Advertisement

Udupi: ತ್ರಿಶಾ ಕ್ಲಾಸಸ್‌: ಸಿಎ ಇಂಟರ್‌ ಮೀಡಿಯೇಟ್‌ ಮಾಹಿತಿ ಕಾರ್ಯಾಗಾರ

12:55 PM Aug 13, 2024 | Team Udayavani |

ಉಡುಪಿ: ತ್ರಿಶಾ ಕ್ಲಾಸಸ್‌ ವತಿಯಿಂದ ಕಟಪಾಡಿ ತ್ರಿಶಾ ವಿದ್ಯಾ ಕಾಲೇಜಿನ ಸಭಾಂಗಣದಲ್ಲಿ ಸಿಎ ಇಂಟರ್‌ ಮೀಡಿಯೇಟ್‌ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ರವಿವಾರ ನಡೆಯಿತು.

Advertisement

ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಂಸ್ಥೆಯ ಸಂಸ್ಥಾಪಕ ಗೋಪಾಲಕೃಷ್ಣ ಭಟ್‌ ಮಾತನಾಡಿ, 1998ರಿಂದ ಆರಂಭವಾದ ಸಂಸ್ಥೆ ಇದೀಗ 26 ವರ್ಷಗಳನ್ನು ಪೂರೈಸಿದ್ದು ಸುಮಾರು 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಸಿಎ ಇಂಟರ್‌ ಮೀಡಿಯೇಟ್‌ ಕೋರ್ಸ್‌ ಹಾಗೂ ಪರೀಕ್ಷಾ ಪೂರ್ವ ತಯಾರಿ ಬಗ್ಗೆ ಮಾಹಿತಿ ನೀಡಿದರು.

ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ವಿಫ್ನೇಶ್ ಶೆಣೈ, ಸಿದ್ಧಾಂತ್‌ ಫೌಂಡೇಶನ್‌ ಟ್ರಸ್ಟಿ ರಾಮ್‌ ಪ್ರಭು, ಸಂಸ್ಥೆಯ ಸಿಬಂದಿ, ಪೋಷಕರು ಉಪಸ್ಥಿತರಿದ್ದರು. ಪ್ರಜ್ಞಾ ನಿರೂಪಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next