ನವದೆಹಲಿ : ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಸೀರೆಯುಟ್ಟು ಫುಟ್ ಬಾಲ್ ಆಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಕೃಷ್ಣಾನಗರದಲ್ಲಿ ನಡೆದ ಎಂಪಿ ಟೂರ್ನಮೆಂಟ್ ನ ಫೈನಲ್ ಪಂದ್ಯಾವಳಿಗೆ ಆಗಮಿಸಿದ ಸಂಸದೆ ಸೀರೆಯಲ್ಲೇ ಫುಟ್ ಬಾಲ್ ಆಡಿದ್ದಾರೆ ಅಲ್ಲದೆ ಈ ಫೋಟೋ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರಿಂದ ಈ ಫೋಟೋ ಗೆ ಭಾರಿ ಮೆಚ್ಚುವೆ ವ್ಯಕ್ತವಾಗಿದೆ.
ಫೋಟೋದಲ್ಲಿ ಕಾಣುವಂತೆ ಕಿತ್ತಳೆ ಕೆಂಪು ಬಣ್ಣ ಮಿಶ್ರಿತ ಸೀರೆಯಲ್ಲಿ ಮಿಂಚಿದ ಸಂಸದೆ ಕಾಲಿಗೆ ಸ್ಪೋರ್ಟ್ಸ್ ಶೂ ಧರಿಸಿ, ಒಂದು ಚಿತ್ರದಲ್ಲಿ ಗೋಲು ಹೊಡೆಯುವ ಚಿತ್ರ ಕಂಡರೆ ಇನ್ನೊಂದರಲ್ಲಿ ಗೋಲ್ ಕೀಪರ್ ಆಗಿ ನಿಂತಿರುವ ಭಂಗಿಯಲ್ಲಿ ಚಿತ್ರವನ್ನು ಕಾಣಬಹುದುದಾಗಿದೆ.
ಮಹುವಾ ಮೊಯಿತ್ರಾ ಅವರ ಫುಟ್ ಬಾಲ್ ಕ್ರೇಝ್ ಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಸೇರಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Related Articles
ಇದನ್ನೂ ಓದಿ : ಇಡಿ ಕಚೇರಿಗೆ ಡಿಕೆ ಶಿವಕುಮಾರ್ ಹಾಜರು: ಕಿಡಿ ಕಾರಿದ ಸಹೋದರ