Advertisement

ನಂದಿನಿ ನದಿ ಹೂಳಿನಿಂದ ಕೃಷಿಗೆ ತೊಂದರೆ: ಡಿಸಿ ಭೇಟಿ

11:50 AM Apr 07, 2022 | Team Udayavani |

ಚೇಳ್ಯರು: ಚೇಳ್ಯರು, ಖಂಡಿಗೆ ನಂದಿನಿ ನದಿಯಲ್ಲಿ ಹೂಳು ತುಂಬಿ ಸುತ್ತಲಿನ ಕೃಷಿ ಪ್ರದೇಶದಲ್ಲಿ ಮಳೆಗಾಲದಲ್ಲಿ ನೀರಿನಿಂದ ನೆರೆ ಬರುವ ಕಾರಣ ಕೃಷಿ ಮಾಡಲು ಸಮಸ್ಯೆಯಾಗಿದ್ದು ಶಾಸಕ ಉಮಾನಾಥ ಕೋಟ್ಯಾನ್‌ ಅವರ ಸೂಚನೆಯ ಮೇರೆಗೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಹೂಳು ತುಂಬಿರುವ ಕಾರಣ ಬಾವಿಯಲ್ಲಿ ಉಪ್ಪು ನೀರಿನ ಸಮಸ್ಯೆ ಮತ್ತು ಇತಿಹಾಸ ಪ್ರಸಿದ್ಧ ಖಂಡಿಗೆ ಧರ್ಮರಸು ಉಳ್ಳಾಯ ಕ್ಷೇತ್ರದಲ್ಲಿ ಮೀನು ಹಿಡಿಯುವ ಜಾತ್ರೆ ಸಮಯದಲ್ಲಿ ಮೀನು ಹಿಡಿಯಲು ಕಷ್ಟ ವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದರು. ನದಿಯಲ್ಲಿ ಮರಳು ಇರುವುದಾದರೆ ಅದನ್ನು ಟೆಂಡರ್‌ ಕರೆದು ಕಾನೂನು ಪ್ರಕಾರ ಹೂಳೆತ್ತುವ ಪ್ರಯತ್ನ ಮಾಡುವ ಒಂದು ವೇಳೆ ಮರಳು ಇಲ್ಲದೆ ಕೆಸರು ಮತ್ತು ಮಣ್ಣು ಇರುವುದಾದರೆ ಅದನ್ನು ತೆಗೆಯಲು ದೊಡ್ಡ ಮೊತ್ತದ ಅನುದಾನ ಬೇಕಾಗಿರುವುದರಿಂದ ಒಂದು ಅಂದಾಜು ಪಟ್ಟಿ ಮಾಡಿ ಶಾಸಕರ ಮುಖಾಂತರ ಸರಕಾರಕ್ಕೆ ಪ್ರಸ್ತಾವ ಕಳುಹಿಸುವುದಾಗಿ ತಿಳಿಸಿದರು.

ನದಿಯಲ್ಲಿ ಮರಳು ಅಥವಾ ಕೆಸರು ಇದೆಯಾ ಎಂಬುದನ್ನು ತತ್‌ಕ್ಷಣ ಪರಿಶೀಲಿಸಿ ಅದಕ್ಕೆ ಅಂದಾಜು ಪಟ್ಟಿಯನ್ನು ಸಂಬಂಧಿಸಿದ ಎಂಜಿನಿಯರ್‌ ಮುಖಾಂತರ ಸಿದ್ಧಪಡಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಲಿಂಗರಾಜು ಅವರಿಗೆ ಸೂಚಿಸಿದರು.

ಆಗ ಜಿಲ್ಲಾಧಿಕಾರಿಗಳು ತತ್‌ಕ್ಷಣ ಈ ಬಗ್ಗೆ ನಗರಪಾಲಿಕೆ ಆಯುಕ್ತರು ಪರಿಸರ ಇಲಾಖೆ ಅರೋಗ್ಯ ಇಲಾಖೆಯ ಮತ್ತು ಸಂಬಂಧಿಸಿದ ಇಲಾಖೆಯ ಸಭೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮಂಗಳೂರು ತಹಶೀಲ್ದಾರ ಪುರಂದರ ಹೆಗಡೆ, ಸುರತ್ಕಲ್‌ ಕಂದಾಯ ಅಧಿಕಾರಿ ರಘುವೀರ್‌ ಮಲ್ಯ, ಚೇಳಾçರು ಗ್ರಾಮ ಕರಣಿಕ ವಿಜೇತ್‌, ಗ್ರಾ.ಪಂ. ಅಧ್ಯಕ್ಷೆ ಯಶೋದಾ, ಜಯಾನಂದ, ಪುಷ್ಪರಾಜ್‌ ಶೆಟ್ಟಿ, ಪಿಡಿಒ ನಿತ್ಯಾನಂದ, ಸುಧಾಕರ ಶೆಟ್ಟಿ, ಚರಣ್‌ ಕುಮಾರ್‌, ಶ್ರೀಕಾಂತ್‌, ಸೋಮನಾಥ ಉಪಸ್ಥಿತರಿದ್ದರು.

Advertisement

ತ್ಯಾಜ್ಯ ನೀರು

ಸಮಸ್ಯೆ ಮನಪಾ ವ್ಯಾಪ್ತಿಯ ಕೊಡಿಪಾಡಿ ಮಾಧವನಗರ ಎಂಬಲ್ಲಿ ಎಸ್‌ಟಿಪಿ ಪ್ಲಾಂಟ್‌ ಇದೆ. ಅದರ ಕಲುಷಿತ ನೀರಿನ್ನು ನಂದಿನಿ ನದಿಗೆ ಬಿಡುತ್ತಿದ್ದು ಮತ್ತು ಮುಕ್ಕ ಕಾಲೇಜೊಂದರ ತ್ಯಾಜ್ಯ ನೀರನ್ನು ನದಿಗೆ ಬಿಡುವ ಕಾರಣ ಮೀನುಗಳು ಸಾಯುತ್ತಿದ್ದು ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಬಾವಿ ನೀರು ಕಲುಷಿತಗೊಳ್ಳುತ್ತಿದ್ದು ಜತೆಗೆ ಪಕ್ಕದಲ್ಲಿರುವ ಧಾರ್ಮಿಕ ಕೇಂದ್ರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಯವರಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next