Advertisement

ಅಧ್ಯಾದೇಶ ಮರು ಜಾರಿ

12:30 AM Jan 14, 2019 | |

ಹೊಸದಿಲ್ಲಿ: ತ್ರಿವಳಿ ತಲಾಖ್‌ ನಿಷೇಧಿಸಿ ಅಧ್ಯಾದೇಶವನ್ನು ಕೇಂದ್ರ ಸರಕಾರ ಮರುಜಾರಿಗೊಳಿಸಿದೆ. ಶನಿವಾರ ಈ ಸಂಬಂಧ ಅಧ್ಯಾದೇಶವನ್ನು ಪುನಃ ಹೊರಡಿಸಲಾಗಿದೆ. 

Advertisement

2018 ಸೆಪ್ಟಂಬರ್‌ನಲ್ಲಿ ಇದೇ ಅಧ್ಯಾದೇಶವನ್ನು ಹೊರಡಿಸಲಾ ಗಿತ್ತು. ಆದರೆ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಅಂಗೀಕಾರ ಗೊಂಡಿಲ್ಲದ ಹಿನ್ನೆಲೆಯಲ್ಲಿ ಪುನಃ ಅಧ್ಯಾದೇಶ ಜಾರಿಗೊಳಿಸುವ ಅನಿವಾರ್ಯ ಎದುರಾಗಿತ್ತು. ಲೋಕಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರಿಂದ ಮಸೂದೆ ಅನುಮೋದನೆ ಗೊಂಡಿತ್ತಾದರೂ ರಾಜ್ಯಸಭೆಯಲ್ಲಿ ವಿಪಕ್ಷಗಳ ಆಕ್ಷೇಪದಿಂದ ಅನು ಮೋದನೆ ಗೊಂಡಿಲ್ಲ.

ಅಧ್ಯಾದೇಶ ಪ್ರಕಾರ ತ್ರಿವಳಿ ತಲಾಖ್‌ ನೀಡುವುದು ಜಾಮೀನು ರಹಿತ ಅಪರಾಧವಾಗಿದ್ದು, ವಿಚಾರಣೆ ಆರಂಭಕ್ಕೂ ಮೊದಲೇ ಜಾಮೀನಿಗಾಗಿ ಮ್ಯಾಜಿಸ್ಟ್ರೇಟ್‌ಗೆ ಅರ್ಜಿ ಸಲ್ಲಿಸುವ ಅವಕಾಶ ಇರುತ್ತದೆ. ಆದರೆ ಪೊಲೀಸ್‌ ಸ್ಟೇಷನ್‌ನಲ್ಲಿ ಆರೋಪಿಗೆ ಜಾಮೀನು ನೀಡಲಾಗುವುದಿಲ್ಲ. ಪತ್ನಿಯ ವಾದ ಆಲಿಸಿದ ಅನಂತರ ಪತಿಗೆ ಜಾಮೀನು ನೀಡುವ ಬಗ್ಗೆ ಮ್ಯಾಜಿಸ್ಟ್ರೇಟ್‌ ನಿರ್ಧರಿಸಬಹುದಾಗಿದೆ. ಅಷ್ಟೇ ಅಲ್ಲ, ಪತ್ನಿಗೆ ಮಸೂದೆಯಲ್ಲಿ ಸೂಚಿಸಿದಂತೆ ಪರಿಹಾರ ನೀಡಲು ಪತಿ ಸಮ್ಮತಿಸಿದರೆ ಜಾಮೀನು ನೀಡಬಹುದಾಗಿದೆ.

ಮೆಡಿಕಲ್‌ ಕೌನ್ಸೆಲ್‌ ಅಧ್ಯಾದೇಶ
ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಬದಲಿಗೆ ನಿಯೋಜಿತ ಗವರ್ನರ್‌ಗಳ ಮಂಡಳಿಯಿಂದ ವೈದ್ಯಕೀಯ ಶಿಕ್ಷಣ ನಿರ್ವಹಣೆ ಮಾಡುವ ಅಧ್ಯಾದೇಶವನ್ನೂ ಕೇಂದ್ರ ಸರಕಾರ ಪುನಃ ಜಾರಿಗೊಳಿಸಿದೆ. ಒಟ್ಟಾರೆ ವೈದ್ಯಕೀಯ ಶಿಕ್ಷಣವನ್ನು ಬದಲಿಸುವ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆಗೆ ಸಂಸತ್‌ ಅನು ಮೋದನೆ ಲಭ್ಯವಾಗದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next