Advertisement
ಟ್ರೋಲ್ ಮಾಡುವುದು ಈಗೊಂದು ಒಂದು ಫ್ಯಾಷನ್‌ನಂತಾಗಿದೆ. ತಮ್ಮ ವಿರೋಧಿಗಳು (ಅದು ವೈಯಕ್ತಿಕ ಇರ ಬಹುದು, ರಾಜಕೀಯ, ವೃತ್ತಿ ಇಂಥ ಯಾವುದೇ ಕ್ಷೇತ್ರದ ವಿರೋಧಿಗಳೂ ಆಗಿರಬಹುದು) ಏನು ಹೇಳಿದರೂ ಅದಕ್ಕೆ ರೆಕ್ಕೆಪುಕ್ಕ ಸೇರಿಸಿ, ಯಾವ್ಯಾವುದೋ ಹಾಸ್ಯ ಕಲಾವಿದರ ಚಿತ್ರವನ್ನೂ ಸೇರಿಸಿ ಕೊಂಡು ತಮಗೆ ತೋಚಿದಂತೆ ಬರೆದು ಅವಮಾನಪಡಿಸುವ ಪ್ರವೃತ್ತಿ ಹೆಚ್ಚಾಗು ತ್ತಿದೆ. ಮಾತಾಡುವಾಗ ಒಂದಿಷ್ಟು ಎಡವಿ ದರೂ ಅದನ್ನೂ ತುಂಬಾ ಕೀಳು ಮಟ್ಟ ದಲ್ಲಿ ಚಿತ್ರಿಸಿ ಟ್ರೋಲ್ ಮಾಡಲಾಗುತ್ತದೆ. ಇದು ಈಗ ಎಲ್ಲ ಇತಿಮಿತಿಯನ್ನೂ ದಾಟಿ ಸಾಗುತ್ತಿದ್ದು, ಸಮಾಜದ ಆರೋಗ್ಯಕ್ಕೆ ದೊಡ್ಡ ಸವಾಲಾಗುವ ಲಕ್ಷಣ ಕಂಡು ಬರುತ್ತಿದೆ. ಕೆಲವು ಸಂದರ್ಭಗಳಲ್ಲಿ ತಮ್ಮ ಆಪ್ತ ಬಳಗದವರನ್ನೂ ಟ್ರೋಲ್‌ಗೆ ಬಳಸುವುದೂ ಇದೆ.
Related Articles
Advertisement
ಬೇಜವಾಬ್ದಾರಿ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳನ್ನು ಒಳಿತಿಗಿಂತ ಹೆಚ್ಚಾಗಿ ಕೆಡುಕಿಗೆ ಬಳಸುತ್ತಿರುವುದು ಈಗಾಗಲೇ ಸಾಬೀತಾಗಿದೆ. ಅದರಲ್ಲಿ ಅವರು ಹೊಂದಿರುವ ಸೃಷ್ಟಿಶೀಲತೆಯೂ ಆಶ್ಚರ್ಯ ಮೂಡಿಸುತ್ತಿದೆ. ಇಂಥ ಬುದ್ಧಿ ವಂತರು ಟ್ರೋಲ್ ಮಾಡುವುದರ ಬಗೆಗಿನ ಅಪಾಯವನ್ನು ಯಾಕೆ ತಿಳಿದು ಕೊಳ್ಳುತ್ತಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಒಂದು ಸಣ್ಣ ಟ್ರೋಲ್ ಕಿಡಿ ಭುಗಿ ಲೆದ್ದು ಎಷ್ಟೆಷ್ಟೋ ಅನಾಹುತ ಮಾಡಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಆದರೆ ಅದೆಲ್ಲ ನಮಗೆ ಸಂಬಂಧ ಪಟ್ಟ ದ್ದಲ್ಲ ಎಂಬ ಭಾವನೆ ನಮ್ಮನ್ನು ಮತ್ತಷ್ಟು ಅಪಾಯಕ್ಕೆ ನೂಕುತ್ತಿವೆ.
ಜಾಗೃತಿ ಅಗತ್ಯಟ್ರೋಲ್ ಮಾಡುವುದರ ಬಗೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಇದರ ಮೂಲಕ ಆಗುವಂಥ ಮಾನಹಾನಿ, ಅದಕ್ಕೆ ಕಾನೂನಿನಲ್ಲಿರು ವಂಥ ಶಿಕ್ಷೆಯ ಅವಕಾಶಗಳ ಬಗ್ಗೆ ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕಿದೆ. ಜತೆಗೆ ಸಮಾಜದ ಹಿತ ಹಾಗೂ ಆರೋಗ್ಯಕ್ಕೆ ಚ್ಯುತಿ ತರುವ ಇಂಥ ಟ್ರೋಲ್‌ಗೆ ಬ್ರೇಕ್ ಹಾಕಲು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿ ಕೊಂಡು ಕಾನೂನು ಕ್ರಮ ಕೈಗೊಳ್ಳು ವುದೂ ಅಗತ್ಯವಾಗಿದೆ. ಇಂಥವರಿಗೆ ಕಾನೂನಿನ ಬಿಸಿ ಮುಟ್ಟದೆ ಇದ್ದರೆ ಅದು ಸರಿದಾರಿಗೆ ಬರುವುದು ಕಷ್ಟ. ಟ್ರೋಲಿಗ ರಿಗೆ ಇದೇ ರೀತಿ ಸ್ವಾತಂತ್ರ್ಯ ಮುಂದು ವರಿಸಿದರೆ ಮುಂದೆ ಸಾಕಷ್ಟು ದೊಡ್ಡ ಸಾಮಾಜಿಕ ಅಪಾಯಕ್ಕೆ ನಾವೆಲ್ಲರೂ ಸಾಕ್ಷಿಯಾಗಬೇಕಾದೀತು. ಆದ್ದರಿಂದ ಯುವ ಜನರು ಇಂಥದ್ದಕ್ಕೆಲ್ಲ ಸ್ಪಂದಿಸ ಬಾರದು. ಈ ಹೊತ್ತಿನಲ್ಲಿ ಕೇಮಾರು ಸಾಂದೀಪನಿ ಆಶ್ರಮದ ಈಶವಿಠಲದಾಸ ಶ್ರೀಗಳು ಉಪನ್ಯಾಸವೊಂದರಲ್ಲಿ ಹೇಳಿದ “ನಾವು ಟ್ರೋಲ್ ಮಾಡೆಲ್ ಆಗ ಬಾರದು, ರೋಲ್ ಮಾಡೆಲ್ ಆಗ ಬೇಕು’ ಎಂಬ ಸಾಮಾಜಿಕ ಕಾಳಜಿಯ ಮಾತು ನೆನಪಾಗುತ್ತದೆ. ಈ ಮಾತಿನಂತೆ ನಡೆದಾಗ ಜೀವನದ ಸೌಂದರ್ಯದ ಅನುಭವವಾದೀತು. -ಪುತ್ತಿಗೆ ಪದ್ಮನಾಭ ರೈ,
ಮಣಿಪಾಲ