ಹಾಸನ: 100 ರೂ. ಕೊಡದ್ದಕ್ಕೆ ಡ್ಯಾಗರ್‌ನಿಂದ ಇರಿದು ವಾಟರ್‌ಮ್ಯಾನ್‌ನನ್ನು ಸ್ನೇಹಿತರೇ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಬೇಲೂರು ತಾಲೂಕಿನ ಚೀಕನ ಹಳ್ಳಿಯಲ್ಲಿ ನಡೆದಿದೆ.
ಚೀಕನಹಳ್ಳಿ ಗ್ರಾಪಂನಲ್ಲಿ ವಾಟರ್‌ಮ್ಯಾನ್ ಆಗಿದ್ದ ಕುಂಬಾರಹಳ್ಳಿಯ ಗಣೇಶ (27) ಎಂಬವರನ್ನು ಅರೇಹಳ್ಳಿ ಇಂದಿರಾ ನಗರದ ರೌಡಿಶೀಟರ್ ಮಧು ಕಿರಣ ಉರುಫ್ ಮಧು (33), ಅರೇಹಳ್ಳಿ ಹೋಬಳಿ ಕಣದೂರು ಗ್ರಾಮದ ರಘು ಶುಕ್ರವಾರ ರಾತ್ರಿ ಚೀಕನ ಹಳ್ಳಿ ಗ್ರಾಮದ ಆಟೋ ನಿಲ್ದಾಣದ ಬಳಿ ಡ್ಯಾಗರ್‌ನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಪ್ರಕರಣದ ವಿವರ: ಚೀಕನಹಳ್ಳಿಯ ಬಾಂಬೆ ಹೋಟೆಲ್ ಸಮೀಪವಿರುವ ಬಾರ್‌ವೊಂದರಲ್ಲಿ ಮಧು ಕಿರಣ, ರಘು, ಪ್ರದೀಪ ಎಂಬವರು ಮದ್ಯ ಪಾನ ಮಾಡುತ್ತ ಕುಳಿತಿದ್ದರು. ಈ ವೇಳೆ ಕೆಲಸ ಮುಗಿಸಿ ಬಂದ ವಾಟರ್‌ಮ್ಯಾನ್ ಗಣೇಶ ಕೂಡ ಅವರ ಜೊತೆ ಮದ್ಯ ಸೇವಿಸಿದ್ದಾನೆ. ಪಾರ್ಟಿ ಮುಗಿದ ನಂತರ ಸ್ನೇಹಿತ ರಘು, ಗಣೇಶನಿಗೆ 100 ರೂ. ಕೊಡುವಂತೆ ಕೇಳಿದ್ದಾನೆ ಎನ್ನಲಾಗಿದೆ. ಇದಕ್ಕೆ ಗಣೇಶ್ ಪದೇ ಪದೆ ನನ್ನ ಬಳಿ ಹಣ ಕೇಳುತ್ತಿಯಾ, ನನ್ನ ಹತ್ತಿರ ಹಣ ಇಲ್ಲ ಎಂದು ಜೋರಾಗಿ ಹೇಳಿದ್ದಾನೆ ಎನ್ನಲಾಗಿದೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಆಗ ರಘು ಅಲ್ಲೇ ಇದ್ದ ರೌಡಿಶೀಟರ್ ಮಧು ಕಿರಣಗೆ ಮಾಹಿತಿ ನೀಡಿದ್ದಾನೆ.
ಆಗ ಮದ್ಯದ ಅಮಲಿನಲ್ಲಿ ಇದ್ದ ರೌಡಿಶೀಟರ್, ಗಣೇಶ ನ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಗಣೇಶ್ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ರೂ ಬಿಡದೆ ಗ್ರಾಮದ ಆಟೋ ನಿಲ್ದಾಣದ ಬಳಿ ರಾತ್ರಿ 8 ಗಂಟೆ ಸಮಯದಲ್ಲಿ ಡ್ಯಾಗರ್‌ನಿಂದ ಎಡಭಾಗದ ಪಕ್ಕೆಗೆ ಬಲವಾಗಿ ಇರಿದು ಇಬ್ಬರು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಅಸ್ವಸ್ಥನಾದ ಗಣೇಶನನ್ನು ಚೀಕನಹಳ್ಳಿಯ ಹರೀಶ್ ಎಂಬವರು ಆಟೋದಲ್ಲಿ ಬೇಲೂರು ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಿಮ್ಸ್‌ಗೆ ಕರೆ ತರುವಾಗ ಮಾರ್ಗ ಮಧ್ಯೆಯೇ ಗಣೇಶ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವ ರೌಡಿಶೀಟರ್ ಮಧು ಕಿರಣ, ಗೌರಿ-ಗಣೇಶ ಹಬ್ಬಕ್ಕೆಂದು ಗ್ರಾಮಕ್ಕೆ ಬಂದು ಅರೇಹಳ್ಳಿಯಲ್ಲಿಯೇ ಇದ್ದ. ಮಧು ಈ ಹಿಂದೆ ಹಲವು ಅಪರಾಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಮಾರಕಾಸ್ತ್ರಗಳನ್ನು ಜೊತೆಯಲ್ಲಿಟ್ಟುಕೊಂಡೇ ಓಡಾಡುವುದು, ತನ್ನ ಪಟಾಲಂನೊಂದಿಗೆ ಸ್ವೇಚ್ಛಾಚಾ ರವಾಗಿ ಓಡಾಡುವುದು, ಈಜುಕೊಳದಲ್ಲಿ ಮದ್ಯ ಸೇವನೆ ಮಾಡುವ ದೃಶ್ಯಾವಳಿಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ವಾಟರ್‌ಮ್ಯಾನ್ ಮೇಲೆ ದರ್ಪತೋರಿ ಆತನ ಜೀವ ತೆಗೆದಿದ್ದಾನೆ. ದುಡಿಯುವ ಮಗನನ್ನು ಕಳೆದುಕೊಂಡು ಗಣೇಶ ಅವರ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಮೃತದೇಹವನ್ನು ಹಿಮ್ಸ್‌ನ ಶವಾಗಾರದಲ್ಲಿ ಶನಿವಾರ ಬೆಳಗ್ಗೆ ಮರಣೋತ್ತರ ಪರೀಕ್ಷೆ ನಡೆಸ ಲಾಯಿತು. ಮಧುಕಿರಣ ಮತ್ತು ರಘು ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಅರೇಹಳ್ಳಿ ಪೊಲೀ ಸರು ಅವರಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕಠಿಣ ಕ್ರಮಕ್ಕೆ ಆಗ್ರಹ: ಶಾಂತಿಯಿಂದ ಇದ್ದ ಗ್ರಾಮದಲ್ಲಿ ಮುಗª ನೀರುಗಂಟಿ ಕೊಲೆಗೈದ ರೌಡಿ ಶೀಟರ್, ಆತನ ಸಹಚರರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬೆಂಗಳೂ ರಿನ ಕೊಣನಕುಂಟೆ ಸೇರಿ ವಿವಿಧ ಠಾಣೆಗಳಲ್ಲಿ ಮಧು ವಿರುದ್ಧ ಕೊಲೆ, ಸುಲಿಗೆ, ಹತ್ಯೆ ಕೇಸು ದಾಖಲಾಗಿವೆ.