ನವದೆಹಲಿ: ಟ್ರೂಕಾಲರ್ ಸಂಸ್ಥೆಯು ತನ್ನ ಆ್ಯಂಡ್ರಾಯ್ಡ ಬಳಕೆದಾರರಿಗೆ ಹೊಸ ಅಪ್‌ಡೇಟ್ ತಂದಿದೆ. ವಿಡಿಯೋ ಕಾಲ್ ಮಾಡುವಾಗ ಅದರ ಸಣ್ಣ ತುಣುಕನ್ನು ರೆಕಾರ್ಡ್ ಮಾಡಿಕೊಳ್ಳಲು, ನಿಮ್ಮದೇ ವಿಡಿಯೋ ಕಾಲರ್ ಐಡಿಯನ್ನೂ ಸೆಟ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಹಾಗೆಯೇ ಆಡಿಯೋ ಕಾಲ್ ಅನ್ನು ರೆಕಾರ್ಡ್ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ:ಮಾರ್ಷಲ್ ಆರ್ಟ್ಸ್ ಕಲಿಸುತ್ತೇವೆ…ಆದರೆ ಆರೆಸ್ಸೆಸ್ ಸೇನಾ ಪಡೆಯಲ್ಲ: ಭಾಗವತ್
ಆಡಿಯೋ ರೆಕಾರ್ಡ್ ಆಯ್ಕೆ ಈ ಹಿಂದೆ ಸಬ್ ಸೆð„ಬ್ ಆಗಿರುವ ಗ್ರಾಹಕರಿಗೆ ಮಾತ್ರವೇ ನೀಡಲಾಗುತ್ತಿತ್ತು. ಇದೀಗ ಅದನ್ನು ಪ್ರತಿಯೊಬ್ಬ ಬಳಕೆದಾರರಿಗೆ ವಿಸ್ತರಿಸಲಾಗಿದೆ. ಜೊತೆಗೆ ಕಾಲ್ ಮಾಡಿದವರ ಹೆಸರು ಹೇಳುವ ಕಾಲ್ ಅನೌನ್ಸ್ ಸೌಲಭ್ಯ ಮತ್ತು ಘೋಸ್ಟ್ ಕಾಲ್ ಸೌಲಭ್ಯವನ್ನು ಪ್ರೀಮಿಯಂ ಬಳಕೆದಾರರಿಗೆ ಪರಿಚಯಿಸಿರುವುದಾಗಿ ಸಂಸ್ಥೆ ಹೇಳಿದೆ.
ಮ್ಯೂಸಿಕ್ ಆ್ಯಪ್ ಗಳಲ್ಲೂ ಇನ್ನು ಮನ್ ಕಿ ಬಾತ್
ಪ್ರಧಾನಿ ಮೋದಿ ಅವರ “ಮನ್ ಕಿ ಬಾತ್’ ಕಾರ್ಯಕ್ರಮ ಇನ್ನು ಎಲ್ಲಾ ಖಾಸಗಿ ರೇಡಿಯೋ ಮತ್ತು ಸಂಗೀತ ಆ್ಯಪ್‌ಗ್ಳಲ್ಲೂ ಲಭ್ಯವಾಗಲಿದೆ. ಸ್ಫೋಟಿಫೈ, ಹಂಗಾಮಾ, ಗಾನ, ಜಿಯೋಸಾವನ್, ವಿಂಕ್ ಮತ್ತು ಅಮೆಜಾನ್ ಮ್ಯೂಸಿಕ್‌ಗಳಲ್ಲಿ ಮನ್ ಕಿ ಬಾತ್ ಪ್ರಸಾರವಾಗಲಿದೆ. ಇದರಿಂದಾಗಿ ಹೆಚ್ಚಿನ ಜನರನ್ನು ವಿಶೇ ಷ ವಾಗಿ ಯುವ ಜನತೆಯನ್ನು ತಲುಪಲು ಸಾಧ್ಯವಾಗಲಿದೆ.