Advertisement

ತ್ರಿಪುರಾ ಶಾಂತಿಯುತ ಮತದಾನ ಪೂರ್ಣ

10:08 PM Feb 16, 2023 | Team Udayavani |

ಅಗರ್ತಲಾ : ತ್ರಿಪುರಾ ವಿಧಾನಸಭೆಗೆ ಗುರುವಾರ ನಡೆದ ಮತದಾನ ಹೆಚ್ಚು ಕಡಿಮೆ ಶಾಂತಿಯುತವಾಗಿ ಮುಕ್ತಾಯವಾಗಿದೆ.ಚುನಾವಣಾ ಆಯೋಗ ನೀಡಿದ ಮಾಹಿತಿ ಪ್ರಕಾರ ಪ್ರಾಥಮಿಕ ಅಂದಾಜಿನ ಅನ್ವಯ ಶೇ.81 ಹಕ್ಕು ಚಲಾವಣೆಯಾಗಿದೆ.

Advertisement

ಅಂತಿಮ ಮತದಾನ ಪ್ರಮಾಣ ಶುಕ್ರವಾರ ಲಭ್ಯವಾಗಲಿದೆ. ಬ್ರೂ ಬುಡಕಟ್ಟು ಜನಾಂಗದ ವಲಸಿಗರು ಕೂಡ ರಾಜ್ಯದಲ್ಲಿ ಇದೇ ಪ್ರಪಥಮ ಬಾರಿಗೆ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

ರಾಜ್ಯದ ಹಲವೆಡೆ ಮತಗಟ್ಟೆಗಳಲ್ಲಿ ವಾಗ್ವಾದ, ಜಗಳ ನಡೆದ ಬಗ್ಗೆ ವರದಿಗಳಾಗಿವೆ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಮತಗಟ್ಟೆಯಲ್ಲಿ ಮರು ಮತದಾನಕ್ಕೆ ಒತ್ತಾಯ ಕೇಳಿ ಬಂದಿಲ್ಲ. 2018ರ ವಿಧಾನಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ, ಪ್ರಸಕ್ತ ಸಾಲಿನಲ್ಲಿ ವಶಪಡಿಸಿಕೊಳ್ಳಲಾಗಿರುವ ನಗದು 25 ಪಟ್ಟು ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next