ಟ್ರಕ್ ಎಂದರೆ, ಬರೋಬ್ಬರಿ ಸರಕುಗಳನ್ನು ತುಂಬಿಕೊಂಡು ಓಡುವ ವಾಹನಗಳಲ್ಲ ಇವು. ಸ್ಮಾರ್ಟ್ ಆಗಿ ರಚನೆಗೊಂಡ ಟ್ರಕ್ಕು. ದಿನಪೂರ್ತಿ ನಿಂತಲ್ಲೇ ನಿಂತಿರುವ ಟ್ರಕ್ಕು. ರಾತ್ರಿಯಾದರೆ ಮೆಲ್ಲನೆ ಜಾಗ ಖಾಲಿ ಮಾಡುವ ಟ್ರಕ್ಕು. ಒಡಲೊಳಗೆ ಗ್ಯಾಸು, ಸ್ಟೌ, ದೊಡ್ಡ ದೊಡ್ಡ ಬಾಣಲೆಗಳು, ಪಾತ್ರೆಗಳು, ಬಾಣಸಿಗರನ್ನು ತುಂಬಿಕೊಂಡು, ಹಸಿವು ಎಂದು ಬರುವ ಜನರನ್ನು ಈ ಟ್ರಕ್ ಸ್ವಾಗತಿಸುತ್ತಿರುತ್ತೆ. ಇಲ್ಲಿ ಆಹಾರ ತಿನ್ನೋವಾಗ ಎಷ್ಟೋ ಬಾರಿ ಟೂರಿಂಗ್ ಟಾಕೀಸ್ ನೆನಪಾಗುತ್ತೆ. ಇಂದು ಭರ್ಜರಿ ಔತಣ ನೀಡಿ ರಂಜಿಸುವ ಈ ಟ್ರಕ್, ನಾಳೆ ಅಣತಿ ದೂರದಲ್ಲಿ ಠಿಕಾಣಿ ಹೂಡಿರುತ್ತೆ. ಅಲ್ಲಿ ಮತ್ತೂಂದಿಷ್ಟು ಜನರನ್ನು ಸಂತೃಪ್ತಿಗೊಳಿಸಲು ಕಾಯುತ್ತಿರುತ್ತೆ.
ಮೊದಲೆಲ್ಲ ಬೀದಿ ಬದಿಯಲ್ಲಿ ಬರೀ ಕೈಗಾಡಿಗಳದ್ದೇ ಕಾರುಬಾರು. ತದನಂತರ ಗೂಡ್ಸ್ ಆಟೋಗಳು, ಓಮ್ನಿಗಳು ರೆಡಿಮೇಡ್ ಫುಡ್ ಅನ್ನು ತಂದು ಬಡಿಸಿ, ಫುಡ್ ಸ್ಟ್ರೀಟ್ ಪರಿಕಲ್ಪನೆಗೆ ನಾಂದಿ ಹಾಡಿದ್ದವು. ಆದರೆ, ಟ್ರಕ್ಕುಗಳು ಫುಡ್ ಸ್ಟ್ರೀಟ್ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ದಾರಿ ಬದಿಯಲ್ಲಿ, ಒಂದೊಳ್ಳೆ ಪರಿಸರದಲ್ಲಿ ಇವು ನಿಂತಿರುತ್ತವೆ. ತಾಜಾ ತಾಜಾವಾಗಿ ತಿನಿಸುಗಳನ್ನು ರೆಡಿಮಾಡಿ ಕೊಡುತ್ತಾ, ಗ್ರಾಹಕರಿಗೆ ಅಚ್ಚುಮೆಚ್ಚಿನ ಕೇಂದ್ರಗಳಾಗಿರುತ್ತವೆ.
