Advertisement

ವಿಶ್ವ ಅಂಡರ್‌ 20 ಅಥ್ಲೆಟಿಕ್‌: ಸೆಲ್ವ ತಿರುಮಾರನ್‌ಗೆ ಬೆಳ್ಳಿ

10:18 PM Aug 06, 2022 | Team Udayavani |

ಕಾಲಿ (ಕೊಲಂಬಿಯ): ಭಾರತೀಯ ಟ್ರಿಪಲ್‌ ಜಂಪರ್‌ ಸೆಲ್ವ ಪಿ.ತಿರುಮಾರನ್‌ ತನ್ನ ವೈಯಕ್ತಿಕ ಸಾಧನೆಯನ್ನು ಉತ್ತಮಪಡಿಸಿ ವಿಶ್ವ ಅಂಡರ್‌ 20 ಅಥ್ಲೆಟಿಕ್‌ ಕೂಟದಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ.

Advertisement

17ರ ಹರೆಯದ ತಿರುಮಾರನ್‌ 16.15 ಮೀ. ದೂರ ಹಾರಿ ಬೆಳ್ಳಿಯ ಸಾಧನೆ ಮಾಡಿದರು. ಅವರಿಗಿಂತ 2 ಸೆಂ.ಮೀ. ಕಡಿಮೆ ದೂರ ಹಾರಿದ ಎಸ್ತೋನಿಯದ ವಿಕ್ಟರ್‌ ಮೊರೊಜೋವ್‌ ಕಂಚು ಪಡೆದರು. ಜಮೈಕಾದ ಜೇಡರನ್‌ ಹಿಬ್ಬರ್ಟ್‌ 17.27 ಮೀ. ದೂರ ಹಾರಿ ಚಿನ್ನ ಗೆದ್ದರು. ಇದು ಚಾಂಪಿಯನ್‌ಶಿಪ್‌ ದಾಖಲೆಯಾಗಿದೆ. ತಿರುಮಾರನ್‌ ತನ್ನ ಎರಡನೇ ಪ್ರಯತ್ನದಲ್ಲಿ ಬೆಳ್ಳಿ ಜಯಿಸಿದ್ದರು.

ಭಾರತೀಯ ವನಿತಾ ತಂಡವು 4×400 ಮೀ. ರಿಲೇ ಸ್ಪರ್ಧೆಯಲ್ಲಿ ಫೈನಲಿಗೇರಿದೆ. ಸಮ್ಮಿ, ಪ್ರಿಯಾ ಮೋಹನ್‌, ರಜಿತಾ ಕುಂಜಾ ಮತ್ತು ರುಪಾಲ್‌ ಅವರನ್ನು ಒಳಗೊಂಡ ತಂಡವು ಮೂರನೇ ಹೀಟ್‌ನಲ್ಲಿ 3:34.18ಸೆ.ನಲ್ಲಿ ಗುರಿ ತಲುಪಿ ನಾಲ್ಕನೇ ಸ್ಥಾನ ಪಡೆದು ಫೈನಲಿಗೇರಿದರು.

ಒಲಿಂಪಿಕ್‌ ಚಾಂಪಿಯನ್‌ ನೀರಜ್‌ ಚೋಪ್ರಾ 2016ರಲ್ಲಿ ಪೋಲಂಡಿನಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪರ ಚಿನ್ನ ಗೆದ್ದ ಮೊದಲ ಅಥ್ಲೀಟ್‌ ಆಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next