Advertisement
ಹೀಗೆ ಕ್ರೋಮಾ ಬ್ರಾಂಡ್ ನಿಂದ ಇತ್ತೀಚಿಗೆ ಬಿಡುಗಡೆಯಾಗಿರುವ ಹೊಸ ಉತ್ಪನ್ನ ಕ್ರೋಮಾ ಟ್ರೂ ವೈರ್ ಲೆಸ್ ಇಯರ್ ಬಡ್ಸ್. ಇದರ ದರ 1290 ರೂ. ಇದೆ. ಕ್ರೋಮಾ ಆಫ್‍ಲೈನ್ ಹಾಗೂ ಆನ್‍ಲೈನ್ ಸ್ಟೋರ್ ಗಳಲ್ಲಿ ಮಾತ್ರವಲ್ಲದೇ, ಅಮೆಜಾನ್, ಫ್ಲಿಪ್‍ಕಾರ್ಟ್ ನಲ್ಲೂ ದೊರಕುತ್ತದೆ. ಇದು ಮೇಡ್ ಇನ್ ಇಂಡಿಯಾ ಸ್ವದೇಶಿ ಇಯರ್ ಬಡ್. ಈ ಇಯರ್ ಬಡ್ ಗುಣ ವಿಶೇಷಗಳ ವಿವರ ಇಲ್ಲಿದೆ.
Related Articles
Advertisement
ಧ್ವನಿ ಗುಣಮಟ್ಟ: ಈ ಇಯರ್ ಬಡ್ ಗಳು 13 ಎಂಎಂ ಡ್ರೈವರ್ ಹೊಂದಿವೆ. ಮೊದಲೇ ಹೇಳಿದಂತೆ ಇದು ಕಿವಿಯ ಒಳಗೆ ಕೂರದ, ಕಿವಿಯ ಹೊರಭಾಗದಲ್ಲೇ ಇರುವ ಇಯರ್ ಬಡ್ ಆದ್ದರಿಂದ ಸಂಗೀತದ ಬಾಸ್ ಎಫೆಕ್ಟ್ ಅಷ್ಟಾಗಿ ಕೇಳಿಬರಲ್ಲ. ಆದರೆ ಬಾಸ್ ಹೊರತುಪಡಿಸಿದರೆ ಹಾಡುಗಳು ಸ್ಪಷ್ಟವಾಗಿ ಕೇಳುತ್ತವೆ. ಇದು ಕಿವಿಯೊಳಗೆ ಕೂರುವ ಇಯರ್ ಬಡ್ ಕಿರಿಕಿರಿಯಾಗುತ್ತದೆ, ವಾತಾವರಣದ ಶಬ್ದ ಕೇಳುವುದಿಲ್ಲ ಎಂದು ದೂರುವವರಿಗೆ ಇಂಥ ಇಯರ್ ಬಡ್ ಗಳು ಸೂಕ್ತ. ಹಾಗಾಗಿ 1300 ರೂ. ದರಪಟ್ಟಿಯ ದೃಷ್ಟಿಯಲ್ಲಿ ನೋಡಬಹುದಾದರೆ ಇದು ಪರವಾಗಿಲ್ಲ ಎಂದು ಹೇಳಬಹುದು.
ಎರಡು ಮೈಕ್ರೋಫೊನ್ ಗಳನ್ನು ಇಯರ್ ಬಡ್ ಹೊಂದಿದೆ. ಹೀಗಾಗಿ ಮಾತನಾಡಲು ಸಹ ಈ ಇಯರ್ ಬಡ್ ಬಳಸಬಹುದು. ಗಾಳಿಯಿರುವ ಹೊರ ಆವರಣದಲ್ಲಿ ಆ ಕಡೆಯವರಿಗೆ ಸ್ವಲ್ಪ ಕರೆ ಸ್ಪಷ್ಟವಾಗಿ ಕೇಳುವುದಿಲ್ಲ. ಒಳಾಂಗಣದಲ್ಲಿ ಕರೆ ಮಾಡಲು ಬಳಸಬಹುದು.
ಬ್ಯಾಟರಿ: ಇದರ ಕೇಸ್‍ನಲ್ಲಿ 20 ಗಂಟೆಗಳ ಬ್ಯಾಟರಿ ಇರುತ್ತದೆ. ಬಡ್ ಗಳಲ್ಲಿ 4.5 ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ.
ಈಗ ಟ್ರೂ ವಯರ್ ಲೆಸ್ ಇಯರ್ ಬಡ್ ಗಳ ಟ್ರೆಂಡ್ ಇದೆ. ಅಗ್ಗದ ದರದಲ್ಲಿ ಒಂದು ಸಾವಿರದ ಆಸುಪಾಸಿನಲ್ಲಿ ಟಿಡಬ್ಲೂಎಸ್ ಬೇಕು, ಸ್ವದೇಶಿ ಬ್ರಾಂಡ್ ಬೇಕು ಎನ್ನುವವರು ಕ್ರೋಮಾ ಇಯರ್ ಬಡ್ ಪರಿಗಣಿಸಬಹುದು.
-ಕೆ.ಎಸ್. ಬನಶಂಕರ ಆರಾಧ್ಯ