದಲ್ಲಿ ಸೋಲು ಕಾಣಿಸಲಾಯಿತು. ಇದರ ಜತೆಗೆ ಅಮೆರಿಕ ಸಂಸತ್‌- ಕಾಂಗ್ರೆಸ್‌ನ ಕಾರ್ಯಚಟುವಟಿಕೆಗಳಿಗೆ ಅಡ್ಡಿ ಉಂಟು ಮಾಡಿದ್ದಾರೆ ಎಂಬ ಆರೋಪಗಳನ್ನು 53-47 ಮತಗಳ ಅಂತರದಲ್ಲಿ ತಿರಸ್ಕರಿಸಲಾಯಿತು.

ರಿಪಬ್ಲಿಕನ್‌ ಸೆನೆಟರ್‌ ಮಿಟ್‌ ರೊಮೆನಿ ಮೊದಲ ಆರೋಪಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಟ್ರಂಪ್‌ ವಿರುದ್ಧ ಮತ ಹಾಕಿದ್ದಾರೆ. ಟ್ರಂಪ್‌ರ ಕಟುಟೀಕಾಕಾರರಾಗಿರುವ ಅವರು ಎರಡನೇ ನಿರ್ಣಯದ ಪರವಾಗಿ ಮತ ಹಾಕಿದ್ದಾರೆ. ಬಳಿಕ ಹೇಳಿಕೆ ಬಿಡುಗಡೆ ಮಾಡಿದ ಶ್ವೇತಭವನ “ಅಧ್ಯಕ್ಷ ಟ್ರಂಪ್‌ ವಿರುದ್ಧ ಡೆಮಾಕ್ರಾಟ್‌ ಪಕ್ಷದ ಸದಸ್ಯರು ಹಿಂದಿನ ಸಂದರ್ಭಗಳಲ್ಲಿ ನಾಚಿಕೆ ಇಲ್ಲದ ರೀತಿಯಲ್ಲಿ ವರ್ತಿಸಿದ್ದಾರೆ. ಇನ್ನು ಮುಂದೆಯೂ ಮತ್ತು 2020ರ ನಂತರವೂ ಟ್ರಂಪ್‌ ಅವರು ಅಮೆರಿಕ ಪರವಾಗಿಯೇ ಕೆಲಸ ಮಾಡಲಿದ್ದಾರೆ’ ಎಂದು ಹೇಳಲಾಗಿದೆ.

ಟ್ರಂಪ್‌ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ನಿರ್ವಾಹಕ ಬ್ರಾಡ್‌ ಪಸ್ಕಾìಲ್‌ ಮಾತನಾಡಿ “ಅಧ್ಯಕ್ಷರ ವಿರುದ್ಧ ವಾಗ್ಧಂಡನೆ ಪ್ರಕ್ರಿಯೆ ನಡೆಸಿ ಅದರಲ್ಲಿ ಗೆಲ್ಲಲು ಸಾಧ್ಯವಿಲ್ಲದಿದ್ದರೂ ಡೆಮಾಕ್ರಾಟ್‌ ಪಕ್ಷದ ಸಂಸದರು ಅದನ್ನು ನಡೆಸಿದ್ದಾರೆ‌’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next