Advertisement

ಕ್ರಿಮಿನಲ್‌ಗ‌ಳ ಮಟ್ಟಹಾಕಲು ಟ್ರಿಗರ್‌ ಟೆಕ್ನಿಕ್‌

11:51 AM Dec 10, 2018 | |

ಬೆಂಗಳೂರು: ಸಮಾಜದ ಸ್ವಾಸ್ಥ್ಯ ಕದಡುತ್ತಿರುವ ಕ್ರಿಮಿ ನಲ್‌ಗ‌ಳನ್ನು ಮಟ್ಟ ಹಾಕಲು “ಗುಂಡೇಟಿನ’ ಅಸ್ತ್ರವನ್ನು ನಗರ ಪೊಲೀಸರು ಈ ವರ್ಷ ಪ್ರಬಲವಾಗಿ ಬಳಸಿದ್ದಾರೆ!

Advertisement

ಕಳೆದ ಜನವರಿಯಿಂದ ಭಾನುವಾರ ಮುಂಜಾನೆ ನಡೆದ ರೈಸ್‌ಫ‌ುಲ್ಲಿಂಗ್‌ ವಂಚನೆಕೋರ, ದರೋಡೆಕೋರ ರಾಜೇಶ್‌ ಅಲಿಯಾಸ್‌ ಪ್ರತಾಪ್‌ ಸೇರಿದಂತೆ ಒಟ್ಟು 26 ಮಂದಿ ಕ್ರಿಮಿನಲ್‌ಗ‌ಳಿಗೆ ಗುಂಡೇಟಿನ ಮೂಲಕ ಉತ್ತರ ನೀಡಿದ್ದಾರೆ. ಒಂದೇ ತಿಂಗಳ ಅವಧಿಯಲ್ಲಿ ನಗರದಲ್ಲಿ ನಡೆದ ಆರನೇ ಶೂಟೌಟ್‌ ಪ್ರಕರಣ ಇದಾಗಿದೆ.

ಜುಲೈ ತಿಂಗಳಲ್ಲಿ ವ್ಯಕ್ತಿಯೊಬ್ಬರ ಮನೆಯಿಂದ 50 ಲಕ್ಷ. ರೂ. ದರೋಡೆ ಮಾಡಿ ತಲೆ ಮರೆಸಿಕೊಂಡಿದ್ದ ರಾಜೇಶ್‌ ಹಾಗೂ ಆತನ ಭಾಮೈದ ನಂದಕುಮಾರ್‌ ಕಳೆದ ನಾಲ್ಕು ತಿಂಗಳಿನಿಂದ ತಲೆಮರೆಸಿಕೊಂಡಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಅನ್ನಪೂರ್ಣೇಶ್ವರಿ ನಗರ ಠಾಣೆಯ ಈ ಹಿಂದಿನ ಇನ್ಸ್‌ಪೆಕ್ಟರ್‌ಗೆ ಜೀವ ಬೆದರಿಕೆ ಹಾಕಿದ್ದ.
 
ಕೆಲ ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ ರಾಜೇಶ್‌, ಭಾನುವಾರ ಮುಂಜಾನೆ ವಿಶ್ವೇಶ್ವರಯ್ಯ ಲೇಔಟ್‌ನ 8ನೇ ಬ್ಲಾಕ್‌ನಲ್ಲಿದ್ದಾನೆ ಎಂಬ ಮಾಹಿತಿ ಮೇರೆಗೆ ಪಿಎಸ್‌ಐ ರಾಜಶೇಖರಯ್ಯ ನೇತೃತ್ವದ ತಂಡ ಅಲ್ಲಿಗೆ ತೆರಳಿತ್ತು. ಈ ವೇಳೆ ಪೊಲೀಸರನ್ನು ಕಂಡ ಕೂಡಲೇ ಪರಾರಿ ಯಾಗಲು ಯತ್ನಿಸಿದ ರಾಜೇಶ್‌, ಹಿಡಿಯಲು ಹೋದ ಪೇದೆ ಮಹೇಶ್‌ ಕೈಗೆ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಶರಣಾಗುವಂತೆ ಪಿಎಸ್‌ಐ ರಾಜಶೇಖರಯ್ಯ ಗಾಳಿಯಲ್ಲಿ ಗುಂಡು ಹಾರಿಸಿ ಸೂಚಿಸಿದರೂ ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪ್ರಾಣ ರಕ್ಷಣೆ ಸಲುವಾಗಿ
ಆತನ ಬಲಗಾಲಿಗೆ ಸರ್ವೀಸ್‌ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಬಂಧಿಸಿದ್ದು. ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರಿನಲ್ಲೇ ಊಟ, ನಿದ್ದೆ, ವಾಸ್ತವ್ಯ!: ರಾಜೇಶ್‌ ಅಲಿಯಾಸ್‌ ಪ್ರತಾಪ್‌ ವಿರುದ್ಧ ರೈಸ್‌ಪುಲ್ಲಿಂಗ್‌ ಹೆಸರಲ್ಲಿ ವಂಚನೆ, ವನ್ಯಜೀವಿ ಸಂರಕ್ಷಣಾ ಕಾಯಿದೆ, ಪೋಕ್ಸೋ, ದರೋಡೆ ಕೃತ್ಯಗಳಲ್ಲಿ ಭಾಗಿಯಾಗಿದ್ದ ಸಂಬಂಧ ಕೊಪ್ಪ ಪೊಲೀಸ್‌ ಠಾಣೆ, ಶಿವಮೊಗ್ಗ ಸೇರಿ ಹಲವು ಕಡೆ 8 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. 10 ವರ್ಷಗಳ ಹಿಂದೆ ಹುಬ್ಬಳ್ಳಿ ಪೊಲೀಸರ ಕಸ್ಟಡಿಯಿಂದಲೇ ತಪ್ಪಿಸಿಕೊಂಡಿದ್ದು. ಪ್ರತಿ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗೆ ಬರುತ್ತಲೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಈ ಪ್ರಕರಣದಲ್ಲಿ ಪೊಲೀಸರಿಗೆ ದಿಕ್ಕುತಪ್ಪಿಸಲು ಎಲ್ಲಿಯೂ ಆತ ವಾಸ್ತವ್ಯ ಹೂಡುತ್ತಿರಲಿಲ್ಲ. ಕ್ಯಾರವಾನ್‌ ರೀತಿ¿ ವಾಹನದಲ್ಲಿ ಊಟ, ನಿದ್ದೆ, ಮಾಡುತ್ತಿದ್ದ. ಮಂಗಳೂರು, ಚೆನೈ, ಮುಂಬೈ ಸೇರಿ ಹಲವೆಡೆ ತಿರುಗಾಡಿ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
 
