Advertisement

ನಾಶಿಕ್‌ನಲ್ಲಿ ಆಟೋಗೆ ಢಿಕ್ಕಿ ಹೊಡೆದ ಟ್ರಕ್‌; 7 ಮಂದಿ ಸಾವು

11:07 AM Dec 28, 2017 | udayavani editorial |

ನಾಶಿಕ್‌ : ನಾಶಿಕ್‌ ಜಿಲ್ಲೆಯ ಮಾಲೇಗಾಂವ್‌ – ಸತಾನಾ ರಸ್ತೆಯಲ್ಲಿ  ಶೆಮ್ಲಿ ಗ್ರಾಮಕ್ಕೆ ಸಮೀಪ ಟ್ರಕ್‌ ಒಂದು ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದು ಏಳು ಮಂದಿ ಮೃತಪಟ್ಟ ಘಟನೆ ಇಂದು ಗುರುವಾರ ನಸುಕಿನ ವೇಳೆ ನಡೆದಿದೆ.

Advertisement

ಈ ವರೆಗೆ ದೊರಕಿರುವ ಮಾಹಿತಿಯ ಪ್ರಕಾರ ರಿಕ್ಷಾದಲ್ಲಿದ್ದವರು ಸಣ್ಣ ವ್ಯಾಪಾರಿಗಳಾಗಿದ್ದು ಅವರು ಇಲ್ಲಿಂದ ಸುಮಾರು 75 ಕಿ.ಮೀ. ದೂರದ ಸತಾನಾಕ್ಕೆ ಹೋಗುತ್ತಿದ್ದರು. ಅಲ್ಲಿನ ಜಾತ್ರೆಯೊಂದರಲ್ಲಿ ಮಕ್ಕಳ ಆಟಿಕೆಗಳು ಮತ್ತು ಇತರ ಸಣ್ಣ ಪುಟ್ಟ ವಸ್ತುಗಳನ್ನು ಮಾರಲು ಅವರು ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ದೇಹಗಳನ್ನು ಸತಾನಾ ಗ್ರಾಮೀಣ ಆಸ್ಪತ್ರೆಗೆ ಒಯ್ಯಲಾಗುತ್ತಿದೆ. ಕೇಸು ದಾಖಲಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ಮೃತರ ಗುರುತು, ವಿಳಾಸ ಇತ್ಯಾದಿಗಳು ಖಚಿತವಾಗಿ ಇನ್ನಷ್ಟೇ ಗೊತ್ತಾಗಬೇಕಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next