ಇಂಥ ಟ್ರಕ್‌ಗಳಲ್ಲಿ ದಕ್ಷಿಣ ಭಾರತೀಯ ತಿನಿಸುಗಳು ಬಹಳ ಕಡಿಮೆ. ಎಲ್ಲೋ ಕೆಲವು ಟ್ರಕ್ಕುಗಳಲ್ಲಷ್ಟೇ ದೋಸೆಗಳನ್ನು ಹೊಯ್ದು ಕೊಡುತ್ತಾರೆ. ಅದುಬಿಟ್ಟರೆ ಇಲ್ಲಿ, ಚೈನೀಸ್, ವಿದೇಶಿ ಶೈಲಿಯ ಖಾದ್ಯಗಳದ್ದೇ ಮೇಲುಗೈ. ಈ ಟ್ರಕ್ಕುಗಳ ಸುತ್ತಮುತ್ತ ಹೆಚ್ಚಾಗಿ ಐಟಿ ಮಂದಿಯೇ ಮುತ್ತಿರುತ್ತಾರೆ. ಈ ಟ್ರಕ್ ಮುಂದೆ ತಟ್ಟೆಹಿಡಿದು ನಿಂತು, ಲೋಕಾಭಿರಾಮವಾಗಿ ಆಕಾಶ ನೋಡುತ್ತಾ, ಅಕ್ಕಪಕ್ಕದ ಸ್ವತ್ಛಂದ ಪರಿಸರ ನೋಡುತ್ತಾ ಆಹಾರ ಸೇವಿಸುವ ಮಜಾವೇ ಬೇರೆ.
Advertisement
1. ದಿ ಸ್ಪಿಟ್‌ಫೈರ್ ಟ್ರಕ್ವಿದೇಶಿ ಆಹಾರಗಳ ರುಚಿ ನೋಡುವವರಿಗೆ ಇದು ಒಳ್ಳೇ ಆಯ್ಕೆ. ನ್ಯೂಯಾರ್ಕ್ ಶೈಲಿಯ ಹಾಟ್ ಡಾಗ್ಸ್ ಇಲ್ಲಿನ ಸ್ಪೆಷೆಲ್. ಚಿಲ್ಲಿ ಚಿಕನ್, ಚಿಕನ್ ಮಂಚೂರಿಯನ್‌ನ ಮಸ್ತ್ ರುಚಿಯನ್ನೂ ಇಲ್ಲಿ ಸವಿಯಬಹುದು.
ಎಲ್ಲೆಲ್ಲಿ ಓಡಾಡುತ್ತೆ?: ಫ್ರೆàಜರ್ ಟೌನ್, ಕಮ್ಮನಹಳ್ಳಿ, ಇಂದಿರಾನಗರ, ಸಹಕಾರ ನಗರ
facebook: @thespitfirebbqtruck
ಬೆಳಗ್ಗೆ ಹೊತ್ತಿನಲ್ಲಿ ಅವೆನ್ಯೂ ರಸ್ತೆಯಲ್ಲಿ ಸಂಚರಿಸುವವವರಿಗೆ ಕಾಫಿ ಬಣ್ಣದ ಟ್ರಕ್ ಕಣ್ಣಿಗೆ ಬಿದ್ದೇಬೀಳುತ್ತೆ. ಕಾಫಿ ಬೋರ್ಡ್‌ನ ನಿವೃತ್ತ ನೌಕರರೆಲ್ಲ ಸೇರಿ, ಈ ಟ್ರಕ್ ಕೆಫೆ ನಿರ್ಮಿಸಿದ್ದಾರೆ. ಬಿಸಿಬಿಸಿ ಉಪ್ಪಿಟ್ಟು, ಘಮ್ಮೆನ್ನುವ ಅದ್ಭುತ ರುಚಿಯ ಕಾಫಿ ಇಲ್ಲಿನ ಪ್ರಧಾನ ಆಕರ್ಷಣೆ.
