ಮಂಗಳೂರು: ತ್ರಿಪುರಾ ಮೂಲದ ಮಂಗಳೂರಿನ ವಾಸವಾಗಿದ್ದ ರಿಪನ್ ನಾಮ ಎಂಬುವರ ಪತ್ನಿ ಸುಮಿತಾ ರಾಣಿ ಸರ್ಕಾರ್ (23) ಮತ್ತು ರಿಯಾ ನಾಮ (6)ಎಂಬುವರು ನಾಪತ್ತೆಯಾಗಿದ್ದಾರೆ.
Advertisement
2 ತಿಂಗಳ ಹಿಂದೆ ತ್ರಿಪುರ ರಾಜ್ಯದಿಂದ ಹೆಂಡತಿ ಸಂಸಾರ ಸಮೇತ ಮಂಗಳೂರಿಗೆ ಬಂದು ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದರು. ಮೇ 23ರಂದು ಸೆಂಟ್ರಿಂಗ್ ಕೆಲಸಕ್ಕೆ ಹೋಗಿ ಮಧ್ಯಾಹ್ನ ಸುಮಾರು 12ಗಂಟೆ ವೇಳೆಗೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಪತ್ನಿ ಮತ್ತು ಮಗಳು ಇರಲಿಲ್ಲ. ಮೊಬೈಲ್ಗೆ ಕರೆಮಾಡಿದಾಗ ಸ್ವಿಚ್ಆಪ್ ಬಂದಿದೆ. ಈ ಕುರಿತಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.