Advertisement
ಮೂರನೇ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಮತ್ತೆ ಅಧಿಕಾರಕ್ಕೆ ಹಿಡಿಯುವ ಉದ್ದೇಶದಿಂದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮಾರ್ಚ್ 22ರ ತನಕ 90 ದಿನಗಳ ಫೇಸ್ ಬುಕ್ ಜಾಹಿರಾತುಗಾಗಿ ಪ್ರತಿಪಕ್ಷ ಬಿಜೆಪಿಗಿಂತ ಹೆಚ್ಚು ಹಣವನ್ನು ಖರ್ಚು ಮಾಡಿದೆ ಎಂದು ಮಾಹಿತಿ ಲಭ್ಯವಾಗಿದೆ.
Related Articles
Advertisement
ಪಶ್ಚಿಮ ಬಂಗಾಳದ ಆಡಳಿತ ತೃಣಮೂಲ ಕಾಂಗ್ರೆಸ್ ಪಕ್ಷ ಫೇಸ್ ಬುಕ್ ಜಾಹಿರಾತಿಗಾಗಿ 1.69 ಕೋಟಿ ರೂ. ನಷ್ಟು ಹಣವನ್ನು ಚುನಾವಣಾ ಪ್ರಚಾರ ಸಭೆಯ ಸಂದರ್ಭದಲ್ಲಿ ಖರ್ಚು ಮಾಡಿದೆ. ‘ಬಾಂಗ್ಲಾರ್ ಗೋರ್ಬೋ ಮಮತಾ’(ಬಂಗಾಳದ ಹೆಮ್ಮೆ ಮಮತಾ) ಹಾಗೂ ಕ್ಷೇತ್ರ ಮಟ್ಟದ ಜಾಹಿರಾತಾದ ‘ದಮ್ ದಮ್ ಎರ್ ಗಾರ್ಬೋ ಮಮತಾ’ ಜಾಹೀರಾತುಗಳನ್ನು ಹೊಂದಿದೆ.
ತೃಣಮೂಲದ ಡಿಜಿಟಲ್ ಜಾಹೀರಾತುಗಳನ್ನು ಭಾರತೀಯ ಪಾಲಿಟಿಕಲ್ ಆ್ಯಕ್ಶನ್ ಕಮಿಟಿ (ಐ-ಪಿಎಸಿ) ನಿರ್ವಹಿಸುತ್ತದೆ, ಇದು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಲ್ಲಿ ಪಕ್ಷಕ್ಕಾಗಿ ಇತರ ಅಭಿಯಾನಗಳನ್ನು ನಡೆಸಿದೆ.
ಓದಿ : ಸಿಎಂ ಕಾರಂತ ಬಡಾವಣೆ ಕೈಬಿಡುವ ಭರವಸೆ ನೀಡಿಲ್ಲ : ವಿಶ್ವನಾಥ್ ಸ್ಪಷ್ಟನೆ
ಇನ್ನು, “ಖೋಟಿಕಾರೋಕ್ ಮೋದಿ” (ಅಪಾಯಕಾರಿ ಮೋದಿ) ಹೆಸರಿನ ಮತ್ತೊಂದು ಫೇಸ್ ಬುಕ್ ಪೇಜ್ ಗಾಗಿ ರಾಜಕೀಯ ಜಾಹೀರಾತುಗಳಿಗಾಗಿ 33.12 ಲಕ್ಷಗಳನ್ನು ಖರ್ಚು ಮಾಡಿದೆ ಎಂದು ಡಾಟಾ ತಿಳಿಸಿದೆ. ರಾಜ್ಯ ಬಿಜೆಪಿ ಫೇಸ್ ಬುಕ್ ಜಾಹೀರಾತು ಖರ್ಚು ಸುಮಾರು. 25.31 ಲಕ್ಷ. ಇದು ಜಾಹೀರಾತು ಪ್ರಚಾರಗಳಾದ ‘ಅಮರ್ ಪರಿಬಾರ್ ಬಿಜೆಪಿ ಪರಿಬಾರ್’ (ನನ್ನ ಕುಟುಂಬ ಬಿಜೆಪಿ ಕುಟುಂಬ) ಮತ್ತು ‘ಆರ್ ನೋಯಿ ಅನ್ನಯ್’ (ಇನ್ಮುಂದೆ ಅನ್ಯಾಯವಿಲ್ಲ)ಗಳಿಗೆ ಖರ್ಚು ಮಾಡಿದ್ದಾಗಿದೆ.
ತೃಣಮೂಲದ ಫೇಸ್ ಬುಕ್ ಪೇಜ್ 1.3 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದರೆ, ಪಶ್ಚಿಮ ಬಂಗಾಳದ ಬಿಜೆಪಿ 1.7 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದೆ.
ಇನ್ನು, ಫೇಸ್ ಬುಕ್ ನಲ್ಲಿ ಜಾಹೀರಾತುಗಳಿಗಾಗಿ ರಾಜ್ಯ ಕಾಂಗ್ರೆಸ್ ಸುಮಾರು 5 ಲಕ್ಷ ಖರ್ಚು ಮಾಡಿದ್ದರೆ, ಎಡ ಪಕ್ಷಗಳು ಖರ್ಚು ಮಾಡಿದ ಮೊತ್ತ ತೀರಾ ಕಡಿಮೆ ಇದೆ ಎಂದ ಡಾಟಾ ತಿಳಿಸಿದೆ.
ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ತೋರಿಕೆಗೆ ಬರುವ ಹಾಗೆ ಎಂದೂ ಖರ್ಚು ಮಾಡುವುದಿಲ್ಲ. ಡಿಜಿಟಲ್ ಪ್ಲಾಟ್ ಫಾರ್ಮ್ ಗಳ ಜಾಹಿರಾತುಗಳಿಗೆ ಹೆಚ್ಚ್ಉ ಹಣಗಲನ್ನು ಖರ್ಚು ಮಾಡುತ್ತಾರೆ ಎಂದು ಸಾಮಾಜಿಕ ಜಾಲತಾಣಗಳ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಓದಿ : ಗುಡಿಸಲಿಗೆ ಬೆಂಕಿ : 5 ಲಕ್ಷ ರೂ. ನಗದು, ಚಿನ್ನಾಭರಣ ಸಹಿತ ಅಪಾರ ಹಾನಿ