Advertisement

ಪಶ್ಚಿಮಬಂಗಾಳ ಸ್ಥಳೀಯ ಚುನಾವಣೆ: ಮಮತಾ ಮೇಲುಗೈ, BJP ಪ್ರತಿಪಕ್ಷ!

02:35 PM Aug 17, 2017 | Team Udayavani |

ಕೋಲ್ಕತಾ: ಆಗಸ್ಟ್ 13ರಂದು ನಡೆದಿದ್ದ 7 ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕುತೂಹಲಕಾರಿ ಬೆಳವಣಿಗೆ ಎಂಬಂತೆ ಕೆಲವು ವರ್ಷಗಳ ಹಿಂದೆ ಶೂನ್ಯ ಸಾಧನೆಯಲ್ಲಿದ್ದ ಭಾರತೀಯ ಜನತಾ ಪಕ್ಷ ಈ ಬಾರಿ 2ನೇ ಸ್ಥಾನ ಪಡೆದಿದೆ. ಇದೀಗ ಬಿಜೆಪಿ ಪಶ್ಚಿಮಬಂಗಾಳದಲ್ಲಿ ವಿರೋಧ ಪಕ್ಷವಾಗಿದೆ!

Advertisement

ಭಾನುವಾರ ಪಶ್ಚಿಮಬಂಗಾಳದ 5 ಮುನ್ಸಿಪಲ್ ಸೇರಿದಂತೆ 7 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಗುರುವಾರ ಬೆಳಗ್ಗೆ ಮತಎಣಿಕೆ ನಡೆದಿತ್ತು. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಧುಪ್ ಗುರಿ ಮಹಾನಗರ ಪಾಲಿಕೆಯ 16 ಸ್ಥಾನಗಳಲ್ಲಿ 12ರಲ್ಲಿ ಜಯಭೇರಿ ಬಾರಿಸಿದೆ.

ಬುನಿಯಾದ್ ಪುರ್ ನ 14 ವಾರ್ಡ್ ಗಳಲ್ಲಿ ತೃಣಮೂಲ ಕಾಂಗ್ರೆಸ್ 13ರಲ್ಲಿ ಗೆದ್ದಿದೆ. ಕೂಪರ್ಸ್ಸ್ ಕ್ಯಾಂಪ್ ನ 12 ವಾರ್ಡ್ ಗಳಲ್ಲಿ ಟಿಎಂಸಿ ಜಯಭೇರಿ, ದುರ್ಗಾಪುರ್ 43 ವಾರ್ಡ್ ಗಳಲ್ಲಿ 33ರಲ್ಲಿ ಟಿಎಂಸಿ ಗೆಲುವು ಸಾಧಿಸಿದೆ. ಹಾಲ್ಡಿಯಾದ 29 ವಾರ್ಡ್ ಗಳೂ ಟಿಎಂಸಿ ಪಾಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next