ಮುಂಬಯಿ: ನಗರದ ಪ್ರತಿಷ್ಠಿತ ಬಂಟರ ಸಂಘಟನೆ ಜೂಹು-ಅಂಧೇರಿ- ವಸೋìವಾ-ವಿಲೇಪಾರ್ಲೆ ಅಸೋಸಿಯೇಶನ್ ಆಫ್ ಬಂಟ್ಸ್ ಜವಾಬ್ ಹಾಗೂ ಜವಾಬ್ ಮಾಜಿ ಅಧ್ಯಕ್ಷ ರಘು ಎಲ್. ಶೆಟ್ಟಿ (ಪೆಪಿಲಾನ್) ಪ್ರಾಯೋಜಕತ್ವದಲ್ಲಿರುವ ಅಜೆಕಾರು ಕಲಾಭಿಮಾನಿ ಬಳಗಮುಂಬಯಿ ಇದರ ಸಹಕಾರದೊಂದಿಗೆ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಆ. 6ರಂದು ಅಪರಾಹ್ನ ಅಂಧೇರಿ ಪಶ್ಚಿಮದ ಪೇಪಿಲಾನ್ ಪಾರ್ಕ್, ಲಿಂಕ್ ರಸ್ತೆಯಲ್ಲಿರುವ ಟೇಕ್ ಇಟ್ ಇಟೀ ರೆಸ್ಟೋರೆಂಟ್ ಸಭಾಗೃಹದಲ್ಲಿ ತ್ರಿಶಂಕು ಚರಿತ್ರೆ ಯಕ್ಷಗಾನ ತಾಳಮದ್ದಳೆ ನಡೆಯಿತು.
ಜವಾಬ್‌ನ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷ ಬಿ. ಶಿವರಾಮ ನಾಯ್ಕ ಅವರು ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಹಾಗೂ ವಿಶ್ವಸ್ತ ರಘು ಎಲ್. ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ದಿ-ಸಾಧನೆಗಳನ್ನು ವಿವರಿಸಿದರು. ಸಂಸ್ಥೆಯ ಕಾರ್ಯದರ್ಶಿ ರಮೇಶ್ ಎನ್. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ಅಶೋಕ್ ಆರ್.
ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ ಕೆ., ಜತೆ ಕೋಶಾಧಿಕಾರಿ ಎಚ್. ಶೇಖರ್ ಹೆಗ್ಡೆ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಮಧುಕರ ಎ. ಶೆಟ್ಟಿ, ಮಾಜಿ ಅಧ್ಯಕ್ಷರು, ವಿಶ್ವಸ್ತರು, ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಕಾರ್ಯಕ್ರಮವು ಜರಗಿತು.
ಜವಾಬ್ ಪರಿವಾರದ ಸದಸ್ಯರು, ಯಕ್ಷ ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಉದ್ಯಮಿ ಭಾಸ್ಕರ್ ಶೆಟ್ಟಿ ಮತ್ತು ಸುಭಾಷ್ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಉಪಾಹಾರವನ್ನು ಆಯೋಜಿಸಲಾಗಿತ್ತು. ಜವಾಬ್‌ನ ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ ವಂದಿಸಿದರು.
ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಸಂಚಾಲಕತ್ವದ ತಾಳಮದ್ದಳೆ ಕೂಟದಲ್ಲಿ ಹಿಮ್ಮೇಳ ಭಾಗವತರಾಗಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಗಣೇಶ್ ಹೆಬ್ರಿ, ಚೆಂಡೆಯಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು, ಮದ್ದಳೆಯಲ್ಲಿ ಮಹೇಶ್ ಕುಮಾರ್ ಮಂದಾರ್ತಿ ಸಹಕರಿಸಿದರು. ಅರ್ಥ ದಾರಿಗಳಾಗಿ ಶಂಭು ಶರ್ಮ ವಿಟ್ಲ, ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಸದಾಶಿವ ಆಳ್ವ ತಲಪಾಡಿ, ವಿಜಯಕುಮಾರ್ ಆಳ್ವ ಅಳಿಕೆ ಅವರು ಭಾಗವಹಿಸಿದ್ದರು. ದಿನೇಶ್ ಶೆಟ್ಟಿ ವಿಕ್ರೋಲಿ ಸಹಕರಿಸಿದರು.