Advertisement

ಜೀಪ್‌ ಪಲ್ಟಿ: ಇಬ್ಬರ ಸಾವು

02:24 PM Mar 18, 2017 | Team Udayavani |

ಮಡಿಕೇರಿ: ಕಾರ್ಮಿಕರನ್ನು ಸಾಗಿ ಸುತ್ತಿದ್ದ ಜೀಪ್‌ ಪಲ್ಟಿಯಾದ ಪರಿಣಾಮ ಚಾಲಕ ಸೇರಿ ಇಬ್ಬರು ಸಾವನಪ್ಪಿರುವ ಘಟನೆ ಕುಟ್ಟ-ಗೋಣಿಕೊಪ್ಪ ರಸ್ತೆಯ ಕಾಕೂರು ಎಂಬಲ್ಲಿ ನಡೆದಿದೆ.
 
ಚಾಲಕ ಕೇರಳದ 6ನೇ ಪಾರೆ ನಿವಾಸಿ ಅಜೇಶ್‌ (26) ಸ್ಥಳದಲ್ಲಿಯೇ ಸಾವನಪ್ಪಿದರು. ಪ್ರಯಾಣಿಕ ಸಿನೋಜ್‌ (32) ಮಾನಂದವಾಡಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಸುಮಾರು 12 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

Advertisement

ಬೆಳಗ್ಗೆ 9 ಗಂಟೆ ಸುಮಾರಿಗೆ ಕೇರಳದಿಂದ ಬರುತ್ತಿದ್ದ ಜೀಪ್‌ ಮಗುಚಿಕೊಂಡಿದೆ. ಪರಿಣಾಮ ಚಾಲಕ ವಾಹನದ ಕೆಳಗೆ ಸಿಲುಕೊಂಡು ಸ್ಥಳದಲ್ಲಿಯೇ ಸಾವನಪ್ಪಿದರು. ಗಂಭೀರವಾಗಿ ಗಾಯಗೊಂಡವರನ್ನು ಕುಟ್ಟ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಮಾನಂದವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಕುಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಶ್ರೀಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next