ಎಲ್ಲಿ ನಿಂತಿರುತ್ತೆ?: ಅವೆನ್ಯೂ ರಸ್ತೆ, ಕಬ್ಬನ್‌ಪೇಟೆ 3. ಸ್ಕ್ವೇರ್ ರುತ್
ಮೀನಿನ ಖಾದ್ಯಕ್ಕೆ ಈ ಟ್ರಕ್ ಹೆಸರುವಾಸಿ. ಫಿಶ್ ಫ್ರೈ, ಫಿಶ್ ಚಿಪ್ಸ್, ಚಿಕನ್ ಬರ್ಗರ್‌ಗಳ ಜತೆಗೆ ಬ್ರೇಕ್‌ಫಾಸ್ಟ್ ಕೂಡ ಇಲ್ಲಿ ಸಿಗುತ್ತೆ. ಪ್ಯಾನ್‌ಕೇಕ್, ಫ್ರೆಂಟ್ ಟೋಸ್ಟ್‌ಗಳ ರುಚಿಯನ್ನೂ ಇಲ್ಲಿ ಸವಿಯಬಹುದು.
ಎಲ್ಲೆಲ್ಲಿ ಓಡಾಡುತ್ತೆ?: ಎಚ್‌ಎಸ್‌ಆರ್ ಲೇ ಔಟ್, ಔಟರ್ ರಿಂಗ್‌ರೋಡ್ facebook: @Square-RUTH-Food-Truck
Related Articles
ಚಾಟ್ಸ್‌ಪ್ರಿಯರ ನೆಚ್ಚಿನ ಟ್ರಕ್ ಇದು. ಸಮೋಸ, ಕಚೋರಿ, ಸೇವ್‌ಪುರಿಗಳಲ್ಲದೆ ಪರಾಠಾ, ಹಾಟ್ ಡಾಗ್ ಮತ್ತು ಬರ್ಗರ್‌ಗಳು ಇಲ್ಲಿನ ಹೈಲೈಟ್ಸ್. ಅಂದಹಾಗೆ, ಇದು ಪಂಜಾಬಿ ಮತ್ತು ಸಿಂಧ್ ಶೈಲಿಯ ಮನೆರುಚಿ. ಹಾಗಾಗಿ, ಲಸ್ಸಿಯ ರುಚಿಯನ್ನೂ ಇಲ್ಲಿ ಮಿಸ್ ಮಾಡುವ ಹಾಗಿಲ್ಲ.
ಎಲ್ಲೆಲ್ಲಿ ಓಡಾಡುತ್ತೆ?: ಬಸವನಗರ, ಇಂದಿರಾನಗರ, ವೈಟ್‌ಫೀಲ್ಡ್ facebook: @ Foodipa
Advertisement
5. ಜಸ್ಟ್ ಬೇಕ್ ಡೆಸರ್ಟ್ ಮೊಬೈಲ್ಲಘುವಾಗಿ ಉಪಾಹಾರ ಬಯಸುವವರಿಗೆ ಇಲ್ಲಿ ಥರಹೇವಾಗಿ ಬಿಸ್ಕತ್ತುಗಳು ನಾಲಿಗೆಯನ್ನು ಚಪ್ಪರಿಸುವಂತೆ ಮಾಡುತ್ತವೆ. ಕೇಕ್, ಬ್ರೌನೀಸ್, ಚಾಕ್ಲೆಟ್, ಲೆಮನ್ ಮಿನಿ ಟಾರ್ಟ್ಸ್, ಸ್ಯಾಂಡ್‌ವಿಚ್, ಮಫಿನ್ಸ್‌ಗಳಲ್ಲದೇ ವೈವಿಧ್ಯಮಯ ಚಹಾಗಳೂ ಇಲ್ಲಿ ಲಭ್ಯ.
