Advertisement

ಮಾಸಾಶನಕ್ಕೆ ಪರದಾಟ

02:37 PM Apr 19, 2020 | Suhan S |

ಶಿಡ್ಲಘಟ್ಟ: ಕೋವಿಡ್ 19 ಸೋಂಕು ಹರಡುವಿಕೆ ತಡೆಗೆ ಲಾಕ್‌ಡೌನ್‌ ಆದೇಶ ಹೊರಡಿಸಿದ್ದರಿಂದ ಕೇವಲ ಕೂಲಿಕಾರ್ಮಿಕರಲ್ಲದೇ, ಮಾಸಿಕ ಮಾಸಾಶನ ಪಡೆದುಕೊಂಡು ಜೀವನ ನಡೆಸುತ್ತಿರುವ ವಯೋವೃದ್ಧರು ಪರದಾಡುವಂತಾಗಿದೆ.

Advertisement

ವಯೋವೃದ್ಧರ ಪರಿಸ್ಥಿತಿ ಅರಿತ ಸರ್ಕಾರ ಮುಂಗಡವಾಗಿ ಮೂರು ತಿಂಗಳ ಮಾಸಾಶನ ಜಾರಿಗೊಳಿಸಿದೆಯೆಂದು ಮಾಹಿತಿ ಅರಿತ ವಯೋವೃದ್ಧರು ಅಂಚೆ ಕಚೇರಿ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ನಿಂತಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳು ವೈರಲ್‌ ಆದ ಬಳಿಕ ನಗರ ಪೊಲೀಸರು ಅಂಚೆ ಕಚೇರಿಗೆ ತೆರಳಿ ಗೊಂದಲಕ್ಕೆ ಅವಕಾಶ ನೀಡದಂತೆ ಬಂದೋಬಸ್ತ್ ಮಾಡಿ ಸಾಲಾಗಿ ನಿಲ್ಲಿಸಿ ಮಾಸಾಶನ ವಿತರಣೆಗೆ ಅನುಕೂಲ ಮಾಡಿಕೊಟ್ಟರು.

ಮುಂದುವರೆದ ಸಮಸ್ಯೆ: ಸರ್ಕಾರ ಮೂರು ತಿಂಗಳ ಮಾಸಾಶನ ಜಾರಿಗೊಳಿಸಿ ಅನುಕೂಲ ಕಲ್ಪಿಸಿದೆ. ಆದರೆ ತಾಲೂಕು ಕಚೇರಿ ಮತ್ತು ಖಜಾನೆ ಇಲಾಖೆಯಲ್ಲಿ ಖಜಾನೆ-2 ಎಂಬ ಸಮಸ್ಯೆ ಇತ್ಯರ್ಥಆಗದಿರುವುದರಿಂದ ಪಿಂಚಣಿ ಪಡೆಯಲು ಪ್ರತಿ ತಿಂಗಳು ಪರದಾಡುವಂತಾಗಿದೆ ಎಂದು ಹಲವರು ಅಳಲು ತೋಡಿಕೊಂಡರು. ಈಗಾಗಲೇ ಬ್ಯಾಂಕ್‌ನ ಉಳಿತಾಯ ಖಾತೆ ನೀಡಿ ಆಧಾರ್‌ ಲಿಂಕ್‌ ಮಾಡಿದರೂ ಸಹ ಬಹುತೇಕ ಫಲಾನುಭವಿಗಳ ಖಾತೆಗಳಿಗೆ ಹಣ ಜಮಾ ಆಗಿಲ್ಲ. ಅಂಚೆ ಕಚೇರಿಗೆ ಬಂದು ಮಾಸಾಶನ ಪಡೆಯುವ ಪರಿಸ್ಥಿತಿಗೆ ಮುಕ್ತಿ ಸಿಕ್ಕಿಲ್ಲ. ಜಿಲ್ಲಾಡಳಿತ ಅಥವಾ ಸರ್ಕಾರ ಪಿಂಚಣಿದಾರರಿಗೆ ಸಕಾಲದಲ್ಲಿ ಮಾಸಾಶನ ನೀಡಲು ಕ್ರಮ ಕೈಗೊಳ್ಳಬೇಕೆಂದುನಾಗರಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next