ಗುಂಡೇಟು ತಿಂದ ಆರೋಪಿಗಳು ಪಶ್ಚಿಮ ವಿಭಾಗ: ಮೈಸೂರು ಮೂಲದ ರೌಡಿಶೀಟರ್‌ ಕಿರಣ್‌ ಅಲಿಯಾಸ್‌ ಕಿರ್ಬ, ಮೋಸ್ಟ್‌ ವಾಂಟೆಡ್‌ ಸರಚೋರ ಅಚ್ಯುತ್‌ಕುಮಾರ್‌, ಮುಜಾಫ‌ರ್‌ ನಗರದ ಸರಕಳ್ಳ ಶಾಕೀರ್‌, ರೌಡಿಶೀಟರ್‌ಳಾದ ಬಬ್ಲಿ, ದಿವ್ಯತೇಜ್‌, ರೂಪೇಶ್‌ ಅಲಿಯಾಸ್‌ ನಿರ್ಮಲ್‌
ಕುಮಾರ್‌, ದರೋಡೆಕೋರ ರಾಜೇಶ್‌ ಸೇರಿದಂತೆ ಹಲವು ಕ್ರಿಮಿನಲ್‌ಗ‌ಳು. 

ಉತ್ತರ ವಿಭಾಗ: ಕುಖ್ಯಾತ ಬಾವಾರಿಯಾ ಗ್ಯಾಂಗ್‌ನ ರಾಮ್‌ಸಿಂಗ್‌ ರೌಡಿಶೀಟರ್‌ಗಳಾದ ಬಸವೇಶ್ವರ ನಗರದ ರಫಿಕ್‌, ಸುಧಾಕರ್‌ ಕೇಂದ್ರ ಅಪರಾಧ ವಿಭಾಗ (ಸಿಸಿಬಿ): ಕುಖ್ಯಾತ ರೌಡಿಶೀಟರ್‌ ಸೈಕಲ್‌ ರವಿ ಹಾಗೂ ಜಾರ್ಜ್‌ ಈಶಾನ್ಯ ವಿಭಾಗ: ಮಧ್ಯಪ್ರದೇಶದ ನಟೋರಿಯಸ್‌
“ಭಿಲ್‌ ಗ್ಯಾಂಗ್‌’ ಮೂವರು, ರೌಡಿಶೀಟರ್‌ ಮನೋಜ್‌ ಅಲಿಯಾಸ್‌ ಕೆಂಚ, ಅಶ್ರಫ್ ಖಾನ್‌ ವೈಟ್‌ಫಿಲ್ಡ್‌ ವಿಭಾಗ: ತಮಿಳುನಾಡಿನ ಧರ್ಮ ಪುರಿಯ ಶಂಕರ್‌,ಸೆಲ್ವಕುಮಾರ್‌ರ್‌, ರೌಡಿಶೀಟರ್‌ ನವೀನ್‌ ಅಲಿಯಾಸ್‌ ಅಪ್ಪು ದಕ್ಷಿಣ ವಿಭಾಗ: ಕೆಂಬತ್ತಹಳ್ಳಿ ಪರಮೇಶ್‌ ಅಲಿಯಾಸ್‌ ಪರ್ಮಿ ಹಾಗೂ ಸಂತೋಷ್‌, ಬಿಟಿಎಸ್‌ ಮಂಜ ಪೂರ್ವ ವಿಭಾಗ: ಸರಚೋರ ಸೈಯದ್‌ ಸುಹೇಲ್‌, ಕುಖ್ಯಾತ ಮನೆಗಳ್ಳ ದಿನೇಶ್‌ ಬೋರ 

Advertisement
Advertisement

Udayavani is now on Telegram. Click here to join our channel and stay updated with the latest news.

Next