ಎಲ್ಲೆಲ್ಲಿ ಓಡಾಡುತ್ತೆ?: ಬಾಗಮನೆ ಟೆಕ್ ಪಾರ್ಕ್, ಬಸವನಗರ, ಕೋರಮಂಗಲ 6. ಟು ಟು ಟಾಂಗೋ
ಬರ್ಗರ್, ಪಿಜ್ಜಾ ತಿನ್ನಲು ಮ್ಯಾಕಿx, ಪಿಜ್ಜಾ ಹಟ್‌ಗಳಿಗೇ ಹೋಗಬೇಕಿಲ್ಲ. ಟು ಟು ಟಾಂಗೋ ಟ್ರಕ್ ಬಳಿ ಹೋದರೂ ಸಾಕು, ಬಿಸಿ ಬರ್ಗರ್ ನಿಮ್ಮ ಬಾಯಿರುಚಿಗೆ ವಸ್ತುವಾಗುತ್ತೆ. ಬಿಬಿಕ್ಯೂ ಚಿಕನ್ ಬರ್ಗರ್, ಸ್ಪೈಸಿ ಪೆರಿಪೆರಿ ಚಿಕನ್ ಪಿಜ್ಜಾಗಳು ಇಲ್ಲಿ ಪ್ರಧಾನ ಆಕರ್ಷಣೆ.
ಎಲ್ಲೆಲ್ಲಿ ಓಡಾಡುತ್ತೆ?: ಕೋರಮಂಗಲ ಸುತ್ತಮುತ್ತ facebook: @ TwoToTang 7. ಫುಡ್ ಎಂಜಿನ್
ದೇಶೀ- ವಿದೇಶೀ ಆಹಾರಗಳ ಸಮಾಗಮ ಇಲ್ಲಿದೆ. ಇಂಡಿಯನ್, ಅಮೆರಿಕನ್, ಇಟಾಲಿಯನ್, ಚೈನೀಸ್ ಶೈಲಿಯ ಆಹಾರಗಳ ರುಚಿ ಇಲ್ಲಿ ಕೈಬೀಸಿ ಕರೆಯುತ್ತದೆ. ಇಲ್ಲಿಗೆ ಹೋದವರು ಬರ್ಗರ್, ಪಾಸ್ತಾಗಳ ರುಚಿ ನೋಡದೇ ವಾಪಸಾಗುವುದಿಲ್ಲ.
ಎಲ್ಲೆಲ್ಲಿ ಓಡಾಡುತ್ತೆ?: ಐಟಿಪಿಎಲ್, ಬಾಗಿಮನೆ ಟೆಕ್‌ಪಾರ್ಕ್, ಎಚ್‌ಎಸ್‌ಆರ್ ಲೇಔಟ್, ಮಾರತ್‌ಹಳ್ಳಿ facebook: @ myfoodengine ನಮ್ಮಲ್ಲಿಗೆ 3 ವರ್ಷದ ಮಗುವಿನಿಂದ ಹಿಡಿದು 80 ವರ್ಷದ ಅಜ್ಜಂದಿರ ವರೆಗೂ ಫುಡ್ ಟೇಸ್ಟ್ ಮಾಡಲು ಬರುತ್ತಾರೆ. ಅದರಲ್ಲಿ ಐಟಿ ಮಂದಿಯೇ ಹೆಚ್ಚು. ಪ್ರಪಂಚ ಸುತ್ತಿ, ಆಹಾರ ಸಂಸ್ಕೃತಿಯ ಬಗ್ಗೆ ಕುತೂಹಲ ಇಟ್ಟುಕೊಂಡವರೂ ಟ್ರಕ್ ಆಹಾರವನ್ನು ಇಷ್ಟಪಡುತ್ತಾರೆ. ಬೆಂಗಳೂರು ಈಗ ದೇಶೀ-ವಿದೇಶಿ ಆಹಾರಗಳ ಸಂಗಮ. ಟ್ರಕ್ ಫುಡ್ ಎಲ್ಲ ರುಚಿಯನ್ನೂ ಒಳಗೊಂಡಿದೆ.
– ಗೌತಮಿ ಶಂಕರ್, ದಿ ಸ್ಪಿಟ್‌ಫೈರ್ ಟ್ರಕ್