ನವದೆಹಲಿ: ನೇಪಾಳದಿಂದ ಭಾರತಕ್ಕೆ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ನೇಪಾಳ, ಬಾಂಗ್ಲಾದೇಶ ಮತ್ತು ಭಾರತ ಸೇರಿದಂತೆ ಮೂರು ದೇಶಗಳ ನಡುವೆ ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದು ನೇಪಾಳ ಇಲೆಕ್ಟ್ರಿಸಿಟಿ ಅಥಾರಿಟಿ (NEA) ತಿಳಿಸಿದೆ.
ಇದನ್ನೂ ಓದಿ:Sirsi: ಬಸ್ಸಿನಲ್ಲಿ ಬಿಟ್ಟುಹೋದ ಬ್ಯಾಗ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬಂದಿ!
ನೇಪಾಳ, ಬಾಂಗ್ಲಾದೇಶದ ಮೂಲಕ ಭಾರತಕ್ಕೆ ವಿದ್ಯುತ್ ಸರಬರಾಜು ಮಾಡಲು ಔಪಚಾರಿಕವಾಗಿ ಮೂರು ದೇಶಗಳ ನಡುವೆ ಮಾತುಕತೆ ನಡೆದಿರುವುದಾಗಿ ನೇಪಾಳ ಇಲೆಕ್ಟ್ರಿಸಿಟಿ ಅಥಾರಿಟಿಯ ವಕ್ತಾರ ಸುರೇಶ್ ಭಟ್ಟಾರಾಯ್ ತಿಳಿಸಿರುವುದಾಗಿ ವರದಿಯಾಗಿದೆ.
ಮೊದಲ ಹಂತದಲ್ಲಿ 40 ಮೆಗಾ ವ್ಯಾಟ್ ವಿದ್ಯುತ್ ಅನ್ನು ನೇಪಾಳದಿಂದ ಬಾಂಗ್ಲಾದೇಶಕ್ಕೆ ರಫ್ತು ಮಾಡುವ ಕುರಿತು ಮಾತುಕತೆ ನಡೆದಿದೆ. ಈ ಬಗ್ಗೆ ಶೀಘ್ರದಲ್ಲೇ ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದು ತಿಳಿಸಿದ್ದಾರೆ.
ಆರಂಭಿಕವಾಗಿ ನೇಪಾಳದಿಂದ 40 ಮೆಗಾ ವ್ಯಾಟ್ ವಿದ್ಯುತ್ ಅನ್ನು ಖರೀದಿಸಲು ಬಾಂಗ್ಲಾದೇಶ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ನೇಪಾಳದಿಂದ ಬಾಂಗ್ಲಾದೇಶದ ಮೂಲಕ ಭಾರತಕ್ಕೆ ವಿದ್ಯುತ್ ಸರಬರಾಜು ಮಾಡುವ ಒಪ್ಪಂದಕ್ಕೆ ಮೂರು ದೇಶಗಳು ಶೀಘ್ರವೇ ಸಹಿ ಹಾಕಲಿವೆ ಎಂದು ನೇಪಾಳ ಇಲೆಕ್ಟ್ರಿಸಿಟಿ ಅಥಾರಿಟಿ ತಿಳಿಸಿದೆ.