Advertisement

ಜಿಯೋದಿಂದ ತಲಕಾವೇರಿಯಲ್ಲಿ ಟ್ರೂ 4ಜಿ ಡಿಜಿಟಲ್ ಸೇವೆ ಆರಂಭ

10:50 PM Feb 21, 2023 | Team Udayavani |

ಬೆಂಗಳೂರು: ಕೊಡಗು ಜಿಲ್ಲೆಯ ತಲಕಾವೇರಿಯು ಕಾವೇರಿ ನದಿಯ ಉಗಮ ಸ್ಥಾನವಾಗಿದ್ದು, ಹಿಂದೂಗಳ ಪವಿತ್ರ ಸ್ಥಳವಾಗಿದೆ. ಕೊಡಗಿನ ಭಾಗಮಂಡಲದ ಬಳಿಯ ಬ್ರಹ್ಮಗಿರಿ ಬೆಟ್ಟಗಳಲ್ಲಿ ಈ ತಲಕಾವೇರಿ ಇದ್ದು, ರಿಲಯನ್ಸ್ ಜಿಯೋದಿಂದ ಇತ್ತೀಚೆಗೆ ತಲಕಾವೇರಿಯಲ್ಲಿ ಟ್ರೂ 4ಜಿ ಡಿಜಿಟಲ್ ಲೈಫ್ ಪರಿಚಯಿಸಲಾಗಿದೆ.

Advertisement

ಈಗ ಲಭ್ಯವಿರುವ ನೆಟ್‌ವರ್ಕ್‌ ಮೂಲಕವಾಗಿ ತಮ್ಮ ಮಕ್ಕಳು ಪ್ರತಿ ದಿನ ಹಲವು ಕಿಲೋ ಮೀಟರ್ ದೂರ ಪ್ರಯಾಣಿಸದೆಯೇ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಮತ್ತು ಯುವಕರು ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡಲು ಅಥವಾ ಸುರಕ್ಷಿತ ವಾತಾವರಣದಲ್ಲಿ ಅನಿಯಮಿತ ಮನರಂಜನೆ ಪಡೆಯಲು ಸಾಧ್ಯವಾಗುತ್ತದೆ.

ದೂರಸಂಪರ್ಕ ಸೇವೆಗಳ ಕೊರತೆಯಿಂದಾಗಿ ತಲಕಾವೇರಿಯ ಜನರು ಹೊರ ಜಗತ್ತಿಗೆ ಮೂಲಭೂತವಾದ ಸಂಪರ್ಕದಿಂದ ವಂಚಿತರಾಗಿದ್ದರು. ಜಿಯೋದಿಂದ ಸೌರ ಶಕ್ತಿಯನ್ನು ಬಳಸಿಕೊಂಡು, ಹಸಿರು ಟವರ್ ನೊಂದಿಗೆ ಟ್ರೂ 4ಜಿ ಒದಗಿಸುತ್ತದೆ.

ಇದನ್ನೂ ಓದಿ: ಕರ್ನಾಟಕದ ರಾಯಚೂರು ಸೇರಿ ಭಾರತದ 19 ನಗರಗಳಲ್ಲಿ ಟ್ರೂ 5ಜಿ ಸೇವೆ ಆರಂಭ

Advertisement

Udayavani is now on Telegram. Click here to join our channel and stay updated with the latest news.

Next