Advertisement

ಮೂರು ಘಟನೆ ಸೇರಿ ಒಂದು ಸಿನಿಮಾ: ಸೆಟ್ಟೇರಿತು ‘ತ್ರಿವೇದಂ’

03:26 PM Sep 14, 2021 | Team Udayavani |

ಮೂರು ಕಡೆಗಳಲ್ಲಿ ನಡೆದ ನೈಜ ಘಟನೆಗಳನ್ನು ಒಟ್ಟು ಸೇರಿಸಿ ಹೊಸಬರ ತಂಡವೊಂದು ಸಿನಿಮಾ ಮಾಡಲು ಹೊರಟಿದೆ. ಆ ಚಿತ್ರದ ಹೆಸರು”ತ್ರಿವೇದಂ’.  ಈ ಚಿತ್ರಕ್ಕೆ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನಡೆಯಿತು.

Advertisement

2012ರಲ್ಲಿ ಬೆಂಗಳೂರಿನ ಕುರುಬರಹಳ್ಳಿ, ಆರು ವರ್ಷದ ಕೆಳಗೆ ಮಂಡ್ಯಾ ಮತ್ತು ಹನ್ನರೆಡು ವರ್ಷದ ಹಿಂದೆ ಮೈಸೂರಿನಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ಅದಕ್ಕೊಂದು ಕಥೆ ಮಾಡಿ ಈಗ ಸಿನಿಮಾ ಮಾಡಲು ತಂಡ ಮುಂದಾಗಿದೆ. ಅರುಣ್‌ ಜಯರಾಂ ಈ ಚಿತ್ರದ ನಿರ್ದೇಶಕರು. ಆರ್‌. ಕೆ. ಭವಾನಿ ಹೇಮಂತ್‌ ಈ ಚಿತ್ರದ ನಿರ್ಮಾಪಕರು.

ಚಿತ್ರದ ಬಗ್ಗೆ ಮಾತನಾಡುವ, ನಿರ್ದೇಶಕರು, “ಚಿತ್ರದಲ್ಲಿ ಮೂರು ಘಟನೆಗಳಿಗೆ ಒಂದಕ್ಕೊಂದು ಸಂಬಂಧವಿರುವುದಿಲ್ಲ. ಈ ಮೂರು ಘಟನೆಗಳು ಕೂಡಾ ಪ್ರೀತಿಗೆ ಸಂಬಂಧಿಸಿದ್ದೇ ಆಗಿವೆ ಎಂಬುದು ವಿಶೇಷ. ಅದೇ ಕಾರಣಕ್ಕೆ ಚಿತ್ರಕ್ಕೆ “ತ್ರಿವೇದಂ’ ಎಂದು ಹೆಸರಿಟ್ಟಿದ್ದೇವೆ’ ಎಂದರು.

ಚಿತ್ರದಲ್ಲಿ ಮೂವರು ನಾಯಕರು ಆಯ್ಕೆಯಾಗಿದ್ದು, ಮೂವರು ನಾಯಕಿಯರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಚಿತ್ರದಲ್ಲಿ ಪ್ರತಾಪ್‌ ನಾರಾಯಣ್‌ ಕೂಡಾ ಒಂದು ಕಥೆಯಲ್ಲಿ ನಾಯಕರಾಗಿ ನಟಿಸುತ್ತಿದ್ದು, ಅವರು ಕೊರಿಯರ್‌ ಬಾಯ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಕೊರಿಯರ್‌ದಲ್ಲಿ ಕೆಲಸ ಮಾಡುವ ಹುಡುಗರನ್ನು ಭೇಟಿ ಮಾಡಿ ಅವರುಗಳಿಂದ ಒಂದಷ್ಟು ಸಲಹೆಗಳನ್ನು ಪಡೆದುಕೊಂಡಿದ್ದಾರಂತೆ. “ಜೀವನದಲ್ಲಿ ಯಾವ ರೀತಿ ಪ್ರೀತಿಗೋಸ್ಕರ ಹೋರಾಡುತ್ತಾನೆ ಎಂಬ ಅಂಶ ಹೈಲೈಟ್‌. ಚಿತ್ರದಲ್ಲಿ ಮೂರು ಮೂರು ಫೈಟ್ಸ್‌ ಹಾಗೂ ಎರಡು ಹಾಡುಗಳು ನನಗಿವೆ’ ಎಂದರು.

ಇದನ್ನೂ ಓದಿ:100% ರಿಲೀಸ್‌ ಕ್ಲಾರಿಟಿ ಇಲ್ಲ: ಬಿಡುಗಡೆಗೆ ಕಾಯುತ್ತಿವೆ ಧನಂಜಯ್‌ ಸಿನಿಮಾಗಳು

Advertisement

ಮತ್ತೂಬ್ಬ ನಾಯಕರಾಗಿ ಅಚ್ಯುತ್‌ ಕುಮಾರ್‌ ಹಾಗೂ ಮೂರನೇ ಕಥೆಯಲ್ಲಿ ರಂಗಭೂಮಿ ಹಿನ್ನಲೆ ಇರುವ ಶಶಿ ನಟಿಸುತ್ತಿದ್ದಾರೆ. ನಾಯಕನ ಗೆಳಯನಾಗಿ ಧರ್ಮಣ್ಣಕಡೂರು ನಟಿಸುತ್ತಿದ್ದಾರೆ. ನಟನೆಗೆ ಅವಕಾಶಕೇಳಿಕೊಂಡು ಮಂಡ್ಯದಿಂದ ಬರುವ ಕಲಾವಿದನಾ ಗಿ ನಟಿಸುತ್ತಿದ್ದಾರೆ. ಉಳಿದಂತೆ ಓಂ ಪ್ರಕಾಶ್‌ ರಾವ್‌, ಕುರಿ ಪ್ರತಾಪ್‌, ಮಳವಳ್ಳಿ ಸಾಯಿಕೃಷ್ಣ, ಗೋಪಾಲ್‌ ದೇಶಪಾಂಡೆ ಮುಂತಾದವರ ತಾರಾಬಳಗವಿದೆ.

ರಘು ಧನ್ವಂತ್ರಿ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಸಿದ್ದಾರೆ. ಕಿರಣ್‌ ಹಂಪಾಪುರ ಛಾಯಾಗ್ರಹಣವಿದೆ. ಚಿತ್ರಕ್ಕೆ ಡಾ.ವಿ.ನಾಗೇಂದ್ರ ಪ್ರಸಾದ್‌, ಅರಸು ಅಂತಾರೆ, ಗೌಸ್‌ಪೀರ್‌ ಸಾಹಿತ್ಯವಿದೆ.ಬೆಂಗಳೂರು ಮತ್ತು ಸಕಲೇಶಪುರ ಸುತ್ತಮುತ್ತ ಚಿತ್ರೀಕರಣದ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next