Advertisement

Mangaluru: ಪ್ರಧಾನಿ ಮೋದಿ ರೋಡ್ ಶೋ ಗೆ ಅಣಿಯಾಗುತ್ತಿದೆ ಕಡಲ ನಗರಿ

11:00 AM Apr 12, 2024 | Team Udayavani |

ಮಂಗಳೂರು: ರವಿವಾರದಂದು ಮಂಗಳೂರು ನಗರದಲ್ಲಿ ನಡೆಯಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರೋಡ್ ಶೋ ಗೆ ಸಿದ್ದತೆಗಳು ಭರದಿಂದ ಸಾಗುತ್ತಿದ್ದು ಲೇಡಿಹಿಲ್ ನಿಂದ ಪಿವಿ ಎಸ್ ವೃತ್ತದವರೆಗೆ ಕಬ್ಬಿಣದ ತಡಬೇಲಿ ಹಾಕುವ ಕೆಲಸ ಆರಂಭಗೊಂಡಿದೆ.

Advertisement

ರೋಡ್ ಶೋ ಆರಂಭಗೊಳ್ಳುವ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವನ್ನು ಅಲಂಕರಿಸುವ ಕಾರ್ಯಗಳು, ವಿದ್ಯುತ್ ದೀಪ ಅಳವಡಿಕೆ ಮೊದಲಾದವುಗಳು ಯುದ್ದೋಪಾದಿಯಲ್ಲಿ ಸಾಗುತ್ತಿದೆ.

ಸಂಚಾರಿ ಪೊಲೀಸರು ಸಂಚಾರ ಬದಲಾವಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Roadshows: ಪ್ರವಾಸಗರಿಲ್ಲದೆ ಕಂಗೆಟ್ಟ ಮಾಲ್ಡೀವ್ಸ್.. ಭಾರತದಲ್ಲಿ ರೋಡ್ ಶೋ ನಡೆಸಲು ನಿರ್ಧಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next